ಕೊರೊನಾ ಹೆಚ್ಚಳಕ್ಕೆ ಮೋದಿ ಕಾರಣ: ರಾಜೀನಾಮೆ ನೀಡಿ

ನವದೆಹಲಿ: ಇಡೀ ದೇಶದಲ್ಲಿ ಕೊರೊನಾ ಹೆಚ್ಚಳಕ್ಕೆ ಪ್ರಧಾನ ನರೇಂದ್ರ ಮೋದಿ ಅನುಸರಿಸುತ್ತಿರುವ ಕ್ರಮಗಳೇ ಕಾರಣವಾಗಿವೆ ಹಾಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಕೂಗು ಆರಂಭವಾಗಿದೆ.

ಟ್ವಿಟ್ಟರ್‌ ನಲ್ಲಿ  #ResignModi (‘ಮೋದಿ ರಾಜೀನಾಮೆ ನೀಡಿ’) ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಕೊರೊನಾ ಉಲ್ಬಣಕ್ಕೆ ಸೂಕ್ತವಾದ ನಿರ್ದಿಷ್ಠ ಕ್ರಮಗಳನ್ನು ಕೈಗೊಳ್ಳಲು ಮುಂದಾಗ ದೇಶದ ಪ್ರಧಾನಿಗಳು ರಾಜೀನಾಮೆ ನೀಡಲು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಶದಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸಿದೆ. ಎರಡು ಲಕ್ಷಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ದಾಖಲಾಗುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಮ್ಲಜನಕವಿಲ್ಲದೇ ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ. ರಾಜ್ಯಗಳು ಚಿಕಿತ್ಸೆಗೆ ರೆಮ್ಡೆಸಿವಿರ್ ಔಷಧಿಯಿಲ್ಲ, ಲಸಿಕೆ ಇಲ್ಲ ಎಂದು ದೂರುತ್ತಿವೆ. ಆದರೆ ನರೇಂದ್ರ ಮೋದಿ ಮಾತ್ರ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹಾಗಾಗಿ ದೇಶದ ಆಡಳಿತ ನಿರ್ವಹಣೆಯಲ್ಲಿ ಅಸಮರ್ಥರಾಗಿರುವ ನರೇಂದ್ರಮೋದಿ ಕೂಡಲೇ ರಾಜೀನಾಮೆ ನೀಡಲು ಟ್ವಿಟರ್‌ನಲ್ಲಿ ಜೋರಾಗಿ ಕೇಳಿಬರುತ್ತಿದೆ.

ಅದೇ ರೀತಿಯಲ್ಲಿ ದೇಶದ ಪ್ರಮುಖರು ಸಹ ಕೊರೊನಾ ತಡೆಗಟ್ಟುವಲ್ಲಿ ಮುಂದಾಗದ ಪ್ರಧಾನಿಗಳು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಯೋಜನೆಗಳನ್ನು ರೂಪಿಸುತ್ತಿಲ್ಲ. ಈ ಸಂದರ್ಭದಲ್ಲಿಯೂ ರಾಜಕಾರಣಕ್ಕೆ ಮುಂದಾಗಿರುವ ಮೋದಿ ಆರೋಪಗಳ ಸುರಿಮಳೆಗೈದಿದ್ದಾರೆ.

ಇವರ ಆಡಳಿತ ನಿರ್ವಹಣೆಯ ಲೋಪದಿಂದಾಗಿ ಎಲ್ಲರೂ ತೊಂದರೆಗೆ ಒಳಗಾಗಿದ್ದಾರೆ. ಯಾರ ಬದುಕಿನಲ್ಲೂ ಸಂತೋಷವಿಲ್ಲ. ರೈತರು, ವಿದ್ಯಾರ್ಥಿಗಳು, ವ್ಯಾಪಾರ ವಹಿವಾಟು ಎಲ್ಲವೂ ಸಂತಸದಿಂದ ಇಲ್ಲ. ಹಾಗಾಗಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೋವಿಡ್‌ ನಿಂದ ಸಾವಿಗೀಡಾಗುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಇದಕ್ಕಾಗಿ ಮರಣ ಹೊಂದಿದವರ ಅಂತ್ಯಕ್ರಿಯೆಗೆ ದೇಶದ ವಿವಿಧ ಜಿಲ್ಲೆಗಳಲ್ಲಿನ ಸ್ಮಶಾನಗಳಲ್ಲಿ ಸಾಕಷ್ಟು ಒತ್ತಡಗಳು ಎದುರಾಗುತ್ತಿವೆ. ಇದರಿಂದಾಗಿ ಸೂಕ್ತವಾದ ವ್ಯವಸ್ಥೆಗಳಾಗುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.

ಗಗನಕ್ಕೇರುತ್ತಿರುವ ಕೋವಿಡ್ -19 ಪ್ರಕರಣ ತಡೆಗಟ್ಟಲು ಪ್ರಧಾನಿ ಮೋದಿ ಕಾರಣರಾಗಿದ್ದಾರೆ. ಅವರ ಬಳಿ ಯಾವುದೇ ಯೋಜನೆ ಇಲ್ಲ, ಆಡಳಿತಾತ್ಮಕ ಸಾಮರ್ಥ್ಯಗಳಿಲ್ಲ. ಸಂಪೂರ್ಣ ಅಸಮರ್ಥ ವ್ಯಕ್ತಿಯಾದ ಅವರು ರಾಜೀನಾಮೆ ನೀಡಬೆಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಮೋದಿಯವರ ದುರ್ಬಲ ಆಡಳಿತದಿಂದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಉಂಟಾಗಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಮೋದಿ ಮಾತ್ರ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇಂದಿನ ಕೋವಿಡ್‌ ಸಾವುಗಳಿಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ನಿನ್ನೆ ತಮಿಳುನಾಡಿನ ವಿಸಿಕೆ ಪಕ್ಷದ ಅಧ್ಯಕ್ಷ ತೋಲ್ ತಿರುಮಾವಲವನ್‌ ಒತ್ತಾಯಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *