ಬೆಂಗಳೂರು,ಮಾ.18:ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣವಿದ್ದು, ರಾಜ್ಯದಲ್ಲಿ ಒಟ್ಟಾರೆ ಕಾಂಗ್ರೆಸ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್ ಬಣವಣ್ಣನ ನಾಡು, ಜಾತ್ಯಾತೀತ ನಾಡು, ಬೀದರ್‌ನಲ್ಲಿ ಜಾತ್ಯಾತೀತ ಜನ ಇದ್ದಾರೆ. ಇಲ್ಲಿ ಹಾಲಿ ಸಂಸದರಾಗಿರುವ ಖೂಬಾ ಅವರ ಸಾಧನೆ ಈ 10 ವರ್ಷಗಳಲ್ಲಿ ಶೂನ್ಯ. ಬಿಜೆಪಿ ಹೈಕಮಾಂಡ್‌ಗೆ ಬಕೆಟ್ ಹಿಡಿದು, ಕಾರ್ಯಕರ್ತರ ವಿರೋಧದ ನಡುವೆಯೂ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸಿನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಇಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ.ಬೀದರ್ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸಾಗರ್ ಕೂಟ ಟಿಕೇಟ್ ಆಕಾಂಕ್ಷಿಯಾಗಿ ಕ್ಷೇತ್ರಾದ್ಯಂತ ಓಡಾಡುತ್ತಿದ್ದಾನೆ.ಇನ್ನು ರಾಜಶೇಖರ್ ಪಾಟೀಲ್ ಎಲೆಕ್ಷನ್ ಗೆ ನಿಲ್ಲಲ್ಲ ಎಂದಿದ್ದರು. ಎಲ್ಲರ ಅಭಿಪ್ರಾಯ ಪಡೆದೆಯೇ ಟಿಕೆಟ್ ಘೋಷಣೆ ಮಾಡುತ್ತಾರೆ ಇಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ವಾತಾವರಣವಿದ್ದು, ಬಿಜೆಪಿಯಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಸೂಲಿಸುತ್ತೇವೆ ಎಂದರು.
ಇದನ್ನೂ ಓದಿ : ಉಚಿತ ಬೆಳಕು ಸುಸ್ಥಿರ ಜೀವನ : ಸಚಿವ ಈಶ್ವರ್ ಖಂಡ್ರೆ
ನನ್ನ ಬಳಿ ಯಾರು ಬಂದು ಮಾಹಿತಿ ತೆಗದುಕೊಂಡಿಲ್ಲ ಎಂಬ ಸಿದ್ದಗಂಗಾ ಶ್ರೀಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಖಂಡ್ರೆ, ಜಾತಿ ಗಣತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವರದಿ ವೈಜ್ಞಾನಿಕವಾಗಿ ಸರ್ವೇ ಆಗಿಲ್ಲ. ಸಿದ್ದಗಂಗಾ ಶ್ರೀಗಳು ಹೇಳಿದ್ದು ಸತ್ಯ. ನನ್ನ ಬಳಿ ಬಂದು ಯಾರು ಮಾಹಿತಿ ಪಡೆದುಕೊಂಡಿಲ್ಲ. ಸರ್ವೇ ನಡೆಯವ ಸಂದರ್ಭದಲ್ಲಿ ನಾನು ಸಚಿವನಾಗಿದ್ದೆ, ನನ್ನ ಮನೆ ಬಳಿ ಯಾರೂ ಬರಲಿಲ್ಲ.ನನಗೆ ಗೊತ್ತಿಲ್ಲ,ಹೊರಗಡೆ ಬಂದು ಹೋಗಿರಬಹುದು ಅಥವಾ ನನ್ನ ಪಿಎ ಬಳಿ ಮಾಹಿತಿ ಪಡೆದುಕೊಂಡು ಹೋಗಿರಬಹುದು.ವರದಿ ಅಂಗೀಕಾರ ವಾಗಿದೆ ಅಷ್ಟೇ. ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಅದರ ಸಾಧಕ- ಬಾಧಕ ಬಗ್ಗೆ ಮೊದಲು ಚರ್ಚೆಯಾಗುತ್ತದೆ. ನಂತರ ವೈಜ್ಞಾನಿಕವಾಗಿ ಮತ್ತೊಮ್ಮೆ ಸರ್ವೇ ಆಗಬೇಕೋ ಬೇಡವೋ ಎಂಬುದನ್ನು ಸಹ ಚರ್ಚಿಸುತ್ತೇವೆ ಎಂದು ಖಂಡ್ರೆ ಹೇಳಿದರು.
ವಿಡಿಯೋ ನೋಡಿ : ಲೋಕಸಭಾ ಚುನಾವಣೆ 2024 : ಏ 19 ರಿಂದ 7 ಹಂತಗಳಲ್ಲಿ ಮತದಾನ