ಕೊರೊನಾ ಸೋಂಕಿನಿಂದ ಕಾಂಗ್ರೆಸ್​ ಶಾಸಕ ಬಿ.ನಾರಾಯಣ ರಾವ್​ ಸಾವು

 

ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಸವ ಕಲ್ಯಾಣ ಕಾಂಗ್ರೆಸ್ಶಾಸಕ  ಬಿ ನಾರಾಯಣ ರಾವ್ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ

ಸೋಂಕಿಗೆ ತುತ್ತಾಗಿದ್ದ ಬಸವ ಕಲ್ಯಾಣದ ಶಾಸಕರು ಕಳೆದೆರಡು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟ ಸಮಸ್ಯೆ ಎದುರಾದ ಹಿನ್ನಲೆ ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಗಂಭೀರಗೊಂಡಿದ್ದು, ಬಹು ಅಂಗಾಗ ವೈಫಲ್ಯದಿಂದ  ಸಾವನ್ನಪ್ಪಿದ್ದಾರೆ. 66 ವರ್ಷದ ನಾರಾಯಣರಾವ್ ಅವರಿಗೆ ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆ ಕೂಡ ಇತ್ತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ನಿನ್ನೆ ಅವರನ್ನು ಭೇಟಿಯಾಗಿದ್ದ ಕೆಪಿಸಿಸಿ ಉಪಾಧ್ಯಕ್ಷ ಈಶ್ವರ್​ ಖಂಡ್ರೆ ತಿಳಿಸಿದ್ದರು.

ಇನ್ನು ನಿನ್ನೆಯಷ್ಟೇ ಕೊರೋನಾ ಸೋಂಕಿಗೆ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್​ ಅಂಗಡಿ ಸಾವನ್ನಪ್ಪಿದ್ದು, ಇಂದು ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯುತ್ತಿದೆ. ನಾಲ್ಕು ದಿನಗಳ ಹಿಂದೆ ಮತ್ತೊಬ್ಬ ಬಿಜೆಪಿ ನಾಯಕ ರಾಜ್ಯಸಭೆ ಸದಸ್ಯ ಅಶೋಕಗಗ ಗಸ್ತಿ ಸಾವನ್ನಪ್ಪಿದ್ದರು.

ಕಾಂಗ್ರೆಸ್​ ಶಾಸಕರ ಸಾವಿಗೆ ಪಕ್ಷ ಸೇರಿದಂತೆ ಹಲವು ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಿದ್ದ  ನಾರಾಯಣರಾವ್,  ಬಿಜೆಪಿಯ  ಮಲ್ಲಿಕಾರ್ಜುನ, ಜೆಡಿಎಸ್​ನ ಪಿ. ಜಿ. ಆರ್. ಸಿಂಧ್ಯಾ  ವಿರುದ್ಧ 61,425 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *