ಬೆಂಗಳೂರು ಫೆ 04: ಕೋರ್ಟ್ ಆವರಣದಲ್ಲಿ ಸಾಹಿತಿ ಭಗವಾನ್ ಮುಖಕ್ಕೆ ವಕೀಲೆಯೊಬ್ಬರು ಮಸಿ ಬಳಿದಿರುವ ಘಟನೆ ನಗರದ 2 ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ವಕೀಲೆ ಮೀರಾ ರಾಘವೇಂದ್ರ ರವರು ಅಕ್ಟೋಬರ್ 10,2020 ರಂದುನ ಖಾಸಗಿ ದೂರು ದಾಖಲಿಸಿದ್ದರು. ಇಂದು ಈ ಪ್ರಕರಣ ಸಂಬಂಧ ಜಾಮೀನು ವಿಚಾರಣೆಗೆ ಭಗವಾನ್ ಕೋರ್ಟ್ಗೆ ಆಗಮಿಸಿದ್ದರು. ಈ ವೇಳೆ ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ.
ಬುದ್ಧಿಜೀವಿ, ಧರ್ಮ ವಿರೋಧಿ #ಫ್ರೊಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. #ಜೈಶ್ರೀರಾಮ್🚩🚩🚩 pic.twitter.com/t0iF36VR3x
— Meera Raghavendra (@MeeraRaghavendr) February 4, 2021
ಬುದ್ಧಿಜೀವಿ, ಧರ್ಮ ವಿರೋಧಿ ಪ್ರೊ ಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. ಜೈಶ್ರೀರಾಮ್ ಎಂದು ಮೀರಾ ರಾಘವೇಂದ್ರ ಟ್ವೀಟ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಈ ಘಟನೆ ಸಂಬಂಧ ಪ್ರೋ ಭಗವಾನ್ ರವರು ಮೀರಾ ವಿರುದ್ಧ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೂ ಈ ಘಟನೆಗೆ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದಾವೆ ಹೂಡಿವುದು ಅವರವರ ಹಕ್ಕು, ಆದರೆ ಈ ರೀತಿ ಮಸಿಬಳಿಯುವುದು ಶೋಭೆಯಲ್ಲ ಮೀರಾರವರು ಬಿಜೆಪಿ ಮತ್ತು ಆರ್.ಎಸ್.ಎಸ್ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಆ ಮೂಲಕ ಅವರ ಸಂಸ್ಕೃತಿ ಎಂತದ್ದು ಎಂದು ತೋರಿಸಿದ್ದಾರೆ. ಅವರೊಬ್ಬ ವಕೀಲರಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕೆ ಹೊರತು ಕಾನೂನು ಕೈಗೆ ತೆಗೆದುಕೊಂಡಿದ್ದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದ್ದಾರೆ.
ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರನ್ನು ಬಾರ್ ಕೌನ್ಸಿಲ್ ನಿಂದ ಹೊರ ಹಾಕಬೇಕು. ಅದಕ್ಕೂ ಮೊದಲು, ಸ್ವಯಂ ಪೊಲೀಸ್ ಅಥವಾ ನ್ಯಾಯಾಲಯವೇ ಮೀರಾ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬೇಕು. ಯಾಕೆಂದರೆ ಮೀರಾ ಮಸಿ ಬಳಿದದ್ದು ವಕೀಲರ ವೃತ್ತಿ ಸಂಹಿತೆಗೆ. ಕೋರ್ಟಿನಂಗಳದಲ್ಲಿ ಸಮವಸ್ತ್ರ ಧರಿಸಿರುವುದನ್ನೇ ಮರೆತು ಪ್ರೊ.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ವಕೀಲರ ವೃತ್ತಿಯ ವಿರುದ್ಧ ಎಸಗಿರುವ ಅನಾಚಾರ ಎಂದು ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಆರೋಪಿಸಿದ್ದಾರೆ.