ಕುರಾನ್ ಮಾತ್ರವಲ್ಲ-ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

ನವದೆಹಲಿ: ಕುರಾನ್​ನಲ್ಲಿ ಮಾತ್ರವಲ್ಲ, ಹಿಂದೂಗಳ ಗ್ರಂಥವಾದ ಭಗವದ್ಗೀತೆಯೂ ಜಿಹಾದ್‌ ಬೋಧನೆಯ ಅಂಶಗಳಿವೆ. ಸ್ವತಃ ಶ್ರೀಕೃಷ್ಣನೇ ಅರ್ಜುನನಿಗೆ ಬೋಧನೆ ಮಾಡಿದ್ದಾನೆ. ಜಿಹಾದ್ ಪರಿಕಲ್ಪನೆ ಕೇವಲ ಇಸ್ಲಾಂ ಧರ್ಮಗ್ರಂಥ ಮಾತ್ರವಲ್ಲ. ಭಗವದ್ಗೀತೆ ಹಾಗೂ ಕ್ರಿಶ್ಚಿಯನ್ ಧರ್ಮದಲ್ಲೂ  ಇದೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಶಿವರಾಜ್‌ ಪಾಟೀಲ್‌ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್ ಪಾಟೀಲ್ ಅವರು, ಜಿಹಾದ್ ಇಸ್ಲಾಂ ಧರ್ಮದಲ್ಲಿ ಇದೆ ಎಂಬುದಾಗಿ ಭಾರೀ ಚರ್ಚೆಯಾಗುತ್ತಿದೆ. ಜಿಹಾದ್ ಕುರಾನ್‌ಗೆ ಸೀಮಿತವಾಗಿರದೆ ಮಹಾಭಾರತದ ಭಾಗವಾದ ಭಗವದ್ಗೀತೆಯಲ್ಲೂ ಇದೆ. ಕುರುಕ್ಷೇತ್ರದಲ್ಲಿ ಪಾಂಡವರು ಮತ್ತು ಕೌರವರ ನಡುವಿನ ಧರ್ಮಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಬೋಧಿಸಿದ್ದ. ಭಗವಾನ್ ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಜಿಹಾದ್ ಬಗ್ಗೆ ಕಲಿಸಿದನು. ಜಿಹಾದ್ ಹಿಂದೂ ಮತ್ತು ಇಸ್ಲಾಮಿಕ್ ಧರ್ಮಗ್ರಂಥಗಳಲ್ಲಿ ಮಾತ್ರ ಅಸ್ತಿತ್ವದಲ್ಲಿಲ್ಲ. ಇದು ಕ್ರಿಶ್ಚಿಯನ್ನರ ಪವಿತ್ರ ಗ್ರಂಥದಲ್ಲಿಯೂ ಎಂದಿದ್ದಾರೆ.

ಸ್ಪಷ್ಟ ಮನಸ್ಸಿನಿಂದ ಕೈಗೊಂಡ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಮಾತ್ರ ಜಿಹಾದ್ ಹೊರಹೊಮ್ಮುತ್ತದೆ. ಸರಿಯಾದ ಉದ್ದೇಶ ಹೊಂದಿದ್ದರೂ, ಸರಿಯಾದ ಕೆಲಸ ಮಾಡುತ್ತಿದ್ದರೂ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ವಿವರಾಣಾತ್ಮಕವಾಗಿ ಎಲ್ಲವನ್ನೂ ತಿಳಿಸಿದ ಬಳಿಕವೂ ಅರ್ಥವಾಗುವುದಿಲ್ಲ. ಬದಲಿಗೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬರುತ್ತಾರೆ. ಈ ವೇಳೆ ನಿಮ್ಮಿಂದ ಓಡಿ ಹೋಗಲು ಸಾಧ್ಯವಿಲ್ಲ. ಇದನ್ನು ಜಿಹಾದ್ ಎಂದು ಕರೆಯಲು ಸಾಧ್ಯವಿಲ್ಲ. ಇದನ್ನು ತಪ್ಪು ಎಂದೂ ಹೇಳಲೂ ಸಾಧ್ಯವಿಲ್ಲ. ಇದನ್ನೇ ನಾವು ಅರ್ಥ ಮಾಡಿಕೊಳ್ಳಬೇಕು. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಜನರಿಗೆ ಅರ್ಥ ಮಾಡಿಸುವಂತಹ ಪರಿಕಲ್ಪನೆ ಇರಬಾರದು ಎಂದಿದ್ದಾರೆ.

ಶಿವರಾಜ್‌ ಪಾಟೀಲ್‌ ಸ್ಪಷ್ಟನೆ

ಶಿವರಾಜ್‌ ಪಾಟೀಲ್‌ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಈಡಾಗುತ್ತಿದ್ದಂತೆ ಇಂದು(ಅಕ್ಟೋಬರ್‌ 21) ಈ ಬಗ್ಗೆ  ಸ್ಪಷ್ಟನೆ ನೀಡಿದ್ದು, ನಾನು ಶ್ರೀಕೃಷ್ಣನ ಬಗ್ಗೆ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ದುರ್ಯೋಧನ ಜಿಹಾದ್ ಮಾದರಿಯ​ ​ನೀತಿಯನ್ನು ಅನುಸರಿಸಿದ್ದ ಎಂದು ನಾನು ಹೇಳಿದ್ದೆ. ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣ ಅರ್ಜುನನಿಗೆ ಬೋಧಿಸಿದ್ದನ್ನು ಜಿಹಾದ್ ಎಂದು ಕರೆಯಲು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆ. ಅದನ್ನು ತಿರುಚಲಾಗಿದೆ ಎಂದು ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *