ಮಂಗಳೂರು: ನಗರದ ಅಭಿವೃದ್ಧಿ, ಬಜೆಟ್ ನಲ್ಲಿ ಅನುದಾನದ ಕೊರತೆಯ ಕುರಿತು ಚರ್ಚೆ ನಡೆಯುತ್ತಿದೆ. ಐಟಿ ಹಬ್ ಆಗಬೇಕು, ವಿಶ್ವ ಗುರುತಿಸುವ ಪ್ರವಾಸಿ ತಾಣ ಆಗಬೇಕು ಎಂದು ಬಹಳಷ್ಟು ಅಧಿಕೃತ ಸಭೆಗಳು ನಡೆದಿದೆ. ಇಂತಹ ಪ್ರಮುಖ ನಗರ ಮಂಗಳೂರಿನಲ್ಲಿ ಮಾರುಕಟ್ಟೆಗೆ ಗುಣಮಟ್ಟದ ಮಾಂಸ ಪೂರೈಸುವ ಅಧಿಕೃತ ವಧಾಗೃಹ ಇಲ್ಲ ಎಂಬುದು ಚರ್ಚೆಯೇ ಆಗುತ್ತಿಲ್ಲ. ಕುದ್ರೋಳಿಯಲ್ಲಿದ್ದ ನಗರ ಪಾಲಿಕೆ ಅಧೀನದ ಏಕೈಕ ಕಸಾಯಿ ಖಾನೆಯನ್ನು ದುರಸ್ತಿಯ ನೆಪದಲ್ಲಿ ಮುಚ್ಚಿ ನಾಲ್ಕು ವರ್ಷ ಆಯ್ತು ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು. ಮಂಗಳೂರು
ಅಧಿಕೃತ ಕಸಾಯಿ ಖಾನೆ ಇಲ್ಲದ ಮಂಗಳೂರಿನ ಮಾರುಕಟ್ಟೆ, ಹೊಟೇಲುಗಳಿಗೆ ಮಾಂಸ ಪೂರೈಕೆ ಆಗುತ್ತಿರುವುದು ಎಲ್ಲಿಂದ ? ಅದರ ಗುಣಮಟ್ಟದ ಖಾತರಿ ಏನು ? ಪ್ರವಾಸಿಗಳು, ಐಟಿ ಟೆಕ್ಕಿಗಳು ಬರುವಾಗ ಉತ್ತಮ ಗುಣಮಟ್ಟದ ಮಾಂಸಾಹಾರ ಅವರಿಗೆ ಲಭ್ಯ ಇರಬೇಡವೆ? ಎಂದು ಪ್ರಶ್ನಿಸಿದರು. ಮಂಗಳೂರು
ಮಂಗಳೂರಿನ ಬೀಫ್ ಮಾರುಕಟ್ಟೆಯಲ್ಲಿ ವಿಚಾರಿಸುವಾಗ, “ಪಕ್ಕದ ಕೇರಳದ ಕಸಾಯಿ ಖಾನೆಯಿಂದ ಮಾಂಸ ತಂದು ಮಾರಾಟ ಮಾಡುತ್ತಿದ್ದೇವೆ, ವೆಚ್ಚ ಜಾಸ್ತಿ, ಲಾಭ ನಗಣ್ಯ, ಆದರೂ ವ್ಯಾಪಾರ ನಡೆಯುತ್ತಿದೆ” ಎಂದು ಹೇಳುತ್ತಾರೆ. ಕ್ರಾಸ್ ಚೆಕ್ ಮಾಡುವಾಗ ಅದು ನಿಜವೂ ಹೌದು. ಮಂಗಳೂರಿನ ಸುಮಾರು 30 ರಷ್ಟು ಬೀಫ್ ಸ್ಟಾಲ್ ಗಳಿಗೆ ಕಾಸರಗೋಡಿನ ಕಸಾಯಿ ಖಾನೆಯಿಂದ ಮಾಂಸ ಪೂರೈಕೆ ಆಗುತ್ತಿದೆ. ಮಂಗಳೂರು
ಇದನ್ನೂ ಓದಿ: ಗುಂಡಿಯಲ್ಲಿ ಬೈಕ್ ಸವಾರ ಬಿದ್ದು ಮೃತ: ಜಲ್ ಬೋರ್ಡ್‌ನ ಗುತ್ತಿಗೆದಾರನ ಬಂಧನ
ಅಧಿಕೃತ ಕಸಾಯಿ ಖಾನೆ ಇಲ್ಲದೆ ಇರುವುದರಿಂದ ಅಕ್ರಮ ಕಸಾಯಿ ಖಾನೆಗಳೂ ಅಲ್ಲಲ್ಲಿ ತಲೆ ಎತ್ತುತ್ತಿದೆ. ಇದರಿಂದ ನಮಗೂ ಕೆಟ್ಟ ಹೆಸರು. ಅತ್ತ ಲಾಭವೂ ಕಡಿಮೆ, ಇತ್ತ ಅಕ್ರಮ ಕಸಾಯಿ ಕಾನೆಗಳಿಂದ ನಮಗೂ ಕೆಟ್ಟ ಹೆಸರು. ಕುದ್ರೋಳಿ ಕಸಾಯಿ ಖಾನೆ ದುರಸ್ತಿಗೊಂಡರೆ ಸಾಕಿತ್ತು ಎಂದು ಅಳಲು ತೋಡಿಕೊಳ್ಳುತ್ತಾರೆ ಎಂದರು.
