ಬೆಳಗಾವಿ: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ, ಪರಿಸ್ಥಿತಿ ನೋಡಿ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಮಾತಾನಾಡಿದ ಅವರು, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ವಿಚಾರವಾಗಿ ಮಾತನಾಡಿ, ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುತ್ತೇವೆ ಎಂದರು. ಸದ್ಯಕ್ಕೆ ಕಡ್ಡಾಯ ಮಾಡಿಲ್ಲ, ಸಲಹೆ ಕೊಟ್ಟಿದ್ದೇವೆ. ಮಾಸ್ಕ್ ಧರಿಸುವ ಮೂಲಕ ಜನರ ರಕ್ಷಣೆಗೆ ನಾವೇ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಬೂಸ್ಟರ್ ಡೋಸ್ ವೇಸ್ಟ್ ಆಗಿರುವ ವಿಚಾರವಾಗಿ ಮಾತನಾಡಿ, ಲಕ್ಷಾಂತರ ಡೋಸ್ ವೇಸ್ಟ್ ಬಗ್ಗೆ ಗೊತ್ತಿಲ್ಲ. ಸ್ವಲ್ಪ ಮಟ್ಟಿಗೆ ಲಸಿಕೆ ವೇಸ್ಟ್ ಆಗಿದೆ ಎಂದರು.
ಇದನ್ನೂ ಓದಿ : ಭೀಕರ ಕೋವಿಡ್ ಸಂದರ್ಭದಲ್ಲೂ ಕಾರ್ಪೋರೇಟ್ ಬಂಡವಾಳ ಲಾಭ ಮಾಡಿದೆ: ಡಾ. ಹೇಮಲತಾ
ಮೊದಲ ಎರಡು ಡೋಸ್ ಲಸಿಕೆಗೆ ಕೊಟ್ಟಷ್ಟು ಆಸಕ್ತಿ ಇವಾಗ ಜನರು ತೋರಿಸುತ್ತಿಲ್ಲ. ಕೋವಿಡ್ ಹೋಗಿದೆ ಎಂಬ ಮನಸ್ಥಿತಿಯಲ್ಲಿ ಜನರು ಇದ್ದಾರೆ. ಇವಾಗ ಚೀನಾ ಮತ್ತು ಕೆಲವು ದೇಶಗಳ ಪರಿಸ್ಥಿತಿ ನೋಡಿ ಮತ್ತೆ ಜನರು ಆಸಕ್ತಿಯಿಂದ ಲಸಿಕೆ ಪಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ತಾಲ್ಲೂಕಿನಲ್ಲಿ ಕೋವಿಡ್ ಆಸ್ಪತ್ರೆ ಇರುತ್ತದೆ ಮತ್ತು ಖಾಸಗಿ ಆಸ್ಪತ್ರೆಗಳು ಕೂಡಾ ಕೋವಿಡ್ -19 ರೋಗಿಗಳಿಗೆ ಕೆಲವು ಹಾಸಿಗೆಗಳನ್ನು ಕಾಯ್ದಿರಿಸುತ್ತವೆ. ಶೇ. 80 ರಷ್ಟು ಜನರು ಇನ್ನೂ ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ. ಅಂತಹವರು ಕೂಡಲೇ ಡೋಸ್ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.