ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ : ಸಸ್ಪೆನ್ಸ್‌ ಆಗಿಯೇ ಉಳಿದ ಕೋಲಾರ ಕ್ಷೇತ್ರ?!

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಇಂದು 42 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಭಾರೀ ಕುತೂಹಲ ಕೆರಳಿಸಿದ್ದ ಉಡುಪಿ ಕ್ಷೇತ್ರದಲ್ಲಿ ಪ್ರಸಾದ್ ರಾಜ್ ಕಾಂಚನ್ ಟಿಕೆಟ್ ಪಡೆದರೆ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಧಾರವಾಡದಲ್ಲಿ ಟಿಕೆಟ್ ಪಡೆದಿದ್ದಾರೆ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ, ಕಲಘಟಕಿ ಕ್ಷೇತ್ರದಿಂದ ಸಂತೋಷ್ ಲಾಡ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಆಯ್ಕೆಗೆ ತೀವೃ ಕಗ್ಗಂಟಾಗಿದ್ದ ಕ್ಷೇತ್ರಗಳಾದ ಗಂಗಾವತಿಗೆ ಇಕ್ಬಾಲ್ ಅನ್ಸಾರಿ, ಬಾದಾಮಿ ಬಿ.ಬಿ. ಚಿಮ್ಮನಕಟ್ಟಿ, ಗುಬ್ಬಿ ಕ್ಷೇತ್ರದಲ್ಲಿ ಎಸ್.ಆರ್.ಶ್ರೀನಿವಾಸ್ ಟಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿವಿಧಾನಸಭಾ ಚುನಾವಣೆ; 124 ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಮೊದಲ ಪಟ್ಟಿ ಬಿಡುಗಡೆ-ವರುಣದಿಂದ ಸಿದ್ದು, ಕನಕಪುರದಿಂದ ಡಿಕೆಶಿ ಸ್ಪರ್ಧೆ

ಹಲವು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಜಟಿಲಗೊಂಡ ಹಿನ್ನೆಲೆಯಲ್ಲಿ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ಆ ಮೂಲಕ ಒಟ್ಟು 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.  ಉಳಿದ ಕ್ಷೇತ್ರಗಳಿಗೆ ಶನಿವಾರದೊಳಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

  • ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ ನೋಡಿ
  • 1. ನಿಪ್ಪಾಣಿ- ಕಾಕಾಸಾಹೇಬ್‌ ಪಾಟೀಲ್
  • 2. ಗೋಕಾಕ್‌-  ಮಹಂತೇಶ್‌ ಕಡಾಡಿ
  • 3. ಕಿತ್ತೂರು- ಬಾಬಾಸಾಹೇಬ್‌ ಬಿ.ಪಾಟೀಲ್
  • 4. ಸೌದತ್ತಿ ಯಲ್ಲಮ್ಮ- ವಿಶ್ವಾಸ್‌ ವಸಂತ್‌ ವೈದ್ಯ
  • 5. ಮುಧೋಳ (ಎಸ್‌ಸಿ)- ರಾಮಪ್ಪ ಬಾಲಪ್ಪ ತಿಮ್ಮಾಪುರ
  • 6. ಬೀಳಗಿ- ಜೆ.ಟಿ. ಪಾಟೀಲ್
  • 7.ಬದಾಮಿ- ಭೀಮಸೇನ್‌ ಬಿ. ಚಿಮ್ಮನಕಟ್ಟಿ
  • 8. ಬಾಗಲಕೋಟೆ – ಹುಲ್ಲಪ್ಪ ವೈ. ಮೇಟಿ
  • 9. ಬಿಜಾಪುರ ನಗರ- ಅಬ್ದುಲ್‌ ಹಮೀದ್‌ ಖಾಜಾಸಾಹೇಬ್ ಮುಶ್ರಿಫ್
  • 10. ನಾಗಠಾಣ (ಎಸ್‌ಸಿ)- ವಿಠ್ಠಲ ಕಟಕದೊಂಡ
  • 11. ಅಫ್ಜಲ್‌ಪುರ – ಎಂ.ವೈ. ಪಾಟೀಲ್
  • 12. ಯಾದಗಿರಿ- ಚನ್ನರೆಡ್ಡಿ ಪಾಟೀಲ್‌ ತುಣ್ಣೂರ್
  • 13. ಗುರಮಿಠ್‌ಕಲ್‌- ಬಾಬುರಾವ್‌ ಚಿಂಚನಸೂರ
  • 14. ಗುಲ್ಬರ್ಗ ದಕ್ಷಿಣ – ಅಲ್ಲಮಪ್ರಭು ಪಾಟೀಲ್
  • 15.ಬಸವಕಲ್ಯಾಣ-ವಿಜಯ್ ಧರಮ್ ಸಿಂಗ್
  • 16.ಗಂಗಾವತಿ-ಇಕ್ಬಾಲ್ ಅನ್ಸಾರಿ
  • 17.ನರಗುಂದ-ಬಿ.ಆರ್.ಯಾವಗಲ್
  • 18. ಧಾರವಾಡ-ವಿನಯ್ ಕುಲಕರ್ಣಿ
  • 19. ಕುಲಘಟಗಿ-ಸಂತೋಷ್ ಎಸ್. ಲಾಡ್
  • 20.ಸಿರ್ಸಿ- ಭೀಮಣ್ಣ ನಾಯ್ಕ್
  • 21. ಯಲ್ಲಾಪುರ-ವಿ.ಎಸ್.ಪಾಟೀಲ್
  • 22. ಕುಡ್ಲಿಗಿ ಎಸ್ಟಿ-ಡಾ.ಶ್ರೀನಿವಾಸ್ ಎಂ.ಟಿ.
  • 23. ಮೊಳಕಾಲ್ಮೂರು-ಎಸ್ಟಿ-ಎನ್.ವೈ. ಗೋಪಾಲಕೃಷ್ಣ
  • 24. ಚಿತ್ರದುರ್ಗ-ಕೆ.ಸಿ.ವೀರೇಂದ್ರ (ಪಪ್ಪಿ)
  • 25. ಹೊಳಲ್ಕೆರೆ ಎಸ್ಸಿ- ಆಂಜನೇಯ ಎಚ್.
  • 26. ಚೆನ್ನಗಿರಿ-ಬಸವರಾಜು ವಿ. ಶಿವಗಂಗ
  • 27. ತೀರ್ಥಹಳ್ಲಿ-ಕಿಮ್ಮನೆ ರತ್ನಾಕರ್
  • 28. ಉಡುಪಿ- ಪ್ರಸಾದ್‌ರಾಜ್ ಕಾಂಚನ್
  • 29. ಕಡೂರು-ಆನಂದ್ ಕೆ.ಎಸ್
  • 30. ತುಮಕೂರು ನಗರ-ಇಕ್ಬಾಲ್ ಅಹ್ಮದ್
  • 31. ಗುಬ್ಬಿ-ಎಸ್.ಆರ್.ಶ್ರೀನಿವಾಸ್
  • 32. ಯಲಹಂಕ- ಕೇಶವ ರಾಜಣ್ಣ ಬಿ.
  • 33.ಯಶವಂತಪುರ-ಸ್.ಬೈರಾಜ್ ಗೌಡ
  • 34. ಮಹಾಲಕ್ಷ್ಮಿ ಲೇ ಔಟ್- ಕೇಶವಮೂರ್ತಿ
  • 35. ಪದ್ಮನಾಭ ನಗರ- ವಿ.ರಘುನಾಥ ನಾಯ್ಡು
  • 36.ಮೇಲುಕೋಟೆ- ಸರ್ವೋದಯ ಪಾರ್ಟಿಯ ದರ್ಷನ್ ಪುಟ್ಟಣ್ಣಯ್ಯ
  • 37. ಮಂಡ್ಯ- ಪಿ.ರವಿಕುಮಾರ್
  • 38. ಕೃಷ್ಣರಾಜಪೇಟೆ-ಬಿ.ಎಲ್.ದೇವರಾಜ್
  • 39. ಬೇಲೂರು-ಬಿ.ಶಿವರಾಮ್
  • 40. ಮಡಿಕೇರಿ- ಡಾ.ಮಂತರ್ ಗೌಡ
  • 41. ಚಾಮುಂಡೇಶ್ವರಿ-ಸಿದ್ದೇಗೌಡ
  • 42. ಕೊಳ್ಳೇಗಾಲ ಎಸ್ಸಿ ಮೀಸಲು- ಎ.ಆರ್.ಕೃಷ್ಣಮೂರ್ತಿ

ವಿಡಿಯೋ ನೋಡಿ: ನನ್ನ ಮತ ಮಾರಾಟಕ್ಕಿಲ್ಲ : ನನ್ನ ಮತ ನನಗಾಗಿ, ರಾಜ್ಯದ ಉಳಿವಿಗಾಗಿ

Donate Janashakthi Media

Leave a Reply

Your email address will not be published. Required fields are marked *