ಮೌಲಾನ ಆಝಾದ್‌ ಎಜುಕೇಶನ್‌ ಫೌಂಡೇಶನ್‌ ಮುಚ್ಚಲು ಕೇಂದ್ರ ಸರಕಾರ ಆದೇಶ – ಫಾಫ್ರೆ ಖಂಡನೆ

ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮೌಲಾನ ಆಜಾದ್‌ ಎಜುಕೇಶನ್‌ ಫೌಂಡೇಶನ್‌ ಮುಚ್ಚುಗಡೆಗೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ. ಮೌಲಾನ

ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ವಕ್ಫ್‌ ಮಂಡಳಿಯ ಪ್ರಸ್ತಾವನೆಯನ್ನಾಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನ ಅಬ್ದುಲ್‌ ಕಲಾಂ ಆಝಾದ್‌ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಈ ಫೌಂಡೇಶನ್‌ ಆರಂಭಿಸಲಾಗಿತ್ತು. ಜೂನಿಯರ್‌ ರಿಸರ್ಚ್‌ ಫೆಲ್ಲೋಗಳಿಗೆ ಮೊದಲ ಎರಡು ವರ್ಷಗಳಿಗೆ ಮಾಸಿಕ ರೂ. 31,000 ಹಾಗೂ ಸೀನಿಯರ್‌ ರಿಸರ್ಚ್‌ ಫೆಲ್ಲೋಗಳಿಗೆ ಉಳಿದ ಅವಧಿಗೆ ಮಾಸಿಕ ರೂ. 35000 ನೀಡಲಾಗುತ್ತಿತ್ತು.

2021-22ರ ತನಕ ಮೌಲಾನ ಆಝಾದ್‌ ನ್ಯಾಷನಲ್‌ ಫೆಲೋಶಿಪ್‌ ಒಟ್ಟು 6700ಕ್ಕೂ ಅಧಿಕ ಅಭ್ಯರ್ಥಿಗಳಿಗೆ ರೂ 738.85 ಕೋಟಿ ಒದಗಿಸಿತ್ತು. ಆದರೆ ಈ ಯೋಜನೆಯನ್ನು 2022ರಲ್ಲಿ ಅಂತ್ಯಗೊಳಿಸಿದಾಗ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಫಾಫ್ರೆ ಖಂಡನೆ : ಮೌಲಾನಾ ಆಜಾದ್ ಎಜುಕೇಶನ್ ಫೌಂಡೇಶನ್ (MAEF) ನನ್ನು ಮುಚ್ಚಲು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಆದೇಶ ಅತ್ಯಂತ ಖಂಡನೀಯ ವೆಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ( ಪಾಫ್ರೆ) ಖಂಡಿಸಿದೆ ಎಂದು ಪಾಫ್ರೆ ಸಂಚಾಲಕ ಹಾಗು ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ತಿಳಿಸಿದ್ದಾರೆ. ಮೌಲಾನ

ಸ್ವಾತಂತ್ರ್ಯ ಭಾರತದ ಮೊದಲ ಶಿಕ್ಷಣ ಸಚಿವರೂ, ದೇಶಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವಿದ್ವಾಂಸರು ಆಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಹೆಸರಿನಲ್ಲಿ ಸ್ಥಾಪಿಸಿದ್ದ ಮೌಲಾನಾ ಆಜಾದ್ ಎಜುಕೇಶನ್ ಫೌಂಡೇಶನ್ (MAEF) ನನ್ನು ಮುಚ್ಚಲು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹೊರಡಿಸದ ಆದೇಶ ಅತ್ಯಂತ ಹೇಯ ಕೃತ್ಯವೆಂದು ತಿಳಿಸಿದ್ದಾರೆ.

