ಕೋವಿಡ್‌ ನಿಯಮ ಉಲ್ಲಂಘನೆ: ವಾರ್ಡ್‌ ಪ್ರವೇಶಿಸಿದ ಎಬಿವಿಪಿ ಕಾರ್ಯಕರ್ತರು!

ಡೆಹ್ರಾಡೂನ್:‌ ಕೋವಿಡ್‌ ಸೋಂಕಿತ ದಾಖಲಾಗಿರುವ ರೋಗಿಗಳಿದ್ದ ವಾರ್ಡ್‌ಗೆ ತೆರಳಿ ರೋಗಿಗಳ ಅಳವಡಿಸಿದ್ದ ಆಕ್ಸಿಜನ್‌ ಪೈಪ್‌ ತೆಗೆದು ಜ್ಯೂಸ್‌ ವಿತರಿಸಿದ ಎಬಿವಿಪಿ ಕಾರ್ಯಕರ್ತರ ವರ್ತೆನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಆರ್‌ಎಸ್‌ಎಸ್‌ ಅಂಗಸಂಸ್ಥೆಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಡೂನ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್‌ ವಾರ್ಡ್‌ ಒಳಗೆ ಪ್ರವೇಶಿಸಿ ಆರೈಕೆ ಮಾಡುತ್ತಿರುವುದು ಈಗ ಚರ್ಚೆಗೆ ಒಳಪಟ್ಟಿದೆ.

ಇದನ್ನು ಓದಿ: ಲಸಿಕೆ! ಲಸಿಕೆ!! ಲಸಿಕೆ!!!

ಪಿಪಿಇ ಕಿಟ್‌ ಧರಿಸಿಕೊಂಡು ಅದರ ಮೇಲೆ ಎಬಿವಿಪಿಯ ಸ್ಟಿಕರ್‌ ಅಂಟಿಸಿಕೊಂಡಿದ್ದ ಕಾರ್ಯಕರ್ತರು ಕೋವಿಡ್‌ ವಾರ್ಡ್‌ ಪ್ರವೇಶಿಸಿ ರೋಗಿಗಳ ಆಕ್ಸಿಜನ್‌ ಮಾಸ್ಕ್‌ ಅನ್ನು ತೆಗೆದು ಜ್ಯೂಸ್‌ ನೀಡುತ್ತಿರುವ ವೀಡಿಯೊ ಸಾಮಾಜಿಕ ತಾಣದಾದ್ಯಂತ ಹೆಚ್ಚು ವೈರಲ್‌ ಆಗುತ್ತಿದೆ.

ಡೂನ್‌ ಮೆಡಿಕಲ್‌ ಕಾಲೇಜ್‌ ನ ಪ್ರಿನ್ಸಿಪಾಲ್‌ ಅಶುತೋಷ್‌ ಸಯಾನಾ ಮಾತನಾಡಿ “ಎಬಿವಿಪಿಯ ಕಾರ್ಯಕರ್ತರು ನಮ್ಮಲ್ಲಿ ಆಸ್ಪತ್ರೆಯ ಆಡಳಿತಕ್ಕೆ ಸಹಾಯ ಮಾಡುತ್ತೇವೆಂದು ಅನುಮತಿ ಕೇಳಿದ್ದರು. ಆದರೆ ಕೋವಿಡ್‌ ವಾರ್ಡ್‌ ಗೆ ಪ್ರವೇಶಿಸಲು ಅವರಿಗೆ ಅನುಮತಿ ನೀಡಿರಲಿಲ್ಲ” ಎಂದು ಸ್ಪಷ್ಟಪಡಿಸಿದರು.

ಕೋವಿಡ್‌ ಮಾರ್ಗಸೂಚಿಗಳ ಪ್ರಕಾರ, ಆರೋಗ್ಯ ಕಾರ್ಯಕರ್ತರಲ್ಲದೇ ಬೇರೆ ಯಾರೂ ಕೋವಿಡ್‌ ರೋಗಿಗಳಿರುವ ವಾರ್ಡ್‌ ಪ್ರವೇಶಿಸುವುದು ನಿಷಿದ್ಧವಾಗಿದೆ.

ಇದನ್ನು ಓದಿ : ವಿಫಲಗೊಂಡಿರುವ ‘ವಿಶ್ವ ಗುರು’

” ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡುತ್ತೇವೆಂದು ಅನುಮತಿ ಕೇಳಿದ್ದರು. ಕೋವಿಡ್‌ ವಾರ್ಡ್‌ ಹೈ ರಿಸ್ಕ್‌ ಪ್ರದೇಶ ಆಗಿರುವ ಕಾರಣ ಅಲ್ಲಿಗೆ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ” ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ಈ ವಿಚಾರವು ಬೆಳಕಿಗೆ ಬರುತ್ತಿದ್ದಂತೆಯೇ ಆಸ್ಪತ್ರೆಯ ಮುಖ್ಯಸ್ಥರು ಎಬಿವಿಪಿ ಕಾರ್ಯಕರ್ತರಿಗೆ ಆಸ್ಪತ್ರೆ ಪ್ರವೇಶವನ್ನು ವೈದ್ಯಕೀಯ ಮೇಲ್ವಿಚಾರಕ ಕೆ.ಸಿ.ಪಂತ್‌ ನಿಷೇಧಿಸಿದ್ದಾರೆ. ವಾರ್ಡ್‌ಗೆ ಪ್ರವೇಶಿಸಿರುವುದರ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಅಶುತೋಶ್‌ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *