ಬೆಂಗಳೂರು :ಹೋರಾಟದ ಕರಪತ್ರಗಳನ್ನು ಹಂಚುತ್ತಿದ್ದ ಕಾರ್ಮಿಕ ನಾಯಕರಿಬ್ಬರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೋರಾಟ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ, ರೈತ -ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಡಿಸೆಂಬರ್ 21,2025 ರಂದು ಸಿಪಿಐ(ಎಂ) ಬೃಹತ್ ಹೋರಾಟವನ್ನು ಹಮ್ಮಿಕೊಂಡಿದೆ.
ಹೋರಾಟವನ್ನು ಜನರ ನಡುವೆ ಕೊಂಡೊಯ್ಯಲು ಮನೆ -ಮನೆ ಪ್ರಚಾರ ನಡೆಸುತ್ತಿದ್ದ ಕಾರಣಕ್ಕಾಗಿ ಇಬ್ಬರು ಸಿಪಿಐ(ಎಂ) ಮುಖಂಡರು ಹಾಗೂ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೌಕರರ ಸಂಘದ ಪ್ರಮುಖ ನಾಯಕರುಗಳಾದ ಚಿತ್ರಾ ಹಾಗೂ ಸುಹಾಸ್ ಅಡಿಗ ರವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ದ್ವೇಷ ಭಾಷಣ| ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸಂಪ್ಯ ಠಾಣೆಯಲ್ಲಿ ದೂರು
ಬೆಂಗಳೂರಿನ ದೈತ್ಯ ಐಟಿ ಕಂಪನಿಗಳಾದ ಟಿಸಿಎಸ್ ,ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳ ಏಕಪಕ್ಷೀಯವಾಗಿ ಕೆಲಸದಿಂದ ವಜಾ ಮುಂತಾದ ಹಲವಾರು ಕಾರ್ಮಿಕ ವಿರೋಧಿ ಕಾನೂನು ಬಾಹಿರ ಕ್ರಮಗಳನ್ನು ಕಾರ್ಮಿಕ ನ್ಯಾಯಾಲಯದಲ್ಲಿ ಕರ್ನಾಟಕ ಐಟಿ ಯೂನಿಯನ್ (KITU) ನ ನಾಯಕರು ಪ್ರಶ್ನಿಸಿದ್ದರು. ಹಾಗೂ ಇವುಗಳ ವಿರುದ್ಧ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದರು.
ಮಾಲೀಕರ ನಿಷ್ಠೆಯನ್ನು ನಿಯತ್ತಾಗಿ ಪಾಲಿಸಲು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ,ಯಾವುದೇ ಸಕಾರಣ ಇಲ್ಲದೇ ಬಂಧಿಸಿ ಲಾಕಪ್ ನಲ್ಲಿ ಇಟ್ಟಿರುವುದು ಕಾಂಗ್ರೆಸ್ ಸರ್ಕಾರದ ಮತ್ತೊಂದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗೆ ಸಾಕ್ಷಿಯಾಗಿದೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ. ಕೂಡಲೇ ಬಂಧಿತರನ್ನು ಬೇಷಾರತ್ತಾಗಿ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಇದನ್ನೂ ನೋಡಿ : ರೈತ ಕಾರ್ಮಿಕರ ಐಕ್ಯ ಹೋರಾಟ ಇಂದಿನ ಅಗತ್ಯ – ಮೀನಾಕ್ಷಿಸುಂದರಂ Janashakthi Media