ಪಂಡಿತ್ ಜವಾಹರಲಾಲ್ ನೆಹರು ಅವರ ಸಂಪುಟದಲ್ಲಿ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮೌಲಾನಾ ಅಬುಲ್ ಕಲಾಂ ಆಜಾದ್ ರವರು ರಾಷ್ಟ್ರಕ್ಕೆ ಅನನ್ಯ ಕೊಡುಗೆ ನೀಡಿದವರಲ್ಲಿ ಒಬ್ಬರಾಗಿದ್ದಾರೆ . ಅವರ ಮಾರ್ಗದರ್ಶನದಲ್ಲಿ ಭಾರತದ ಐಐಟಿಗಳು ಮತ್ತು ಎಐಐಎಂಎಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಸ್ಥಾಪಿಸಲಾಯಿತು ಎಂಬುದು ಅವಿಸ್ಮರಣೀಯ. ಅವರ ಕೊಡುಗೆಯನ್ನು ಗುರುತಿಸಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ. ಮೌಲಾನ

ಇದನ್ನು ಓದಿ : ಹಿಮಾಚಲ ಪ್ರದೇಶ | ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ 6 ಕಾಂಗ್ರೆಸ್ ಶಾಸಕರು ಅನರ್ಹ

ನ್ಯಾಯಮೂರ್ತಿ ಸಾಚಾರ್‌ರವರ ವರದಿಯ ಅನ್ವಯ ಸಮಾಜದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ವರ್ಗಗಳ ಶಿಕ್ಷಣವನ್ನು ಉತ್ತೇಜಿಸಲು ಸ್ಥಾಪಿತವಾಗಿದ್ದ ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನವು ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಸಂಪೂರ್ಣ ಧನಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಕಳೆದ ಹಲವು ವರ್ಷಗಳಲ್ಲಿ ಅಲ್ಪ ಸಂಖ್ಯಾತ ವರ್ಗದ ಶೈಕ್ಷಣಿಕ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಫೌಂಡೇಶನ್‌ ಪ್ರಮುಖ ಪಾತ್ರವನ್ನು ವಹಿಸಿದೆ. ಫಾಫ್ರೆ

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಈ ನಿರ್ಧಾರವು ಅವಕಾಶ ವಂಚಿತ ಮುಸ್ಲಿಂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಿದ್ದ ಒಂದು ಮುಖ್ಯ ಅವಕಾಶವನ್ನು ಕಸಿಯುವ ಅತ್ಯಂತ ದುರದೃಷ್ಟಕರ ತೀರ್ಮಾನವಾಗಿದೆ. ಅಲ್ಪಸಂಖ್ಯಾತ ಸಚಿವಾಲಯದ ಅಧೀನ ಕಾರ್ಯದರ್ಶಿಯವರು ಹೊರಡಿಸಿರುವ ಈ ಆದೇಶದಲ್ಲಿ ಫೌಂಡೇಶನನ್ನು ಮುಚ್ಚಲು ಯಾವುದೇ ಸಕಾರಣವನ್ನು ನೀಡದೆ ಹಠಾತ್ತಾಗಿ ಮುಚ್ಚುವ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ . ಫಾಫ್ರೆ

ದೇಶದಲ್ಲಿ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು , ಅವರ ಮೇಲೆ ನಡೆಸುತ್ತಿರುವ ನಿರಂತರ ದೌರ್ಜನ್ಯ ದ್ವೇಷ ರಾಜಕಾರಣದ ಪರಮಾವಧಿಯ ಹೆಜ್ಜೆ ಇದಾಗಿದೆ. ಇದು ಕೇಂದ್ರದ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎನ್ನುವುದು ಪೊಳ್ಳು ಘೋಷವಾಕ್ಯ ಎಂಬುದನ್ನು ಮತ್ತೊಮ್ಮ ಬಯಲು ಮಾಡಿದೆ . ಕೇಂದ್ರ ಸರ್ಕಾರ ತನ್ನ ಘೋಷವಾಕ್ಯಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಫಾಫ್ರೆ

ಕೇಂದ್ರ ಸರ್ಕಾರ ತನ್ನ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಮತ್ತು ಫೌಂಡೇಶನ್‌ ವತಿಯಿಂದ ನಡೆಯುತ್ತಿರುವ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದುವರಿಸುವ ಮೂಲಕ ಫೌಂಡೇಶನ್‌ ನನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಮೂಲಭೂತ ಶಿಕ್ಷಣಕ್ಕಾಗಿ ಜನಾಂದೋಲನಗಳ ಸಮನ್ವಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಇದನ್ನು ನೋಡಿ :ಜೋಯಿಡಾ ಅಭಿವೃದ್ಧಿಗಾಗಿ ರೈತರ ಪಾದಯಾತ್ರೆ Janashakthi Media

 

Donate Janashakthi Media

Leave a Reply

Your email address will not be published. Required fields are marked *