ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕೇವಲ 3% ಭರವಸೆಗಳನ್ನು ಮಾತ್ರ ಪೂರೈಸಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ನಾಗರಿಕರ ವರದಿ ಕಾರ್ಡ್ (ಸಿಆರ್ ಸಿ) ತಿಳಿಸಿದೆ.
59 ಭರವಸೆಗಳ ಪೈಕಿ ಎರಡನ್ನು ಮಾತ್ರ ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆ ಎಂದು ವಿಶ್ಲೇಷಣೆ ತಿಳಿಸಿದೆ. ವಿವಿಧ ವಲಯಗಳಲ್ಲಿ ಸರ್ಕಾರದ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ನ್ಯೂನತೆಗಳನ್ನು ವರದಿಯು ಎತ್ತಿ ತೋರಿಸಿದೆ.
ನಿರ್ಣಾಯಕ ಕ್ಷೇತ್ರವಾದ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಸಹ ನಿರ್ಲಕ್ಷಿಸಲಾಗಿದೆ, ಅದರ ಆರು ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಲಿಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಸಿಬ್ಬಂದಿ ಮತ್ತು ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವುದು, ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಪ್ರತಿ 100 ಕಿ.ಮೀ.ಗೆ ಸಂಪೂರ್ಣ ಸುಸಜ್ಜಿತ ಟ್ರಾಮಾ ಸೆಂಟರ್‌ಗಳನ್ನು ಸ್ಥಾಪಿಸುವುದು ಮತ್ತು ಜಯದೇವ ಮಾದರಿಯ ಹೃದಯ ಆಸ್ಪತ್ರೆ, ಕಿದ್ವಾಯಿ ತರಹದ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸುವುದು ಸಾರ್ವಜನಿಕ ಆರೋಗ್ಯ ವಲಯದಲ್ಲಿನ ಭರವಸೆಗಳನ್ನು ಒಳಗೊಂಡಿತ್ತು.
ಇದನ್ನೂ ಓದಿ: ಯುವತಿಯ ಮೇಲೆ ಕೋರ್ಟ್ ಆವರಣದಲ್ಲೇ ವಕೀಲನಿಂದ ಅತ್ಯಾಚಾರ
ಪ್ರತಿ ಕಂದಾಯ ವಿಭಾಗದಲ್ಲಿ ನಿಮ್ಹಾನ್ಸ್ ಮಾದರಿಯ ಮನೋವೈದ್ಯಕೀಯ ಆಸ್ಪತ್ರೆ ಸ್ಥಾಪಿಸುವ ಭರವಸೆ ನೀಡಿತ್ತು. ಶಿಕ್ಷಣ ಕ್ಷೇತ್ರದ ಏಳು ಭರವಸೆಗಳಲ್ಲಿ ಕೇವಲ ಒಂದನ್ನು ಮಾತ್ರ ಈಡೇರಿಸಿದ್ದು, ಉದ್ಯೋಗ ಕ್ಷೇತ್ರದಲ್ಲಿ 15 ಭರವಸೆಗಳ ಪೈಕಿ ಒಂದನ್ನು ಮಾತ್ರ ಜಾರಿಗೆ ತರಲಾಗಿದೆ, ಪರಿಸರ ಕ್ಷೇತ್ರದಲ್ಲಿ ನೀಡಿದ್ದ ಒಂದೇ ಒಂದು ಭರವಸೆ ಕಾಗದದಲ್ಲಿಯೇ ಉಳಿದಿದೆ.
ಉದ್ಯಮ ವಲಯವು ತನ್ನ 11 ಭರವಸೆಗಳಲ್ಲಿ ಯಾವುದೂ ಫಲ ನೀಡಲಿಲ್ಲ. ಮೊದಲ ವರ್ಷ ಬೆಂಗಳೂರಿನ ಅಭಿವೃದ್ಧಿಗೆ ನೀಡಲಾದ ಐದು ಪ್ರಮುಖ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಲಾಗಿಲ್ಲ ಎಂದು ವರದಿ ಎತ್ತಿ ತೋರಿಸಿದೆ. ಪ್ರಣಾಳಿಕೆಯಲ್ಲಿ ದೂರದೃಷ್ಟಿ ಇಲ್ಲ ಎಂದು ಸಿವಿಐಸಿ ಬೆಂಗಳೂರು ಸದಸ್ಯೆ ಕಾತ್ಯಾಯಿನಿ ಚಾಮರಾಜ್ ತಿಳಿಸಿದ್ದಾರೆ.
ಇದನ್ನೂ ನೋಡಿ: ದಲಿತರಿಗೆ ಮೀಸಲಿಟ್ಟ ಹಣ ಬೇರೆ ಉದ್ದೇಶಕ್ಕೆ ಬಳಕೆಯಾಗಬಾರದು – ಡಿಎಚ್‌ಎಸ್ ಆಗ್ರಹ |Janashakthi Media