ಪ್ರೆಸ್ ಮೀಟ್‌ನಲ್ಲಿ ಯಾರು ಮೊದಲು ಮಾತನಾಡಬೇಕು ಎಂಬ ವಿಚಾರವಾಗಿ ಜಗಳವಾಡಿದ ಕಾಂಗ್ರೆಸ್ ಹಿರಿಯ ನಾಯಕರು!

ಕೊಟ್ಟಾಯಂ: ಕೇರಳ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಪತ್ರಕರ್ತರ ಮುಂದೆಯೆ ”ಪತ್ರಿಕಾಗೋಷ್ಠಿಯಲ್ಲಿ ಯಾರು ಮೊದಲು ಮಾತನಾಡಬೇಕು” ಎಂಬ ವಿಚಾರವಾಗಿ ವಾಗ್ವಾದ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಕ್ಷದ ಹಿರಿಯ ನಾಯಕರಿಬ್ಬರ ನಡುವಿನ ಆಂತರಿಕ ಕಲಹ ಪತ್ರಿಕಾಗೋಷ್ಠಿಯಲ್ಲಿ ಸಣ್ಣ ವಿಚಾರವಾಗಿ ಬಹಿರಂಗಗೊಂಡಿದೆ.

ಸೆಪ್ಟೆಂಬರ್ 8 ರಂದು ಕೊಟ್ಟಾಯಂ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಕಛೇರಿಯಲ್ಲಿ ಪಕ್ಷದ ಅಭ್ಯರ್ಥಿ ಚಾಂಡಿ ಉಮ್ಮನ್ ಅವರು ಪುತ್ತುಪಲ್ಲಿ ಉಪಚುನಾವಣೆ ಗೆದ್ದ ಬೆನ್ನಲ್ಲೇ, ಪ್ರತಿಪಕ್ಷ ನಾಯಕ ವಿಡಿ ಸತೀಶನ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಕೆ ಸುಧಾಕರನ್ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಅವರ ನಡುವಿನ ವಾಗ್ವಾದ ಮೈಕ್‌ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಆರೆಸ್ಸೆಸ್‌ ಅನ್ನು ನಿಷೇಧಿಸಿತೆ ಕೆನಡಾ ಸರ್ಕಾರ?

ಪತ್ರಿಕಾಗೋಷ್ಠಿಗೆ ಕುಳಿತಾಗ ಸತೀಶನ್ ಅವರು ಮೈಕ್‌ಗಳ ಸೆಟ್ ಅನ್ನು ತಮ್ಮ ಕಡೆಗೆ ಕಡೆಗೆ ಎಳೆದುಕೊಂಡಿದ್ದರು. ಈ ವೇಲೆ ಸುಧಾಕರನ್ ಅವರು ”ನಾನು ಪ್ರಾರಂಭಿಸಲೆ” ಎಂದು ಕೇಳುತ್ತಾರೆ. ಅದಕ್ಕೆ ಸತೀಶನ್ ಅವರು ”ಇಲ್ಲ ನಾನೇ ಆರಂಭಿಸುತ್ತೇನೆ” ಎಂದು ಹೇಳಿದ್ದಾರೆ. ಈ ವೇಳೆ ಸುಧಾಕರನ್ ಅವರು, “ಕೆಪಿಸಿಸಿ ಅಧ್ಯಕ್ಷ ನಾನಾಗಿದ್ದು, ನಾನೆ ಪತ್ರಿಕಾಗೋಷ್ಠಿ ಪ್ರಾರಂಭಿಸುವುದ ನ್ಯಾಯವಲ್ಲವೆ” ಎಂದು ಹೇಳುತ್ತಾರೆ. ಕೊನೆಗೆ ಸತೀಶನ್ ಅವರು ಮಾಧ್ಯಮದ ಮೈಕ್‌ಗಳನ್ನು ಸುಧಾಕರ್ ಅವರ ಬಳಿಗೆ ತಳ್ಳುತ್ತಾರೆ.

ವಿಶೇಷವೇನೆಂದರೆ, ಪತ್ರಿಕಾಗೋಷ್ಠಿಯಲ್ಲಿ ಸತೀಶನ್ ಯಾವುದೇ ಹೇಳಿಕೆಯನ್ನು ನೀಡದೆ, ಪತ್ರಕರ್ತರ ಪ್ರಶ್ನೆಗಳಿಗೆ “ಅಧ್ಯಕ್ಷರು ಈಗಾಗಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ” ಎಂದು ಹೇಳುವ ಮೂಲಕ ಸುಧಾಕರ್‌ ಅವರ ಮೇಲಿನ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ವ್ಯಾಪಕವಾಗಿ ವ್ಯಂಗ್ಯಕ್ಕೀಡಾಗಿದೆ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಸಿಪಿಐ(ಎಂ) ನಾಯಕಿಯರ ಅವಹೇಳನ; ಕಾಂ ಗ್ರೆಸ್ ಮುಖಂಡನ ಬಂಧನ

ಸೆಪ್ಟೆಂಬರ್ 20ರ ಬುಧವಾರ ಸತೀಶನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮತ್ತು ಸುಧಾಕರನ್ ನಡುವೆ ವಾಗ್ವಾದ ನಡೆದಿರುವುದನ್ನು ಒಪ್ಪಿಕೊಂಡರು. ಆದರೆ ಮಾಧ್ಯಮಗಳು ಪ್ರಸಾರ ಮಾಡುವ ಕಾರಣಕ್ಕಾಗಿ ಈ ವಾಗ್ವಾದ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

“ಪುತ್ತುಪ್ಪಳ್ಳಿ ಕ್ಷೇತ್ರದ ಕಾಂಗ್ರೆಸ್‌ ಗೆಲುವಿನ ಎಲ್ಲಾ ಶ್ರೇಯಸ್ಸು ಸತೀಶನ್‌ ಅವರಿಗೆ ನೀಡುವುದಾಗಿ ಪಕ್ಷದ ಅಧ್ಯಕ್ಷರು ಪತ್ರಿಕಾಗೋಷ್ಠಿಗೆ ಮುಂಚಿತವಾಗಿ ಹೇಳಿದ್ದರು. ಆದರೆ ಗೆಲುವಿನ ಶ್ರೇಯಸ್ಸು ನಾನು ಪಡೆಯಲು ಬಯಸದ ಕಾರಣ, ಸುಧಾಕರನ್‌ ಅವರಿಂದ ಮೈಕ್ ತೆಗೆದುಕೊಂಡು ಇಂತಹ ಹೇಳಿಕೆ ನೀಡದಂತೆ ತಡೆದೆ. ಅದಾಗಿಯೂ ಸುಧಾಕರ್ ಅವರು ಈ ಹೇಳಿಕೆ ನೀಡಿದ್ದಾರೆ” ಎಂದು ಸತೀಶನ್ ಹೇಳಿದ್ದಾರೆ.

ವಿಡಿಯೊ ನೋಡಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಬೃಹತ್‌ ಪ್ರತಿಭಟನೆ, ಮಂಡ್ಯ ಮದ್ದೂರು ಬಂದ್‌ Janashakthi Media

Donate Janashakthi Media

Leave a Reply

Your email address will not be published. Required fields are marked *