ಬೆಂಗಳೂರು: ಹಾಲು ಹೆಚ್ಚು ಸಿಗಲು ದನಕ್ಕೆ ಮೇವು ಹಾಕಬೇಕೋ ಕತ್ತೆಗೆ ಮೇವು ಹಾಕಬೇಕೋ? ನಮ್ ಸರಕಾರಗಳು ಕತ್ತೆಗೆ ಮೇವು ಹಾಕಿ ದನದ ಹಾಲು ಸಿಗುತ್ತದೆ ಅಂತ ಕಾಯುತ್ತಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಕುಟುಕಿದರು.
ಮೂರು ದಿನಗಳ ‘ದುಡಿಯುವ ಜನತೆಯ ಮಹಾಧರಣಿʼ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೆಸ್ಲಾ ಕಾರಿಗೆ ತೆರಿಗೆ ಕಡಿತ ಮಾಡುತ್ತೇವೆ ಎಂದು ಮೋದಿ ಸರ್ಕಾರ ಒಪ್ಪಿಕೊಂಡಿದೆ. ಸಣ್ಣ ರೈತರು ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಅವರ ಮಕ್ಕಳಿಗೆ ಉದ್ಯೋಗ ನೀಡಲು ತಯಾರಿಲ್ಲ. ಭಾರತ್ ಮಾತಾಕಿ ಜೈ ಎನ್ನುತ್ತಾರೆ, ಆದರೆ ಭಾರತ ಮಾತೆಯ ಪುತ್ರನಿಗೆ ಖಾಯಂ ಉದ್ಯೋಗ ನೀಡುತ್ತಿಲ್ಲ. ಅಂಬಾನಿ ಅದಾನಿ ಗಂಡ ಹೆಂಡತಿ ಜಗಳ ಆದರೆ ನರೇಂದ್ರ ಮೋದಿ ಓಡಾಡುತ್ತಾರೆ ಎಂದು ಆರೋಪಿಸಿದರು. ಸೃಷ್ಟಿ
ಇದನ್ನೂ ಓದಿ:ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್
ಕನಿಷ್ಠ ಬೆಂಬಲ ಬೆಲೆ ನೀಡುತ್ತೇವೆ ಎಂದು ಲಿಖಿತವಾಗಿ ಬರೆದು ನೀಡಿದ್ದರೂ, ಅದನ್ನು ನೀಡಲು ಇವರಿಗೆ ದುಡ್ಡಿಲ್ಲ. ಆದರೆ ಮೊಬೈಲ್ ಸಂಸ್ಥೆ ಸ್ಯಾಮ್‌ಸ್ಯಾಂಗ್‌ಗೆ ಪ್ರೊಡಕ್ಷನ್ ಇನ್ಸೆಟಿವ್ ನೀಡುತ್ತಿದೆ. ಅಂದರೆ ಈ ವರೆಗೆ 2,48,000 ಕೋಟಿ ಪ್ರೊಡಕ್ಷನ್ ಇನ್ಸೆಟಿವ್ ಸರ್ಕಾರ ನೀಡಿದೆ. ಆದರೆ ರೈತರಿಗೆ ಬೆಂಬಲ ಬೆಲೆ ನೀಡಲು ಇವರ ಬಳಿ ದುಡ್ಡಿಲ್ಲ. ಅಂದರೆ ಇವರು ಕತ್ತೆಗೆ ಮೇವು ಹಾಕುತ್ತಿದ್ದಾರ ಅಥವಾ ಹಸುವಿಗೆ ಮೇವು ಹಾಕುತ್ತಿದ್ದಾರೆ. ನಮ್ಮ ಬದುಕನ್ನು ಕೇಳುತ್ತಿದ್ದಾರೆ, ಆದರೆ ಅದು ನಾವು ನೀಡುವುದಿಲ್ಲ ಎಂದು ನಾವು ಹೇಳಬೇಕಿದೆ ಎಂದರು.
ನಿರುದ್ಯೋಗದ ವಿರುದ್ಧ ಹೋರಾಟ ಮಾಡಬೇಕು ಎಂದರೆ ಉದ್ಯೋಗ ಮೂಲಭೂತ ಹಕ್ಕಾಗಬೇಕು. ಕತ್ತೆಗೆ ಮೇವು ಹಾಕಿ ಹಸು ಹಾಲು ನೀಡಬೇಕು ಎಂದು ಹಿಂಸೆ ನೀಡುವವರನ್ನು ನಾವು ಒದ್ದೋಡಿಸಬೇಕು. ಕಾರ್ಪೋರೇಟ್ ಕುಳಗಳ ಸೊಂಟ ಮುರಿವ ಶಕ್ತಿ ರೈತ ಕಾರ್ಮಿಕ ಚಳವಳಿಗೆ ಇದೆ ಎಂದು ಹೇಳಿದರು.
