ಲೋಕಸಭಾ ಚುನಾವಣೆ; ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ!

ನವದೆಹಲಿ :ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನ ಮೊದಲ ಪಟ್ಟಿ ಬಿಡುಗಡೆಯಾಗಿದೆ. 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಿದೆ.

ಈ ಕುರಿತು, ದೆಹಲಿಯ ಕೆಪಿಸಿಸಿ ಕಚೇರಿಯಲ್ಲಿ ಅಜಯ್‌ ಮಾಕೇನ್‌ ಹಾಗೂ ಕೆ.ಸಿ ವೇಣುಗೋಪಾಲ್‌ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಯುವ ನ್ಯಾಯ ಕಾಂಗ್ರೆಸ್ ಪಕ್ಷದ ಅತಿದೊಡ್ಡ ಗ್ಯಾರಂಟಿಯಾಗಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದಲ್ಲಿ ಖಾಲಿಯಾಗಿರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.

ಈಗ ಘೋಷಿಸಿರುವ 39 ಟಿಕೆಟ್ ನಲ್ಲಿ 15 ಜನರಲ್ ಕ್ಯಾಟಗರಿ, 24 ಮೈನಾರಿಟಿ, 12 ಜನರು 50 ವರ್ಷಗೊಳಗೆ ಇದ್ದಾರೆ ಎಂದು ಹೇಳಿದರು.

39 ಹುರಿಯಾಳುಗಳು ಯಾರು?

ಡಿಕೆ ಸುರೇಶ್ (ಬೆಂಗಳೂರು ಗ್ರಾಮಾಂತರ)ದಿಂದ ಕಣಕ್ಕೆ ಇಳಿಯಲಿದ್ದಾರೆ. ಅನಂತ ಸ್ವಾಮಿ ಗಡ್ಡದೇವರಮಠ (ಹಾವೇರಿ), ಎಸ್ಪಿ ಮುದ್ದಹನುಮೇಗೌಡ (ತುಮಕೂರು), ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) (ಮಂಡ್ಯ), ಗೀತಾ ಶಿವರಾಜ್ ಕುಮಾರ್ (ಶಿವಮೊಗ್ಗ), ಶ್ರೇಯಸ್ ಪಟೇಲ್ (ಹಾಸನ), ರಾಜು ಅಲಗೂರು (ವಿಜಯಪುರ)

ರಾಜಮೋಹನ್ ಉನ್ನಿಥಾನ್ (ಕಾಸರಗೋಡು), ಕೆ.ಸುಧಾಕರನ್ (ಕಣ್ಣೂರು), ಶಾಫಿ ಪರಂಬಿಲ್ (ವಡಕರ), ರಾಹುಲ್ ಗಾಂಧಿ (ವಯನಾಡ್), ಎಂ.ಕೆ. ರಾಘವನ್ (ಕೋಳಿಕೋಡ್), ವಿ.ಕೆ. ಶ್ರೀಕಂದನ್ (ಪಾಲಕ್ಕಾಡ್), ರಮ್ಯಾ ಹರಿದಾಸ್ (ಆಲತ್ತೂರ್ (SC), ಕೆ. ಮುರಳೀಧರನ್ (ತ್ರಿಶೂರ್), ಬೆನ್ನಿ ಬಹನನ್ (ಚಾಲಕುಡಿ), ಹೈಬಿ ಈಡನ್ (ಎರ್ನಾಕುಲಂ), ಡೀನ್ ಕುರಿಯಾಕೋಸ್ (ಇಡುಕ್ಕಿ), ಕೋಡಿಕುನ್ನಿಲ್ ಸುರೇಶ್ (ಮಾವೇಲಿಕ್ಕರ (SC), ಆಂಟೊ ಆಂಟೋನಿ (ಪತ್ತನಂತಿಟ್ಟ), ಅಡೂರ್ ಪ್ರಕಾಶ್ (ಅಟ್ಟಿಂಗಲ್), ಡಾ. ಶಶಿ ತರೂರ್ (ತಿರುವನಂತಪುರಂ), ಛತ್ತೀಸ್ಗಢದಲ್ಲಿ ಮಾಜಿ ಸಿಎಂ ಭೂಪೇಶ್ ಬಘೇಲ್ ಸೇರಿದಂತೆ 6 ಜನರಿಗೆ ಟಿಕೆಟ್ ನೀಡಲಾಗಿದೆ. ಡಾ. ಶಿವಕುಮಾರ್ ದಹರಿಯಾ (ಜಂಜಗಿರ್ – ಚಂಪಾ (SC), ಜ್ಯೋತ್ಸ್ನಾ ಮಹಂತ್ (ಕೊರ್ಬಾ), ರಾಜೇಂದ್ರ ಸಾಹು (ದುರ್ಗ್), ವಿಕಾಸ್ ಉಪಾಧ್ಯಾಯ (ರಾಯ್ಪುರ), ತಾರಧ್ವಜ್ ಸಾಹು (ಮಹಾಸಮುಂಡ)ಗೆ ಹೆಸರು ಇವೆ.

ತೆಲಂಗಾಣದಿಂದ 4 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ. ಸುರೇಶ್ ಕುಮಾರ್ ಶೆಟ್ಕರ್ (ಜಹೀರಾಬಾದ್), ಸುನೀತಾ ಮಹೇಂದರ್ ರೆಡ್ಡಿ (ಚೇವೆಲ್ಲಾ), ಕುಂದೂರು ರಘುವೀರ್ (ನಲ್ಗೊಂಡ), ಪೋರಿಕ ಬಲರಾಮ್ ನಾಯಕ್ (ಮಹಬೂಬಾಬಾದ್-ST)ಗೆ ಟಿಕೆಟ್ ಘೋಷಿಸಲಾಗಿದೆ. ಜೊತೆಗೆ ಮೊಹಮ್ಮದ್‌ ಹಮ್ದುಲ್ಲಾ ಸೈಯದ್‌ (ಲಕ್ಷದ್ವೀಪ-ST), ವಿನ್ಸೆಂಟ್‌ ಹೆಚ್‌ ಪಾಲಾ (ಶಿಲ್ಲಾಂಗ್-‌ ST, ಮೇಘಾಲಯ), ಸಲೆಂಗ್‌ ಎ ಸಂಗ್ಮಾ (ತುರಾ-ST, ಮೇಘಾಲಯ), ಎಸ್‌ ಸಪಾಂಗ್‌ಮೆರೆನ್‌ ಜಮಿರ್‌ (ನಾಗಾಲ್ಯಾಂಡ್), ಗೋಪಾಲ್‌ ಚೆಟ್ರಿ (ಸಿಕ್ಕಿಂ) ಸ್ಪರ್ಧಿಸಲಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *