ಕಲ್ಯಾಣ ಕರ್ನಾಟಕ ಭಾಗಕ್ಕೆ ಇನ್ನಷ್ಟು ಆದ್ಯತೆ ನೀಡಬೇಕಿತ್ತು – ಶಾಸಕ ಬಿ.ಆರ್.ಪಾಟೀಲ್

ಕಲಬುರಗಿ: ರಾಜ್ಯ ಸಚಿವ ಸಂಪುಟ ಸಭೆಯನ್ನು ಕಲ್ಯಾಣ ಕರ್ನಾಟಕದಲ್ಲಿ ನಡೆಸಿದ ಸಮಾಧಾನ ಇದೆ. ಆದರೆ, ಅದರಲ್ಲಿ ತೆಗೆದುಕೊಂಡ ನಿರ್ಣಯಗಳು ತೃಪ್ತಿಯಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ, 18 ಸೆಪ್ಟೆಂಬರ್‌ ರಂದು, ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರಾತುರಿಯಲ್ಲಿ ಸಂಪುಟ ಸಭೆ ನಡೆದಿದ್ದರಿಂದ ಈ ಭಾಗದ ಅಭಿವೃದ್ಧಿಗೆ ಮೂಲದಲ್ಲಿ ಬೇಕಾದ ಕೊಡುಗೆಗಳನ್ನು ಕೊಡಲಾಗಿಲ್ಲ ಎಂದು ಹೇಳಿದರು.

ನೇಮಕಾತಿ ಬಗ್ಗೆ ಸ್ಪಷ್ಟತೆಯಿಲ್ಲ

ಈ ಭಾಗ ಅಭಿವೃದ್ಧಿ ಹೊಂದಬೇಕಾದರೆ ಮುಖ್ಯವಾಗಿ ಶೈಕ್ಷಣಿಕವಾಗಿ ಮುಂದುವರಿಯಬೇಕು. ಅದಕ್ಕಾಗಿ ಶಿಕ್ಷಕರ ನೇಮಕಾತಿ ನಡೆಯಬೇಕಾಗಿದೆ. ಈ ಕುರಿತು ಸಂಪುಟದಲ್ಲಿ ನಿರ್ಣಯ ಯಾವುದೇ ಸ್ಪಷ್ಟತೆ ನೀಡುತ್ತಿಲ್ಲ. ಗುಲ್ಬರ್ಗ ವಿಶ್ವ ವಿದ್ಯಾಲಯದಲ್ಲಿ ಶೇ.80 ಉಪನ್ಯಾಸಕಾರ ಹುದ್ದೆ ಖಾಲಿ ಇವೆ.

ಇದನ್ನೂ ಓದಿ: ಜಾತಿ ನಿಂದನೆ ಹಾಗೂ ಬೆದರಿಕೆ ಆರೋಪ ಪ್ರಕರಣ ; ಮುನಿರತ್ನ ನಾಯ್ಡು 14 ದಿನಗಳ​ ನ್ಯಾಯಾಂಗ ಬಂಧನ

ಇಲ್ಲಿ ವಿದ್ಯಾರ್ಥಿಗಳು ಕಲಿಯುವುದು ಯಾವಾಗ ಎಂದು ಸ್ಪಚ್ಟಪಡಿಸಿದ ಅವರು, ಸುಮಾರು 28,000 ಭರ್ತಿಯ ನಿರ್ಣಯ ಮುಂದಿನ ಸಂಪುಟ ಸಭೆಯಲ್ಲಿ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಹೈ ಸ್ಕೂಲ್ ಮತ್ತು ಕಾಲೇಜುಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿತ್ತು ಎಂದು ಹೇಳಿದರು.

ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸಲಿ

ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಈ ಭಾಗದ ಜನಪ್ರತಿನಿಧಿಗಳಿಗೆ ಅರಿವಿದೆ. ಅಧಿಕಾರಿಗಳಿಗೆ ಕೇವಲ ಕಾನೂನು ಮಾತ್ರ ತಿಳಿದಿದೆ. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಸಮಸ್ಯೆ ನೀಗಿಸುತ್ತಾರೆ ಎಂದು ಪರೋಕ್ಷವಾಗಿ ಜನಪ್ರತಿನಿಧಿಗಳಿಂದ ಯಾವುದೇ ಸಲಹೆ ಸ್ವೀಕಾರ ಮಾಡಿಲ್ಲ ಎಂದು ಹೇಳಿದಂತಿತ್ತು.

ಸರಕಾರಿ ನೌಕರರ ಬಡ್ತಿ ಅನ್ಯಾಯದ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಲು 371(ಜೆ)ಗಾಗಿ ಪ್ರತ್ಯೇಕ ಕೆಎಟಿ ಕಲಬುರಗಿಯಲ್ಲಿ ಪ್ರಾರಂಭ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಅದರ ಬಗ್ಗೆಯೂ ಚರ್ಚೆ ನಡೆಸಿಲ್ಲ. ಮೂಲದಲ್ಲಿ ಕಲ್ಯಾಣದಲ್ಲಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ ನಡೆದಿಲ್ಲ ಎಂದು ಹೇಳಿದರು.

ಇದನ್ನೂ ನೋಡಿ: ಬೆಂಗಳೂರು : ಪೌರಕಾರ್ಮಿಕರ ಕಪಾಳಕ್ಕೆ ಹೊಡೆದು ಹಲ್ಲೆ, ಜಾತಿ ನಿಂದನೆ Janashakthi Media

Donate Janashakthi Media

Leave a Reply

Your email address will not be published. Required fields are marked *