ಕಾಂಗ್ರೆಸ್‌ನ ಎರಡನೇ ಪಟ್ಟಿ ಬಿಡುಗಡೆ: ಮೂರು ರಾಜ್ಯಗಳಲ್ಲಿ ಮಾಜಿ ಸಿಎಂಗಳ ಪುತ್ರರ ಸ್ಪರ್ಧೆ

ನವದೆಹಲಿ : 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟಟು 43 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ಯಾವುದೇ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗಿಲ್ಲ. ಮೊದಲ ಪಟ್ಟಿಯಲ್ಲಿ 39 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಅಸ್ಸಾಂ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 83 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಕಾಂಗ್ರೆಸ್‌

ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‌ನಾಥ್‌ ಪುತ್ರ ನಕುಲ್‌ ನಾಥ್‌, ರಾಜಸ್ಥಾನ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌, ಅಸ್ಸಾಂ ಮಾಜಿ ಸಿಎಂ ತರುಣ್‌ ಗೊಗೊಯ್‌ ಪುತ್ರ ಗೌರವ್‌ ಗೊಗೊಯ್‌ ಅವರಿಗೆ 2ನೇ ಪಟ್ಟಿಯಲ್ಲಿ ಟಿಕೆಟ್‌ ನೀಡಲಾಗಿದೆ. ರಾಜಸ್ಥಾನದ 10 ಕ್ಷೇತ್ರ, ಮಧ್ಯಪ್ರದೇಶದ 10 ಕ್ಷೇತ್ರ , ಅಸ್ಸಾಂನ 13 ಕ್ಷೇತ್ರ, ಗುಜರಾತ್‌ 7, ಉತ್ತರಾಖಂಡದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಪ್ರಕಟಿಸಿದರು.

ಅಸ್ಸಾಂನ ಜೋರ್ಹತ್‌ನಿಂದ ಗೌರವ್‌ ಗೊಗೊಯ್‌ ಕಣಕ್ಕಿಳಿಯಲಿದ್ದಾರೆ. ಹಿಂದಿನ ಎರಡು ಚುನಾವಣೆಗಳಲ್ಲಿ ಕಲಿಯಬೋರ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕ್ಷೇತ್ರ ಮರುವಿಂಗಡಣೆ ಬಳಿಕ ಜೋರ್ಹತ್‌ ಕ್ಷೇತ್ರ ಕಾಜಿರಂಗ ಕ್ಷೇತ್ರದಲ್ಲಿ ವಿಲೀನಗೊಂಡಿದೆ. ಹೀಗಾಗಿ ಅವರು ತಂದೆ ಪ್ರತಿನಿಧಿಸುತ್ತಿದ್ದ ಜೋರ್ಹತ್‌ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಇದನ್ನೂ ಓದಿಲೋಕಸಭಾ ಚುನಾವಣೆ; ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ!

ರಾಜಸ್ಥಾನ ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ಅವರನ್ನು ಜಾಲೋರ್‌ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಕಳೆದ ನಾಲ್ಕು ಚುನಾವಣೆಗಳಿಂದ ಅದು ಬಿಜೆಪಿಯ ಪ್ರಬಲ ನೆಲೆಯಾಗಿದ್ದು, ಹಾಲಿ ಬಿಜೆಪಿ ಸಂಸದ ದೇವ್‌ಜಿ ಪಟೇಲ್ ಅವರು ಕಳೆದ ಮೂರು ಚುನಾವಣೆಗಳಲ್ಲಿ ಇಲ್ಲಿಂದ ಗೆದ್ದಿದ್ದಾರೆ. ಮಧ್ಯಪ್ರದೇಶದ ಚಿಂದ್ವಾರಾ ಕ್ಷೇತ್ರದಿಂದ ಹಾಲಿ ಸಂಸದ ನಕುಲ್‌ನಾಥ್‌ ಸ್ಪರ್ಧೆ ಮಾಡಲಿದ್ದಾರೆ.

ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಚುರು ಸಂಸದ ರಾಹುಲ್‌ ಕಸ್ವಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಮಾಜಿ ಐಪಿಎಸ್‌ ಅಧಿಕಾರಿ ಹರೀಶ್‌ ಮೀನಾ ಅವರು ಟೋಂಕ್‌-ಸವಾಯ್‌ ಮಾಧೋಪುರ್‌, ಬ್ರಿಜೇಂದ್ರ ಓಲಾ ಅವರಿಗೆ ಜುಂಜುನು ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಗುಜರಾತ್‌ನ ಪೋರ್‌ಬಂದರ್‌ ಕ್ಷೇತ್ರದಿಂದ ಮಾಜಿ ಶಾಸಕ ಲಲಿತ್‌ ವಸೋಯ್‌ ಅವರು ಸ್ಪರ್ಧೆ ಮಾಡುತ್ತಿದ್ದು, ಕೇಂದ್ರ ಸಚಿವ ಮನ್ಸುಖ್‌ ಮಾಂಡವೀಯ ಅವರನ್ನು ಎದುರಿಸಲಿದ್ದಾರೆ. ಕಾಂಗ್ರೆಸ್‌

ವಿಡಿಯೋ ನೋಡಿ : ಅಚ್ಚೆದಿನದಿಂದ… ಅಮೃತ ಕಾಲದವರೆಗೆ…! ಚುನಾವಣಾ ಬಾಂಡ್ ಮೂಲಕ ಖಾವೋ, ಖಾನೆ ಮಾಡಿದ ಬಿಜೆಪಿ – ಗುರುರಾಜ ದೇಸಾಯಿ

 

Donate Janashakthi Media

Leave a Reply

Your email address will not be published. Required fields are marked *