ಯುಪಿ ಜೋಡೋ ಯಾತ್ರೆ ಆರಂಭಿಸಿದ ಕಾಂಗ್ರೆಸ್

ಲಖ್ನೋ: ಕಳೆದುಹೋದ ಸ್ಥಾನವನ್ನು ಮರಳಿ ಪಡೆಯಲು ಮತ್ತು 2024 ರ ಲೋಕಸಭೆ ಚುನಾವಣೆಗೆ ಸಜ್ಜಾಗುವ ಪ್ರಯತ್ನದಲ್ಲಿರುವ ಉತ್ತರ ಪ್ರದೇಶದ ಕಾಂಗ್ರೆಸ್ ಘಟಕವು ಡಿಸೆಂಬರ್ 20 ರ ಬುಧವಾರದಿಂದ ಯುಪಿ ಜೋಡೋ ಯಾತ್ರೆಯನ್ನು ಪ್ರಾರಂಭಿಸಲಿದೆ. ಸಹರಾನ್‌ಪುರದ ಶಾಕುಂಭಾರಿ ದೇವಿ ದೇವಸ್ಥಾನದಿಂದ ಆರಂಭವಾಗುವ 20 ದಿನಗಳ ಯಾತ್ರೆಯು 11 ಜಿಲ್ಲೆಗಳು ಮತ್ತು 16 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.

ರೋಹಿಲ್‌ಖಂಡ್ ಪ್ರದೇಶದ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹಾದುಹೋಗುವ ಯಾತ್ರೆಯು ಮುಸ್ಲಿಂ ಸಮುದಾಯದ ಮೇಲೆ ಯುಪಿ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಸಹರಾನ್‌ಪುರ, ಮುಜಾಫರ್‌ನಗರ, ಬಿಜ್ನೋರ್, ಅಮ್ರೋಹಾ, ಮೊರಾದಾಬಾದ್, ರಾಂಪುರ ಮತ್ತು ಬರೇಲಿ ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳಲ್ಲಿ 35% – 40% ಮುಸ್ಲಿಮರ ಮತಗಳಿದ್ದು, ಅದು ಚುನಾವಣೆ ಗೆಲ್ಲಲು ನಿರ್ಣಾಯಕವಾಗಿವೆ.

ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ ಖಾತೆಯ ಹಠಾತ್ ಸ್ಥಗಿತ : ಇನ್ನೊಂದು “ಅನ್ಯಾಯದ ಮತ್ತು ಕ್ರೂರವಾದ  ಕ್ರಮ”- ನ್ಯೂಸ್‍ ಕ್ಲಿಕ್‍

ಯಾತ್ರೆಯಲ್ಲಿ ರೈತರು, ಯುವಕರು, ಮಹಿಳೆಯರು, ವ್ಯಾಪಾರಿಗಳು, ಧಾರ್ಮಿಕ ಮುಖಂಡರು ಮತ್ತು ಕುಶಲಕರ್ಮಿಗಳನ್ನು ಕೂಡಾ ತಲುಪಲು ಕಾಂಗ್ರೆಸ್ ಯೋಜಿಸಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹರಾನ್‌ಪುರದಲ್ಲಿ ಮರದ ಪೀಠೋಪಕರಣ ತಯಾರಕರೊಂದಿಗೆ ಸಂವಾದ ನಡೆಸಲಿದೆ. ಅಲ್ಲದೆ, ಮುಜಾಫರ್‌ನಗರ ಮತ್ತು ಬಿಜ್ನೋರ್‌ನಲ್ಲಿ ಕಬ್ಬು ರೈತರು; ಮೊರಾದಾಬಾದ್‌ನಲ್ಲಿ ಹಿತ್ತಾಳೆ ತಯಾರಕರು; ಬರೇಲಿಯಲ್ಲಿ “ಝರಿ ಜರ್ಡೋಜಿ” ಕೆಲಸಗಾರರು ಮತ್ತು ಬಿದಿರು ಕುಶಲಕರ್ಮಿಗಳು; ರಾಂಪುರದಲ್ಲಿ ಕುಶಲಕರ್ಮಿಗಳು; ಶಹಜಹಾನ್‌ಪುರ ಮತ್ತು ಲಖಿಂಪುರದಲ್ಲಿ ಕಬ್ಬಿನ ರೈತರು; ಮತ್ತು ವಿವಿಧ ಜಿಲ್ಲೆಗಳಲ್ಲಿ ಪ್ರಮುಖ ಧಾರ್ಮಿಕ ಮುಖಂಡರ ಜೊತೆಗೆ ಸಂವಾದ ನಡೆಸಲಿದೆ.

ಯಾತ್ರೆಯು ಚಲಿಸಲಿರುವ 16 ಲೋಕಸಭಾ ಕ್ಷೇತ್ರಗಳು ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಗಳಾಗಿದ್ದವು. ಯಾತ್ರೆಯ ಮಾರ್ಗದಲ್ಲಿ ಸಿಗುವ ಬರೇಲಿ, ಖೇರಿ, ಧೌರ್ಹರಾ ಮತ್ತು ಮೊರ್ದಾಬಾದ್ ಸೇರಿದಂತೆ 21 ಕ್ಷೇತ್ರಗಳನ್ನು 2009 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದುಕೊಂಡಿತ್ತು. ಯುಪಿ ಜೋಡೋ

2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಈ ಕ್ಷೇತ್ರಗಳನ್ನು ಕಳೆದುಕೊಂಡಿದ್ದರೂ, ಈಗ ಅದು ತನ್ನ ಸಾಂಪ್ರದಾಯಿಕ ಬೆಂಬಲದ ನೆಲೆಯಾದ ಮುಸ್ಲಿಂ, ಇತರ ಹಿಂದುಳಿದ ವರ್ಗ (OBC) ಮತ್ತು ದಲಿತರ ಬೆಂಬಲದೊಂದಿಗೆ ರಾಜ್ಯ ರಾಜಕೀಯದಲ್ಲಿ ಪುನರಾಗಮನ ಮಾಡಲು ಪ್ರಯತ್ನ ನಡೆಸುತ್ತಿದೆ. ಯಾತ್ರೆಯ ಮೂಲಕ ಪಕ್ಷವು ತನ್ನ ಕ್ಷೇತ್ರಕ್ಕೆ ಸಂದೇಶವನ್ನು ಕಳುಹಿಸಲು ಮತ್ತು ಪಕ್ಷದ ಬೆಂಬಲವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.

ವಿಡಿಯೊ ನೋಡಿ: ಜನಸಾಮಾನ್ಯರ ನಡಿಗೆ ಅಭಿವೃದ್ಧಿಯ ಕಡೆಗೆ : ತುಳುನಾಡಿನ ದುಸ್ಥಿತಿಗೆ 3 ದಶಕಗಳ ಬಿಜೆಪಿಯ ದುರಾಡಳಿತವೇ ಕಾರಣ

Donate Janashakthi Media

Leave a Reply

Your email address will not be published. Required fields are marked *