ಕೋವಿಡ್ ಲಸಿಕೆ: ಎರಡನೇ ಡೋಸ್‌ಗೆ ಮಾತ್ರ ಆದ್ಯತೆ

ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೋವಿಡ್‌ ಲಸಿಕೆಗಳು ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಕೋವಿಡ್‌ ಮೊದಲನೆ ಡೋಸ್‌ ಲಸಿಕೆ ನೀಡುವುದನ್ನು ನಿಲ್ಲಿಸಲಾಗಿದ್ದು ಉಳಿದಿರುವ ಲಸಿಕೆಗಳನ್ನು ಎರಡನೇ ಡೋಸ್‌ ಪಡೆಯುವವರಿಗೆ ಮಾತ್ರ ನೀಡಲು ಆದೇಶಿಸಲಾಗಿದೆ.

ರಾಜ್ಯದಲ್ಲಿ ಇರುವ ಎಲ್ಲಾ ಲಸಿಕೆಗಳು ಅಂದರೆ ಕೇಂದ್ರ ಸರಕಾರ ನೀಡಿದ ಹಾಗೂ ರಾಜ್ಯ ಸರಕಾರ ಖರೀದಿಸಿದ 2ನೇ ಡೋಸ್‌ ಪಡೆಯಲು ಬಾಕಿ ಇರುವವರಿಗೆ ಮಾತ್ರ ನೀಡಲು ತಿಳಿಸಲಾಗಿದೆ.

ಇದನ್ನು ಓದಿ: ಕೋವಿಡ್ ಕೇರ್ ಸೆಂಟರ್ : ಸಮರ್ಪಕ ನಿರ್ವಹಣೆಗೆ ಸೂಚನೆ

ಅಲ್ಲದೆ, 18 ರಿಂದ 44 ವರ್ಷ ದವರಿಗೆ ನೀಡಲು ನಿಗದಿಯಾಗಿದ್ದ ಲಸಿಕೆ ಅಭಿಯಾನವನ್ನು ನಿಲ್ಲಿಸಲಾಗಿದೆ. ಅಲ್ಲದೆ, ಈಗಾಗಲೇ ಲಸಿಕೆ ಪಡೆಯಲು ಸಮಯ ನಿಗದಿಪಡಿಸಿಕೊಂಡಿರುವವರಿಗೆ ಲಸಿಕೆ ನೀಡದಿರಲು ಆದೇಶಿಸಲಾಗಿದೆ. ಈಗಾಗಲೇ ಮೊದಲನೆ ಡೋಸ್‌ ಪಡೆದಿಕೊಂಡಿರುವ 18 ರಿಂದ 44 ವರ್ಷದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ 2ನೇ ಡೋಸ್‌ ಲಸಿಕೆ ಪಡೆಯಬಹುದಾಗಿದೆ.

ಮೊದಲನೇ ಡೋಸ್‌ ಲಸಿಕೆಗಳಾದ ಕೋವಿಶೀಲ್ಡ್‌ ಪಡೆದ 8 ವಾರಗಳು ಪೂರ್ಣಗೊಳಿಸಿರುವ ಮತ್ತು ಕೋವ್ಯಾಕ್ಸಿನ್‌ ಮೊದಲನೇ ಡೋಸ್‌ ಪಡೆದು 6 ವಾರಗಳು ಪೂರ್ಣಗೊಳಿಸಿರುವ ಫಲಾನುಭವಿಗಳಿಗೆ ಎರಡನೇ ಡೋಸ್‌ ಲಸಿಕೆಯನ್ನು ಮೊದಲು ನೀಡಬೇಕೆಂದು ತಿಳಿಸಲಾಗಿದೆ.

ಇದನ್ನು ಓದಿ: ಅಗತ್ಯ ಇರುವವರಿಗೆ ಪ್ರಾಣವಾಯು ನೀಡಲು ಸಿದ್ಧವಾದ ಬಿಎಂಟಿಸಿ ಬಸ್

ಈ ಕುರಿತು ಅಧಿಕೃತವಾಗಿ ಸುತ್ತೋಲೆಯನ್ನು ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ.

Donate Janashakthi Media

Leave a Reply

Your email address will not be published. Required fields are marked *