ದೆಹಲಿ ವಿಧಾನಸಭಾ ಚುನಾವಣೆ: ಎಎಪಿ ಗೆಲುವಿಗೆ ಕಾಂಗ್ರೆಸ್‌ ಅಡ್ಡಿ

ವದೆಹಲಿ: ಕಾಂಗ್ರೆಸ್‌ ಮತ್ತು ಎಎಪಿ ಪರಸ್ಪರ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 70 ಕ್ಷೇತ್ರಗಳ ಪೈಕಿ 12 ಕಡೆಗಳಲ್ಲಿ ಎಎಪಿ ಗೆಲುವಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಅಡ್ಡಿಯಾಗಿ ಪರಿಣಮಿಸಿದ್ದಾರೆ. ಎಎಪಿ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಈ ಕ್ಷೇತ್ರಗಳಲ್ಲಿ ಬಿದ್ದಿವೆ.

ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ: ಸಚಿವರಿಂದ ಸಿದ್ಧತೆ ಪರಿಶೀಲನೆ

ದಕ್ಷಿಣ ದೆಹಲಿಯ ಗ್ರೇಟರ್‌ ಕೈಲಾಶ್‌ ಕ್ಷೇತ್ರದಲ್ಲಿ ಬಿಜೆಪಿಯ ಶಿಖಾ ರಾಯ್ ಅವರು ಎಎಪಿಯ ಸೌರಭ್‌ ಭಾರದ್ವಾಜ್‌ ಅವರನ್ನು 3,188 ಮತಗಳಿಂದ ಮಣಿಸಿದ್ದಾರೆ. ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಗಾರ್ವಿತ್‌ ಸಿಂಘ್ವಿ ಅವರಿಗೆ 6,711 ಮತಗಳು ಬಿದ್ದಿವೆ. ಕಾಂಗ್ರೆಸ್‌-ಎಎಪಿ ಮೈತ್ರಿ ಇದ್ದಿದ್ದರೆ ಸೌರಭ್‌ ಗೆಲುವು ಸಾಧಿಸುವ ಅವಕಾಶವಿತ್ತು.

ಇದನ್ನೂ ನೋಡಿ: ಸಾಮಾಜಿಕ ನ್ಯಾಯವನ್ನು ಜಾರಿ ಮಾಡಬೇಕಿರುವ ಸಂಸತ್ತು ಮಾಡುತ್ತಿರುವುದೇನು? ದಿನೇಶ್‌ ಅಮಿನ್‌ ಮಟ್ಟು Janashakthi Media

Donate Janashakthi Media

Leave a Reply

Your email address will not be published. Required fields are marked *