ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನೋಟಿಸ್

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿಲ್ಲದ ಕೋವಿಡ್ ಲಸಿಕೆ ಪ್ರಮಾಣಪತ್ರ ಒದಗಿಸಬೇಕೆಂದು ಕೋರಿ ಕೊಟ್ಟಾಯಂ ನಿವಾಸಿ ಎಂ ಪೀಟರ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ  ಕೈಗೆತ್ತಿಕೊಂಡ ಕೇರಳ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಎರಡು ವಾರಗಳೊಳಗಾಗಿ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ನ್ಯಾಯಮೂರ್ತಿ ಪಿ ಬಿ ಸುರೇಶ್ ಕುಮಾರ್ ಹೇಳಿದ್ದಾರೆ. ಅರ್ಜಿದಾರರು ಅಮೆರಿಕಾ, ಇಂಡೊನೇಷ್ಯಾ, ಇಸ್ರೇಲ್, ಜರ್ಮನಿ ಸಹಿತ ವಿವಿಧ ದೇಶಗಳ ಲಸಿಕೆ ಪ್ರಮಾಣಪತ್ರಗಳನ್ನು ಕೂಡ ಹಾಜರುಪಡಿಸಿದರಲ್ಲದೆ ಈ ಪ್ರಮಾಣಪತ್ರಗಳು ಅಗತ್ಯ ಮಾಹಿತಿ ಹೊಂದಿವೆಯೇ ಹೊರತು ಸರಕಾರಗಳ ಮುಖ್ಯಸ್ಥರ ಭಾವಚಿತ್ರಗಳನ್ನು ಹೊಂದಿಲ್ಲ ಎಂದರು.

ತಾನು ವಿವಿಧ ಸ್ಥಳಗಳಿಗೆ ಪ್ರಯಾಣಿಸುವಾಗ ಈ ಪ್ರಮಾಣಪತ್ರ ಕೊಂಡೊಯ್ಯಬೇಕಿದೆ ಹಾಗೂ ಅದರಲ್ಲಿರುವ  ಫೋಟೋ ಯಾವುದೇ ಮಹತ್ವ ಹೊಂದಿಲ್ಲ  ಹಾಗೂ ಅಗತ್ಯವಿಲ್ಲ ಹಾಗೂ ಸರಕಾರ ದೃಢ ನಿಲುವು ತಾಳಿದರೆ, ಯಾವುದೇ ಭಾವಚಿತ್ರವಿಲ್ಲದ ಫೋಟೋ ನೀಡಬಹುದಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

“ಸಾಂಕ್ರಾಮಿಕದ ವಿರುದ್ಧದ ಹೋರಾಟವನ್ನು ಪ್ರಚಾರ ಅಭಿಯಾನವನ್ನಾಗಿಸಲಾಗಿದೆ ಹಾಗೂ ಒನ್-ಮ್ಯಾನ್ ಶೋ ದಂತೆ ತೋರುತ್ತಿದೆ. ಪ್ರಧಾನಿಯ ಚಿತ್ರವಿಲ್ಲದ ಪ್ರಮಾಣಪತ್ರ ಹೊಂದುವ ಎಲ್ಲಾ ಅಧಿಕಾರ ತಮಗಿದೆ” ಎಂದೂ ಅರ್ಜಿದಾರ ಹೇಳಿದ್ದಾರೆ. ಕೇಂದ್ರ ಸರಕಾರ ಅಥವಾ ಪ್ರಧಾನಿ ಏನಾದರೂ ವಿಶೇಷ ಮಾಡಿದ್ದಾರೆಂದು ಹೇಳಲು ಸಾಧ್ಯವಿಲ್ಲ, ಬದಲು ಅವರ ಕರ್ತವ್ಯವನ್ನಷ್ಟೇ ಮಾಡಿದ್ದಾರೆ, ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

Donate Janashakthi Media

Leave a Reply

Your email address will not be published. Required fields are marked *