ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ರಾಜ್ಯದ ಶಾಸಕರುಗಳು ಮತ್ತು ಅವರ ಕುಟುಂಬದವರು ಆರೋಗ್ಯಕ್ಕಾಗಿ ಲಕ್ಷ ಲಕ್ಷ ಹಣ ಖರ್ಚಾಗಿರುವ ಮಾಹಿತಿ ಲಭ್ಯವಾಗಿದೆ. ಆರ್ಟಿಐ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಕೇಳಿರುವ ಮಾಹಿತಿಯಲ್ಲಿ ಶಾಸಕರು ಆರೋಗ್ಯಕ್ಕೆ ಸಂಬಂಧಿಸಿ ಮಾಡಿರುವ ಖರ್ಚುಗಳ ವಿವರ ಲಭ್ಯವಾಗಿದೆ.
2019-2020, 2020-2021, 2021ರ ನಂತರದ ಆರ್ಥಿಕ ವರ್ಷದ ಹಣಕಾಸಿನ ವಿವರಗಳಿಗೆ ಸಂಬಂಧಿಸಿದ ಅರ್ಜಿದಾರರಿಗೆ ಸಲ್ಲಿಸಿದ ಮಾಹಿತಿಯ ಪ್ರಕಾರ ಶಾಸಕರ ದುಬಾರಿ ಖರ್ಚುಗಳ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್, ವಿಧಾನಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಸರ್ಕಾರವು ಬಹಳ ವರ್ಷಗಳಿಂದ ರಾಜ್ಯದ ವಿಧಾನಸಭೆಗೆ ಆಯ್ಕೆ ಆಗುವ ಜನಪ್ರತಿನಿಧಿಗಳಿಗೆ ಮತ್ತು ಅವರ ಕುಟುಂಬ ವರ್ಗದ ಎಲ್ಲಾ ಸದಸ್ಯರುಗಳಿಗೆ ಅನಾರೋಗ್ಯದ ಸಂದರ್ಭದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ಸಾರ್ವಜನಿಕರ ತೆರಿಗೆ ಹಣದಿಂದ ಚಿಕಿತ್ಸೆ ಕೊಡಿಸುತ್ತಿರುವುದು ತಿಳಿದಿರುವ ವಿಚಾರವೇ ಆಗಿದೆ.
ರಾಜ್ಯದಲ್ಲಿ ಪ್ರತಿ ವರ್ಷವೂ ಒಂದೆಲ್ಲ ಒಂದು ಸಂಕಷ್ಟದ ಸಮಯಗಳು ಎದುರಾಗಲಿದೆ. ಅದರಲ್ಲೂ ಅನಾವೃಷ್ಟಿ ಅಥವಾ ಅತಿವೃಷ್ಟಿ, ಸಾಂಕ್ರಾಮಿಕ ರೋಗಗಳು ಜನರನ್ನು ಕಾಡುತ್ತಲೇ ಇರುತ್ತವೆ. ಇದರ ನಿರ್ವಹಣೆಗೆ ಸಾಕಷ್ಟು ಹಣಕಾಸಿನ ನೆರವು ಬೇಕಾಗುತ್ತದೆ. ಇಂತಹ ಸಂದರ್ಭದಲ್ಲೂ ಕೂಡ ಜನಪ್ರತಿನಿಧಿಗಳು ತಮ್ಮ ಕುಟುಂಬದ ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಉಪಯೋಗಿಸಿಕೊಳ್ಳದೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿಕೊಳ್ಳುತ್ತಿರುವುದು ಪ್ರಶ್ನಾರ್ಹವಾಗಿದೆ.
ಹೀಗಾಗಿ ಎಲ್ಲಾ ವಿಧಾನಸಭಾ ಸದಸ್ಯರುಗಳಿಗೆ ಆರೋಗ್ಯ ವಿಮೆಯನ್ನು ಮಾಡಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಅನಾವಶ್ಯಕವಾಗಿ ಬಳಕೆ ಮಾಡುವುದನ್ನು ತಡೆಹಿಡಿಯಬೇಕಾಗಿದೆ ಎಂದು ಪತ್ರ ಬರೆದಿದ್ದಾರೆ.
ಎಷ್ಟು ಹಣ ಬಳಕೆ..?
- ಮುನಿಯಪ್ಪ, ಕಾಂಗ್ರೆಸ್ ಶಾಸಕ- ₹ 14,70,679 ವೆಚ್ಚ (2020-2021)
- ರಾಜೂಗೌಡ, ಬಿಜೆಪಿ ಶಾಸಕ – ₹12,89,146 ವೆಚ್ಚ (2020-2021)
- ಎನ್.ಲಿಂಗಣ್ಣ, ಬಿಜೆಪಿ ಶಾಸಕ – ₹ 11, 31, 023 ವೆಚ್ಚ (2019-2020)
- ಎಲ್.ನಾಗೇಂದ್ರ, ಬಿಜೆಪಿ ಶಾಸಕ, – ₹ 7,53,054 ವೆಚ್ಚ (2019-2020)
- ಬಿ.ಎಮ್ ಸುಕುಮಾರ್ ಶೆಟ್ಟಿ, ಬಿಜೆಪಿ ಶಾಸಕ – ₹03,66,861 ವೆಚ್ಚ (2020-2021)
- ಎಸ್.ರಾಮಪ್ಪ, – ₹03,23,013 ವೆಚ್ಚ (2020-2021)
- ಕೆ. ಮಾಡಾಳ್ ವಿರೂಪಾಕ್ಷಪ್ಪ, ಬಿಜೆಪಿ ಶಾಸಕ – ₹ 2,36,415 ವೆಚ್ಚ (2019-2020)
- ಜೆ.ಸಿ.ಮಾಧುಸ್ವಾಮಿ, ಸಚಿವ – ₹1,10,274 ವೆಚ್ಚ (2019-2020)
- ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ಬಿಜೆಪಿ ಶಾಸಕ – ₹3,32,454 ವೆಚ್ಚ (2021 ಏಪ್ರಿಲ್‌ನಿಂದ)
- ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಶಾಸಕ- ₹8,59,976 ವೆಚ್ಚ (2020-2021)
- ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಶಾಸಕ- ₹4,27,311 ವೆಚ್ಚ (2021 ಏಪ್ರಿಲ್ ನಿಂದ