ಇನ್ನು ಮಾರುಕಟ್ಟೆಗೆ ಆಡು, ಕುರಿ ಮಾಂಸ ಪೂರೈಕೆ ಹೇಗೆ ಆಗುತ್ತಿದೆ ಎಂಬ ಮಾಹಿತಿ ಇಲ್ಲ. ನಗರ ಪಾಲಿಕೆಯ ಕಸಾಯಿ ಖಾನೆ ಇಲ್ಲದಿರುವುದರಿಂದ ಮಾಂಸದ ಗುಣಮಟ್ಟ ಖಾತರಿ ಪಡಿಸುವುದೂ ಸಾಧ್ಯ ಇಲ್ಲ.
ಮಾಂಸ ವ್ಯಾಪಾರಿಗಳು ಈ ಕುರಿತು ಜನಪ್ರತಿನಿಧಿಗಳು, ರಾಜಕಾರಣಿಗಳ ಹಿಂದೆ ತಿರುಗಿ ಸುಸ್ತಾಗಿದ್ದಾರೆ. ಸ್ಪೀಕರ್ ಯು ಟಿ ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಿಂದ ಹಿಡಿದು ಮುಖ್ಯಮಂತ್ರಿ ಕಚೇರಿಯವರೆಗೆ ಕೇವಲ ಭರವಸೆಗಳು ಮಾತ್ರ ದೊರಕುತ್ತಿದೆ. ಬಜೆಟ್ ನಲ್ಲಿ ಅನುದಾನ ಸಿಗಲಿಲ್ಲ ಎಂದು ಅಳುತ್ತಿರುವ ಬಿಜೆಪಿ ಶಾಸಕರುಗಳಂತೂ ಕಸಾಯಿ ಖಾನೆ ತೆರೆಯುವುದರ ವಿರುದ್ಧ ಇದ್ದಾರೆ. ಅವರಿಗೆ ಗುಣಮಟ್ಟದ ಮಾಂಸ ಪೂರೈಕೆಗಿಂತಲೂ ವಿಭಜನೆಯ ರಾಜಕಾರಣ ಮುಖ್ಯ. ಅಕ್ರಮ ಕಸಾಯಿಖಾನೆ ಹೆಚ್ಚಾದಷ್ಟು ಅವರ ಕೋಮು ರಾಜಕಾರಣಕ್ಕೆ ಪೂರಕವಾಗಿ ಬಳಸಲು ಅನುಕೂಲ ಆಗುತ್ತದೆ ಎಂದು ಹೇಳಿದರು.
ನಾಗರಿಕರಿಗೆ ಗುಣಮಟ್ಟದ ಮಾಂಸ ಪೂರೈಸಲು ಕ್ರಮ ಜರುಗಿಸಬೇಕಾದ ಜನಪ್ರತಿನಿಧಿಗಳು ಈ ಕುರಿತು ಕಾಳಜಿ ವಹಿಸದಿರುವುದು, ಅಕ್ರಮ ಕಸಾಯಿ ಖಾನೆಗಳ ಪರವಾಗಿರುವುದು ಅಚ್ಚರಿಯೆ ಸರಿ ಎಂದರು.
ಮಂಗಳೂರಿಗೆ ಆಧುನಿಕ ವಧಾಗೃಹ ಬೇಕು, ಅದು ತಕ್ಷಣವೇ ಕಾರ್ಯಗತಗೊಳ್ಳಬೇಕು, ಮಾಂಸಾಹಾರಿಗಳಿಗೆ ಗುಣಮಟ್ಟದ ಮಾಂಸ ಮಾರುಕಟ್ಟೆಯಲ್ಲಿ ಲಭ್ಯ ಆಗಬೇಕು ಎಂದು ಮಂಗಳೂರಿನ ನಾಗರಿಕರು ಧ್ವನಿ ಎತ್ತಬೇಕು. ಅಕ್ರಮ ಕಸಾಯಿ ಖಾನೆಗಳಿಗೆ ಕಡಿವಾಣ ಬೀಳಲಿ, ಅತ್ಯಾಧುನಿಕ ಕಸಾಯಿ ಖಾನೆ ಮಂಗಳೂರಿನಲ್ಲಿ ಸ್ಥಾಪನೆಗೊಳ್ಳಲಿ ಎಂದು ತಿಳಿಸಿದರು.
ಇದನ್ನೂ ನೋಡಿ: ಹೆಣ್ಣು ಮಕ್ಕಳ ಕಣ್ಮರೆ – ಸ್ಟ್ಯಾನ್ಲಿ Janashakthi Media
