ನವದೆಹಲಿ: ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ 400 ಕ್ಕೂ ಹೆಚ್ಚು ಪೊಲೀಸರು ಸಿಕ್ಕಿಕೊಂಡಿದ್ದು, ದಂಡ ವಿಧಿಸಲಾಗಿದೆ.
ವಿಶೇಷವೆಂದರೆ ಒಂದೇ ತಿಂಗಳಿನಲ್ಲಿ ಈ ದಂಡ ವಿಧಿಸಲಾಗಿದೆ. ಗಾಜಿಯಬಾದ್-ಕಾನ್ಸು ಮಧ್ಯ ಸಂಚರಿಸುತ್ತಿದ್ದ ವಿವಿಧ ರೈಲುಗಳಲ್ಲಿ ಇತ್ತೀಚೆಗೆ ಟಿಕೆಟ್ ಇಲ್ಲದೇ ಪೊಲೀಸರು ಪ್ರಯಾಣ ಮಾಡುತ್ತಿರುವುದು ಹೆಚ್ಚುತ್ತಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಯಾಗರಾಜ ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಬಿಎಂಟಿಸಿ ಬಸ್ ಹಾಗೂ ಆಟೊ ನಡುವೆ ಡಿಕ್ಕಿ; ಆಟೊ ಚಾಲಕನ ಸ್ಥಿತಿ ಗಂಬೀರ
ರೈಲ್ವೆ ಸಂಚಾರ ದಳದ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡು ಒಂದೇ ತಿಂಗಳಿನಲ್ಲಿ ಕ್ರಮ ವಹಿಸಿದಾಗ 400 ಕ್ಕೂ ಹೆಚ್ಚು ಪೊಲೀಸರು ಟಿಕೆಟ್ ಇಲ್ಲದೇ ಪ್ರಯಾಣ ಮಾಡುತ್ತಿದ್ದದ್ದು ಕಂಡು ಬಂದಿದೆ ಎಂದು ತಿಳಿಸಿದೆ.
ಈ ಪೊಲೀಸರು ಬೇರೆ ಪ್ರಯಾಣಿಕರಿಗೆ ನಿಗದಿಯಾಗಿದ್ದ ಸೀಟುಗಳನ್ನು ಆಕ್ರಮಿಸುವುದಲ್ಲದೇ ಪ್ರಯಾಣಿಕರಿಗೆ ಬೆದರಿಕೆ ಹಾಕುತ್ತಿದ್ದರು ಎಂದು ಪ್ರಯಾಗರಾಜ ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : ಜನ ಕೇಂದ್ರಿತ ಅಭಿವೃದ್ಧಿ ಇಂದಿನ ತುರ್ತು – ಡಾ. ಚಂದ್ರ ಪೂಜಾರಿ Janashakthi Media