ಪಂಜಾಬ್ : ಮೋಗಾ ಜಿಲ್ಲೆಯ ಘೋಲಿಯಾ ಖುರ್ದ್ ಗ್ರಾಮದಲ್ಲಿ ಆಯೋಜಿಸಲಾದ ಒಂದು ವಿಶಿಷ್ಟ ಸ್ಪರ್ಧೆ ಎಲ್ಲರ ಗಮನ ಸೆಳೆಯುತ್ತಿದೆ. ಫೋನ್ ನೋಡದೇ ಐದು ನಿಮಿಷವೂ ಇರಲಾಗದ ಈ ಕಾಲದಲ್ಲಿ ಯಾರು ಹೆಚ್ಚು ಸಮಯ ಫೋನ್ ನೋಡದೆ ಇರುತ್ತಾರೋ ಅವರು ಬಹುಮಾನ ಗೆಲ್ಲುತ್ತಾರೆ.
ಸ್ಪರ್ಧೆ ಆಯೋಜಕರಾದ ಕಮಲಪ್ರೀತ್ ಸಿಂಗ್ ಗಿಲ್ ಮಾತನಾಡಿ, ಸ್ಪಲ್ಪ ಬಿಡುವು ಸಿಕ್ಕರೆ ಸಾಕು ಮೊಬೈಲ್ನಲ್ಲೇ ಮುಳುಗಿರುತ್ತಾರೆ. ಮನೆಗೆ ಅತಿಥಿಗಳು ಬಂದಿದ್ದರು ಕ್ಯಾರೇ ಎನ್ನದೆ ಫೋನ್ ವೀಕ್ಷಿಸುವುದರಲ್ಲಿ ನಿರತರಾಗಿರುತ್ತಾರೆ. ಸದ್ಯ ಬಹುತೇಕರು ಯಾವಾಗಲೂ ತಮ್ಮ ಫೋನ್‌ಗೆ ಅಂಟಿಕೊಂಡೇ ಇರುತ್ತಾರೆ. ನಾವು ಈ ಸಮಸ್ಯೆ ಬಗ್ಗೆ ಮೊದಲು ಚರ್ಚಿಸಿದ್ದೆವು. ಇದೀಗ ಸ್ಪರ್ಧೆ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಶಿವಮೊಗ್ಗ | ತಾಜ್ಯ ನಿರ್ವಹಣೆಗೆ ಸಾರ್ವಜನಿಕರು ಸ್ವಚತಾ ಸಿಬ್ಬಂದಿಗೊಂಳಿಗೆ ಕೈ ಜೋಡಿಸಿ – ಸಂಪತ್ ಸಿ ಎಂ
ಗ್ರಾಮಸ್ಥರು ಫೋನ್ ಬಳಸದೇ ಎಷ್ಟು ಸಮಯ ಇರುತ್ತಾರೆಂದು ನೋಡಲು ನಾವು ಬಯಸಿದೆವು. ಅವರು ಸ್ಪರ್ಧೆ ವೇಳೆ ಪುಸ್ತಕ ಓದಬಹುದು ಅಥವಾ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಆದರೆ ಅವರು ಫೋನ್ ನೋಡಬಾರದು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಮತ್ತು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಸ್ಪರ್ಧಿ ವಿಕ್ರಮ್ ಪ್ರತಿಕ್ರಿಯಿಸಿ, ಈ ಸ್ಪರ್ಧೆಯಲ್ಲಿ ಭಾಗವಾಗಲು ಉತ್ಸುಕನಾಗಿದ್ದೇನೆ. ನಾನು ಸಹ ಭಾಗವಹಿಸಿದ್ದೇನೆ ಮತ್ತು ಸ್ಪರ್ಧೆಯನ್ನು ಆನಂದಿಸಿದ್ದೇನೆ ಎಂದರು.
ಇದು ಈಗ ತುಂಬಾ ಅಗತ್ಯ. ಅನೇಕರು ತಮ್ಮ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿಲ್ಲ. ಎಲ್ಲರೂ ತಮ್ಮ ಫೋನ್ ನೋಡುವುದರಲ್ಲಿ ನಿರತರಾಗಿರುತ್ತಾರೆ. ಕುಟುಂಬಸ್ಥರು ಪರಸ್ಪರ ಸಂಭಾಷಣೆ ನಡೆಸುತ್ತಿಲ್ಲ. ಜನರ ಕೈಯಲ್ಲಿ ಫೋನ್‌ಗಳು ಮಾತ್ರ ಇವೆ. ಸದ್ಯ ಈ ಸ್ಪರ್ಧೆ ಬದಲಾವಣೆ ತರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.
ಸ್ಥಳೀಯ ನಿವಾಸಿ ಕಮಲ್ ಪ್ರಸಾದ್ ಮಾತನಾಡಿ, ಫೋನ್‌ನಿಂದ ದೂರವಿರುವುದು ಮಾತ್ರವಲ್ಲದೆ, ಒತ್ತಡವನ್ನು ತಗ್ಗಿಸುವುದು ಮತ್ತು ಡಿಸ್ಟ್ರಕ್ಷನ್ಸ್ ತಪ್ಪಿಸುವುದು ಇದರ ಉದ್ದೇಶವಾಗಿದೆ. ಇದು ಜನರು ಪರಸ್ಪರ ಕುಳಿತು ಮಾತನಾಡಲು ಪ್ರೋತ್ಸಾಹಿಸುತ್ತದೆ. ಜನ ತಮ್ಮ ಫೋನ್‌ಗಳಿಂದ ದೂರವಿರುವುದು ಮತ್ತು ಅವರ ಕುಟುಂಬಸ್ಥರೊಂದಿಗೆ ಸಮಯ ಕಳೆಯುವಂತೆ ಮಾಡುವುದು ಈ ಸ್ಪರ್ಧೆಯ ಮುಖ್ಯ ಗುರಿಯಾಗಿದೆ” ಎಂದು ಹೇಳಿದರು.
ಈ ಪ್ರಯತ್ನವು ಜನರು ತಮ್ಮ ಕುಟುಂಬಸ್ಥರು, ಸ್ನೇಹಿತರೊಂದಿಗೆ ಸ್ವಲ್ಪ ಸಮಯದವರೆಗೆ ಕೈಯಲ್ಲಿ ಫೋನ್ ಇಲ್ಲದೆ ಸಮಯ ಕಳೆಯುವುದನ್ನು ಪ್ರೋತ್ಸಾಹಿಸುತ್ತದೆ ಎಂದು ಸ್ಪರ್ಧೆಯ ಆಯೋಜಕರು ತಿಳಿಸಿದರು.
ಇದನ್ನೂ ನೋಡಿ : ಅಂಗನವಾಡಿ, ಆಶಾ, ಬಿಸಿಯೂಟ ನೌಕರರ ಹೋರಾಟJanashakthi Media
