ನವದೆಹಲಿ: ಉದ್ಯಮಿ ಗೌತಮ್ ಅದಾನಿ ಸಮೂಹ ಸಂಸ್ಥೆ ಮೇಲೆ ಕೇಳಿ ಬಂದಿರುವ ಷೇರು ತಿರುಚುವಿಕೆ ಹಾಗೂ ಲೆಕ್ಕೊಪತ್ರ ವಂಚನೆ ಪ್ರಕರಣವನ್ನು ಗಂಭೀರ ತನಿಖೆಗೆ ಒಳಪಡಿಸಬೇಕೆಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ಷೇರು ತಿರುಚುವಿಕೆ ಹಾಗೂ ಲೆಕ್ಕಪತ್ರ ವಂಚನೆ ಕೃತ್ಯದ ಬಗ್ಗೆ ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಬಹಿರಂಗಪಡಿಸಿದೆ.
ಇದನ್ನು ಓದಿ: ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ
ಭಾರತೀಯ ಹಣಕಾಸು ವ್ಯವಸ್ಥೆಯ ಸ್ಥಿರತೆ ಮತ್ತು ಭದ್ರತೆಗೆ ಜವಾಬ್ದಾರರಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಗೌತಮ್ ಅದಾನಿ ವಿರುದ್ಧ ಗಂಭೀರ ತನಿಖೆಯನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜೈರಾಮ್ ರಮೇಶ್, ನರೇಂದ್ರ ಮೋದಿ ಸರ್ಕಾರವು ತಮ್ಮ ನೆಚ್ಚಿನ ವ್ಯಾಪಾರೋದ್ಯಮಿ ಸಂಸ್ಥೆ ಈ ಕೃತ್ಯ ಎಸಗಿದರೂ ಕಣ್ಣು ಮುಚ್ಚಿ ಕುಳಿತಿರುವುದು ಸರಿಯಲ್ಲ. ಕಪ್ಪುಹಣದ ಅವ್ಯವಹಾರಕ್ಕೆ ಬೆಂಬಲಿಸುವ ರೀತಿ ಮೋದಿ ಸರ್ಕಾರವು ತನ್ನ ಸ್ನೇಹಿತ ವ್ಯಾಪಾರ ಗುಂಪಿನ ಅಕ್ರಮ ಚಟುವಟಿಕೆಗಳ ಕಡೆಗೆ ಕಣ್ಣು ಮುಚ್ಚಲು ನಿರ್ಧರಿಸಿದೆಯೇ? ಸೆಬಿ ಈ ಆರೋಪಗಳನ್ನು ಹೆಸರಿಗೆ ಮಾತ್ರವಲ್ಲದೆ ಪೂರ್ಣವಾಗಿ ತನಿಖೆ ಮಾಡುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ಸರ್ಕಾರಿ ನೌಕರರ ಬೃಹತ್ ಪ್ರತಿಭಟನಾ ಪ್ರದರ್ಶನ ಆರಂಭ
ಅದಾನಿ ಸಮೂಹ ಸಂಸ್ಥೆ ಸಾಮಾನ್ಯ ಸಂಘಟಿತ ಸಂಸ್ಥೆಯೇನಲ್ಲ. ಅದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಮಯದಿಂದಲೂ ಅವರ ನಿಕಟ ಮಿತ್ರ ಗೌತಮ್ ಅದಾನಿ ಅವರಾಗಿದ್ದಾರೆ ಎಂದು ಹೇಳಿದರು.
ಮೋದಿ ಸರ್ಕಾರ, ಭಾರತೀಯ ವ್ಯವಹಾರಗಳು ಮತ್ತು ಹಣಕಾಸು ಮಾರುಕಟ್ಟೆಗಳ ಜಾಗತೀಕರಣದ ಯುಗದಲ್ಲಿ ಕಾರ್ಪೊರೇಟ್ ದುರಾಡಳಿತವನ್ನು ಹೇಳುವ ಹಿಂಡೆನ್‌ಬರ್ಗ್ ಮಾದರಿಯ ವರದಿಗಳನ್ನು ಸರಳವಾಗಿ ತಳ್ಳಿಹಾಕಬಹುದು ಮತ್ತು ದುರುದ್ದೇಶಪೂರಿತ ಎಂದು ತಳ್ಳಿಹಾಕಲೂ ಸಹ ಹಿಂಜರಿಯುವುದಿಲ್ಲ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಹಿಂಡನ್‌ಬರ್ಗ್ ವರದಿ ಬಗ್ಗೆ ಅದಾನಿ ಸಮೂಹ ಸಂಸ್ಥೆಯ ಕಾನೂನು ಸಲಹೆಗಾರ ಜತಿನ್ ಜಲುಂಧ್ವಾಲಾ ಪ್ರತಿಕ್ರಿಯಿಸಿದ್ದು, ಈ ಬಗೆಯ ವರದಿಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಹಿಂಡನ್‌ಬರ್ಗ್ ಸಂಸ್ಥೆ ತಾನು ತಮ್ಮ ವರದಿಗಳಿಗೆ ಬದ್ಧವಿರುವುದಾಗಿ ಎಲ್ಲಿ ಬೇಕಾದರೂ ಇದು ಸತ್ಯ ಎಂದು ನಿರೂಪಿಸುತ್ತೇವೆ ಎಂದು ತಿಳಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