ಬೆಳಗಾವಿ: ವಕ್ಪ್ ವಿವಾದ ಇಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಹಾನಿ ಮಾಡುತ್ತೇವೆ ಎಂದು ಹೊರಟ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸರಿಯಾಗಿಯೇ ಟಾಂಗ್ ಕೊಟ್ಟಿದೆ. ಇದರ ಬೆನ್ನಲ್ಲೇ ಈ ವರ್ಷ ರಾಜ್ಯದಲ್ಲಿ ಮಳೆಯ ಅತೀವೃಷ್ಟಿಯಿಂದಾಗಿ ಉಂಟಾದ ಬೆಳೆ, ಜೀವಹಾನಿ, ಮನೆ ಹಾನಿ ಸೇರಿದಂತೆ ವಿವಿಧ ಹಾನಿಗೆ ಸಂಬಂಧಿಸಿದಂತೆ ಒಟ್ಟು 297 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಭೂಕುಸಿತ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಎರಡೂವರೆ ವರ್ಷಗಳಲ್ಲಿ 425 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಆದರೆ, ಕೇಂದ್ರ ಸರಕಾರದಿಂದ ಈ ವರ್ಷದ ಎನ್‌ಡಿಆಎಫ್ ಪರಿಹಾರ ಈವರೆಗೂ ಸಂದಾಯವಾಗಿಲ್ಲ,” ಎಂದರು.
ಇದನ್ನೂ ಓದಿ : ವಕ್ಪ್ ವಿವಾದ: ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ
ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಬೆಳೆ ಹಾನಿ ಉದೇಶಕ್ಕೆ ಒಟ್ಟು 297 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಶೇ.75 ರಷ್ಟು ಮಂದಿಗೆ ಪರಿಹಾರ ತಲುಪಿದೆ. ಬಾಕಿ ಉಳಿದವರಿಗೆ 3-4 ದಿನಗಳಲ್ಲಿ ಜಮೆಯಾಗಲಿದೆ,” ಎಂದರು.
ರಸ್ತೆ, ಸೇತುವೆ, ಶಾಲಾ ಕೊಠಡಿ, ಅಂಗನವಾಡಿ, ಆರೋಗ್ಯ ಕೇಂದ್ರ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಪುನರ್‌ಸ್ತಾವನೆಯ ತುರ್ತು ಪರಿಹಾರಕ್ಕಾಗಿ 80.47 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಪೈಕಿ 60.16 ಕೋಟಿ ರೂ. ಬಿಡುಗಡೆಯಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳ ಖಾತೆಯಲ್ಲಿ ತುರ್ತು ಪರಿಹಾರಕ್ಕಾಗಿ 579 ಕೋಟಿ ರೂ. ಲಭ್ಯವಿದೆ. ಪ್ರವಾಹದಿಂದ ಮನೆಗೆ ನೀರು ನುಗ್ಗಿರುವ ಕಡೆ ನಿತ್ಯದ ಖರ್ಚು ನಿಭಾಯಿಸಲು 5,000 ರೂ. ವಿತರಿಸಲಾಗಿದ್ದು, 5.62 ಕೋಟಿ ರೂ. ಬಿಡುಗಡೆಯಾಗಿದೆ,” ಎಂದುಮಾಹಿತಿ ನೀಡಿದರು.
ಇದನ್ನೂ ನೋಡಿ : ಕೋವಿಡ್ ಹಣ ತಿಂದವರನ್ನು ಬಿಡಲ್ಲ: ಡಿಸಿಎಂ ಡಿಕೆ ಶಿವಕುಮಾರ್ Janashakthi Media