ಇದು ಬಿಸಿಲು ಕುದುರೆ ಬಜೆಟ್, ಯಾರ ಕೈಗೂ ಸಿಗಲ್ಲ – ಕಾಂಗ್ರೆಸ್‌ ಟೀಕೆ

ಬೆಂಗಳೂರು: ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ  ಇರೋ ಹಿನ್ನೆಲೆ ಬಿಜೆಪಿ ಸರ್ಕಾರದ ಬಜೆಟ್ ಹೇಗಿರುತ್ತೆ ಎಂದು ಇಡೀ ರಾಜ್ಯದ ಜನತೆ ಕಾಯುತ್ತಿದ್ದರು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡನೆ ಮಾಡಿದ್ದು, ಕಾಂಗ್ರೆಸ್ ಟ್ವಿಟ್ಟರ್ ಮೂಲಕ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಹಿಂದಿನ ಬಜೆಟ್‌‌ನ ಪ್ರಗತಿ 50% ಕೂಡ ದಾಟಿಲ್ಲ. ಇಂದಿನ ಬಜೆಟ್ ಟೀಕಾಫ್ ಆಗುವುದೇ ಇಲ್ಲ. ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದೆ.

ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್‌ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ. 50% ರಷ್ಟೂ ಸಹ ಹಿಂದಿನ ಬಜೆಟ್‌ನ ಘೋಷಣೆಗಳು ಪ್ರಗತಿಯಾಗಿಲ್ಲ. 90%ರಷ್ಟು ಬಿಜೆಪಿಯ ಪ್ರಣಾಳಿಕೆಯ ಭರವಸೆಗಳು ಈಡೇರಿಲ್ಲ. 40% ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಹೀಗಿರುವಾಗ ಬಸವರಾಜ್ ಬೊಮ್ಮಾಯಿ ಅವರು ಓದುತ್ತಿರುವ ಬಜೆಟ್‌ನಲ್ಲಿ ಬದ್ಧತೆ ಇಲ್ಲ. ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ ಎಂದು ಕಿವಿ ಮೇಲೆ ಹೂವಷ್ಟೇ ಎಂದು ಹ್ಯಾಶ್ ಟ್ಯಾಗ್ ಬಳಸಿ ವ್ಯಂಗ್ಯ ಮಾಡಿದೆ.

ಸಿಎಂ ಭಾಷಣದಲ್ಲಿ ಉತ್ಸಾಹ ಇರಲಿಲ್ಲ. ಇದು ಕನ್ನಡಿಗರ ಕಿವೆ ಮೇಲೆ ಹೂವ ಇಡುವ ಬಜೆಟ್. ಯಾವ ಸಮುದಾಯದವರಿಗೂ ನ್ಯಾಯ ಸಿಕ್ಕಿಲ್ಲ. ಉದ್ಯೋಗ ಸೃಷ್ಟಿ, ಹೂಡಿಕೆ ಬಗ್ಗೆ ನೀಲಿ ನಕ್ಷೆ ಇಲ್ಲ. ಕಳೆದ ಸಿಎಂ ಬಜೆಟ್‌ನಲ್ಲಿ 56% ಖರ್ಚಾಗಿದೆ ಅನ್ನೋ ಮಾಹಿತಿ ಇದೆ. ಇಲ್ಲಿ ಯಾವ ಸರ್ಕಾರಕ್ಕೂ ನ್ಯಾಯ ಸಿಕ್ಕಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಜೆಟ್ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದರು.

ಇದೊಂದು ಬಿಸಿಲು ಕುದುರೆ ಬಜೆಟ್ ಆಗಿದ್ದು, ಯಾರ ಕಣ್ಣಿಗೂ ಕಾಣಿಸುವುದಿಲ್ಲ, ಯಾರ ಕೈಗೂ ಸಿಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಡಬಲ್‌ ಇಂಜಿನ್‌ ಕಟ್ಟು ನಿಂತು ಹೊಗೆ ಬರುತ್ತಿದೆ. ಬೊಮ್ಮಾಯಿ ಅವರು ತಾವೂ ಒಂದು ಬಜೆಟ್‌ ಮಂಡಿಸಿದ್ದೇನೆಂದು ಹೇಳಿಕೊಳ್ಳಲು ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ. ಅದನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

 

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *