ರಾಜ್ಯ ಬಿಜೆಪಿಯ ಸೌಜನ್ಯ ನ್ಯಾಯದ ಹೋರಾಟದ ಕಾರಣ ಏನು ಎಂಬುದನ್ನು ಬಹಿರಂಗಪಡಿಸಲಿ

ಮಂಗಳೂರು: ರಾಜ್ಯ ಬಿಜೆಪಿಯ ಸೌಜನ್ಯ ನ್ಯಾಯದ ಹೋರಾಟದ ಕಾರಣ ಏನು ಎಂಬುವುದನ್ನು ಬಹಿರಂಗಪಡಿಸಲಿ ಎಂದು ಮುನೀರ್ ಕಾಟಿಪಳ್ಳಿ ಅವರು, ಪತ್ರಿಕಾಗೋಷ್ಟಿಯೊಂದರಲ್ಲಿ  ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಸೌಜನ್ಯ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸಿ : ಮುಖ್ಯಮಂತ್ರಿಗೆ ನಿಯೋಗ ಮನವಿ

“ಸೌಜನ್ಯ ಪ್ರಕರಣ ಕೇಂದ್ರದ ಅಂಗಣದಲ್ಲಿ ಇದೆ. ಸಿಬಿಐ ತನಿಖೆ ಮುಗಿದಿದೆ ವಿನಃ ರಾಜ್ಯಕ್ಕೆ ಹಿಂದಿರುಗಿಸಿಲ್ಲ. ನಾವೆಲ್ಲ ರಾಜ್ಯ ಸರಕಾರವನ್ನು ವಿಶೇಷ ತನಿಖಾ ದಳ ರಚಿಸಿ, ಸರಿಯಾದ ತನಿಖೆ ಮಾಡಿ ಎಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಯಾಕಂದ್ರೆ ಕೇಂದ್ರದ ಮೋದಿ ಸರಕಾರದಲ್ಲಿ ನಮಗೆ ವಿಶ್ವಾಸ ಇಲ್ಲ, ರಾಜ್ಯದ ಸಿದ್ದರಾಮಯ್ಯ ಸರಕಾರದಲ್ಲಿ ವಿಶ್ವಾಸ ಇದೆ ಎಂಬ ಕಾರಣಕ್ಕಾಗಿ, ಕೇಂದ್ರದಿಂದ ಮರಳಿ ಪಡೆದು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸುತ್ತಿರುವುದಾಗಿದೆ.”

ಈಗ ರಾಜ್ಯ ಬಿಜೆಪಿ ಇಂದು ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಹೀಗಿರುವಾಗ ಅವರು ಸ್ಪಷ್ಟಪಡಿಸಬೇಕಲ್ಲವೇ , ನಿಮಗೂ ನಮ್ಮಂತೆಯೇ ಮೋದಿಯಲ್ಲಿ ವಿಶ್ವಾಸ ಇಲ್ಲದಾಯಿತೇ, ಅದಕ್ಕಾಗಿ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿರುವುದೇ ? ಮೋದಿಯಲ್ಲಿ ವಿಶ್ವಾಸ ಇದೇಯೆಂದಾದರೆ ಸಿಬಿಐ ಮರುತನಿಖೆಗೆ ಕೇಂದ್ರವನ್ನು ಒತ್ತಾಯಿಸಬಹುದಲ್ಲವೇ ? ಸಂಸದರಲ್ಲವೇ ನೀವೂ ? ರಾಜ್ಯ ಸರಕಾರವನ್ನೇ ನೀವೂ ಕೂಡಾ ಒತ್ತಾಯಿಸುತ್ತಿರುವುದರ ಕಾರಣ ಬಹಿರಂಗ ಪಡಿಸಿ” ಎಂದು ಮುನೀರ್ ಕಾಟಿಪಳ್ಳಿ ನಳಿನ್‌ಕುಮಾರ್‌ ಕಟೀಲ್‌ರನ್ನು ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *