ಕೋವಿಡ್‌: ಕರ್ನಾಟಕ-48,296, ಬೆಂಗಳೂರಿನಲ್ಲಿ 26,756 ಹೊಸ ಪ್ರಕರಣ

ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಂದೇ ದಿನ 48,296 ಕೋವಿಡ್‌ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇಂದು 217 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, ಇದುವರೆಗೆ ಒಟ್ಟು 15,523 ಮಂದಿ ನಿಧನರಾಗಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ 15,23,142 ಆಗಿದೆ. ಇದರಲ್ಲಿ ಸದ್ಯ ಶೇ.25.44ರಷ್ಟು ಸಕ್ರಿಯ ಪ್ರಕರಣಗಳು ಇವೆ.

ಇದನ್ನು ಓದಿ: ರೆಮ್ಡೆಸಿವಿರ್‌ ಚುಚ್ಚುಮದ್ದಿನ ಹಾಹಾಕಾರದ ಹಿಂದಿರುವ ಷಡ್ಯಂತ್ರವೇನು?

ಬೆಂಗಳೂರಿನಲ್ಲಿ ಇಂದು ಅತಿ ಹೆಚ್ಚು ಅಂದರೆ 26,756 ಕೋವಿಡ್ ಪ್ರಕರಣಗಳು ಹೊಸದಾಗಿ ದಾಖಲಾಗಿವೆ. ಸೋಂಕಿತರ ಸಂಖ್ಯೆ 7,56,740ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2,59,058 ಸಕ್ರಿಯ ಪ್ರಕರಣಗಳು ಇವೆ. ಇಂದು 93 ಮಂದಿ ಸಾವಿಗೀಡಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 6375 ಮಂದಿಯಾಗಿದೆ.

ಇಂದು ದಾಖಲೆಯ 14,884 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 11,24,909ಕ್ಕೆ ಏರಿಕೆಯಾಗಿದೆ. 3,82,693 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ.

ಇದನ್ನು ಓದಿ: ಲಸಿಕೆ ಕೊರತೆ : 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಬರಬೇಡಿ

ಹೊಸದಾಗಿ 1,89,793 ಮಂದಿಯ ಮಾದರಿ ಪರೀಕ್ಷೆ ಮಾಡಲಾಗಿದೆ. ಒಟ್ಟಾರೆ 95,81,682 ಮೊದಲನೆ ಹಾಗೂ ಎರಡನೇ ಕೊರೊನಾ ಲಸಿಕೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಾವಿರಕ್ಕು ಹೆಚ್ಚಿನ ಪ್ರಕರಣ ದಾಖಲಾದ ಜಿಲ್ಲೆಗಳ ವಿವರ

ಬಳ್ಳಾರಿ – 1282, ದಕ್ಷಿಣ ಕನ್ನಡ -1205, ಕಲಬುರಗಿ -1256, ಮಂಡ್ಯ -1348, ಮೈಸೂರು-3500, ತುಮಕೂರು- 1801 ಆಗಿದೆ.

Donate Janashakthi Media

Leave a Reply

Your email address will not be published. Required fields are marked *