ಇದನ್ನೂ ಓದಿ:ಮಹಾಧರಣಿ| ನಮ್ಮ ಶತ್ರುಗಳ ಹೃದಯಗಳಲ್ಲಿ ಭಯ ಬಿತ್ತುವ ಹೋರಾಟ ನಾವು ಕಟ್ಟಬೇಕಾಗಿದೆ-ವಿಜೂ ಕೃಷ್ಣನ್
ಈಗ ನಾವೂ ‘ಚಲೇ ಜಾವ್’ ಚಳುವಳಿಯನ್ನ ಮಾಡಬೇಕಿದೆ: ಎಸ್.ಆರ್ ಹಿರೇಮಠ್
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ‘ಪೂರ್ಣ ಸ್ವರಾಜ್ಯ’ ಎಂಬ ಪ್ರತಿಜ್ಞೆಯನ್ನು ಘೋಷಿಸಿದ್ದರು. ಅದರ ಉದ್ದೇಶ, ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಯುವ ಬದುಕನ್ನ ಕಟ್ಟಿಕೊಳ್ಳಬೇಕೆಂಬುದಾಗಿತ್ತು. ಯಾವ ಸರ್ಕಾರ ಜನರನ್ನು ಶೋಷಣೆ ಮಾಡುತ್ತದೆಯೋ, ಅಂತಹ ಸರ್ಕಾರವನ್ನು ಕಿತ್ತೊಗೆಯಬೇಕು.ಈಗ ನಾವೂ ‘ಚಲೇ ಜಾವ್’ ಚಳುವಳಿಯನ್ನ ಮಾಡಬೇಕಿದೆ ಎಂದು ಹಿರಿಯ ಹೋರಾಟಗಾರ ಎಸ್.ಆರ್ ಹಿರೇಮಠ್ ಹೇಳಿದ್ದಾರೆ.
“ಅಂಬೇಡ್ಕರ್ ಅವರು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸರ್ಕಾರಗಳು ಜನಪರವಾದ ನೀತಿಗಳನ್ನು ತರಬೇಕು ಎಂದು ಹೇಳಿದ್ದಾರೆ. ಆದರೆ, ಅವರ ಆಶಯಕ್ಕೆ ವಿರೋಧವಾಗಿ ನೀತಿಗಳು ಜಾರಿಯಾಗುತ್ತಿವೆ. ಅದಾನಿ, ಅಂಬಾನಿಗಳಂತಹ ಬಂಡವಾಳಿಗರ ಸಂಪತ್ತು ಹೆಚ್ಚುತ್ತಿವೆ. ಸುಳ್ಳು ಭರವಸೆಗಳನ್ನು ನೀಡಿ, ಜನರನ್ನು ಸರ್ಕಾರಗಳು ಯಾಮಾರಿಸುತ್ತಿವೆ” ಎಂದರು.
“ಈಗ ಎರಡನೇ ಸ್ವಾತಂತ್ರ್ಯ ಹೋರಾಟವನ್ನ ನಾವೆಲ್ಲರೂ ಮಾಡಬೇಕಾಗಿದೆ. ಕೋಮುವಾದಿ, ಬಂಡವಾಳಶಾಹಿ ಪರವಾದ ಬಿಜೆಪಿ ಸರ್ಕಾರವನ್ನು ಸೋಲಿಸಬೇಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆ. ಆದರೆ, ಅವರು ಮುಂದೆ ಮತ್ತೆ ಮುನ್ನೆಲೆಗೆ ಬರುತ್ತಾರೆ. ಹೀಗಾಗಿ, ಸುದೀರ್ಘ ಹೋರಾಟಗಳು ಕೋಮುವಾದಿ, ಬಂಡವಾಳಶಾಹಿಗಳ ವಿರುದ್ಧ ನಡೆಯಬೇಕಿದೆ. ರಾಷ್ಟ್ರವನ್ನ ಕಟ್ಟುವಲ್ಲಿ ನಾವೆಲ್ಲರೂ ದುಡಿಯಬೇಕಿದೆ” ಎಂದು ಎಸ್.ಆರ್ ಹಿರೇಮಠ್ ಹೇಳಿದ್ದಾರೆ. ಸೃಷ್ಟಿ
ಎಲ್ಲಾ ಸಂಘಟನೆಗೆ ಬೆನ್ನೆಲುಬು ಅಗಿ ನಿಂತವರು ಮಹಿಳೆಯರು: ಮೀನಾಕ್ಷಿ ಬಾಳಿ
ಎಲ್ಲಾ ಸಂಘಟನೆಗೆ ಬೆನ್ನೆಲುಬು ಅಗಿ ನಿಂತವರು ಮಹಿಳೆಯರು. ಮೋದಿ ಸರ್ಕಾರದಲ್ಲಿ ಅತೀ ಹೆಚ್ಚು ಸಂಕಟಕ್ಕೆ ಒಳಗಾದವರು ಮಹಿಳೆಯರಾಗಿದ್ದಾರೆ. ಅದು ಉನ್ನಾವೊ, ಹತ್ರಾಸ್, ಬಿಲ್ಕೀಸ್ ಪ್ರಕರಣ ಇರಬಹುದು. ಮಹಿಳೆಯರು ಇರುವುದು ಭೋಗಿಸುವುದಕ್ಕೆ ಎಂದು ಈ ಸರ್ಕಾರ ಹೇಳುತ್ತಿದೆ. ಅತ್ಯಾಚಾರಿಗನ್ನು ಬಿಡುಗಡೆ ಮಾಡಿ ಪೇಡ ತಿಂದು ಈ ಸರ್ಕಾರ ಸಂಭ್ರಮಿಸುತ್ತದೆ ಎಂದು ಜನವಾದಿ ಮಹಿಳಾ ಸಂಘಟನೆ ನಾಯಕರಾದ ಮೀನಾಕ್ಷಿ ಬಾಳಿ ಹೇಳಿದರು.
ಮಹಾಧರಣಿಯಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಬೆವರಿದೆ. ಮಹಿಳೆಯರ ಪ್ರಶ್ನೆಗಳು ಬಹಳ ವಿಶಿಷ್ಠವಾದ ಪ್ರಶ್ನೆಗಳಾಗಿವೆ. ದುಡಿವ ವರ್ಗದ ವಿಮೋಚನೆಯಿಂದ ಮಹಿಳೆಯರ ವಿಮೋಚನೆಯಾಗುತ್ತದೆ. ಮೋದಿ ಸರ್ಕಾರ ಮನುವಾದಿ ಸರ್ಕಾರವಾಗಿದೆ. ಹೆಣ್ಣು ಸ್ವತಂತ್ರವಲ್ಲ ಎಂದು ಮನುವಾದ ಸ್ಪಷ್ಟವಾಗಿ ಹೇಳುತ್ತದೆ. ಬಾಬಾ ಸಾಹೇಬರು ಒಮ್ಮೆ ಓದಿ ಮನುವಾದವನ್ನು ಸುಟ್ಟು ಹಾಕಿದರು, ಆದರೆ ನಾವೇನಾದರೂ ಅದನ್ನು ಓದಿದರೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸುಟ್ಟು ಹಾಕಲಿದ್ದೇವೆ ಎಂದರು.
ಕುಸ್ತಿಪಟುಗಳ ಮೇಲೆ ಅತ್ಯಾಚಾರ ಎಸಗಿದ ಬ್ರಿಜ್ ಭೂಷಣ್ ಹಿಂದೆ ಮೋದಿ ಸರ್ಕಾರವಿದೆ. ನಾಟಕಕಾರ ಮೋದಿ, ನೌಟಂಕಿ ಸಾಲಾ ಮೋದಿ. ಮೋದಿ ಜಾದೂಗಾರ ಆಗಿದ್ದಾರೆ, ಅವರ ಬುಟ್ಟಿ ತುಂಬಾ ಹಾವುಗಳಿವೆ. ಮಹಿಳೆಯೆಂದರೆ ಬ್ರೆಡ್ ಹಿಂದೆ ನಾಯಿಗಳಲ್ಲ. ಮೋದಿಯ ರಾಜಕೀಯ ವಿನಾಶ ಇರುವುದು ಮಹಿಳೆಯಿಂದಲೇ ಆಗುತ್ತದೆ. ಆರೆಸ್ಸಸ್ ಎಂಬ ರಾಷ್ಟ್ರೀಯ ಸರ್ವನಾಶ ಸಮಿತಿ ನಾಶ ಮಾಡುವವರೆಗೆ ನಮಗೆ ಉಳಿಗಾಲವಿಲ್ಲ. ನಮ್ಮ ಕಷ್ಟಕ್ಕೆ ಕಾರಣ ನಮ್ಮ ಹಿಂದಿನ ಕರ್ಮ ಫಲವಲ್ಲ, ನಮ್ಮನ್ನು ಆಳುವ ಪುಡಾರಿಗಳೇ ಕಾರಣ ಎಂದರು.ಸೃಷ್ಟಿ
ವಿಡಿಯೋ ನೋಡಿ:ದುಡಿಯುವ ಜನರ ಮಹಾಧರಣಿ | ಸಂಘರ್ಷ