ಬರ್ಮಿಂಗ್ ಹ್ಯಾಮ್ : ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 49 ಕೆಜಿ ಸ್ನಾಚ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಬಂಗಾರ ತಂದಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ 49 ಕೆಜಿ ತೂಕ ವಿಭಾಗದಲ್ಲಿ ಏಕಪಕ್ಷೀಯವಾಗಿ ಚಿನ್ನ ಗೆದ್ದಿದ್ದಾರೆ. ಬೇರೆ ದೇಶಗಳ ಆಟಗಾರ್ತಿಯರೂ ಇಂದು ಮೀರಾಬಾಯಿ ಹತ್ತಿರಕ್ಕೂ ಸುಳಿದಿಲ್ಲ. ಅದು ಸ್ನ್ಯಾಚ್ ಆಗಿರಲಿ ಅಥವಾ ಕ್ಲೀನ್ ಮತ್ತು ಜರ್ಕ್ ಆಗಿರಲಿ. ಮೀರಾಬಾಯಿ ಇತರ ಆಟಗಾರ್ತಿಯರಿಗಿಂತ ತುಂಬಾ ಮುಂಚೂಣಿಯಲ್ಲಿದ್ದರು. ಮೀರಾಬಾಯಿ ಸ್ನ್ಯಾಚ್‌ನಲ್ಲಿ 88 ಕೆಜಿ ಭಾರ ಎತ್ತಿದರೆ, ಕ್ಲೀನ್ ಅಂಡ್ ಜರ್ಕ್ ನಲ್ಲಿ ಒಟ್ಟು 113 ಕೆ.ಜಿ. ಭಾರವನ್ನು ಎತ್ತಿದ್ದಾರೆ. ತನ್ಮೂಲಕ ಮೀರಾಬಾಯಿಯ ಒಟ್ಟು ಸ್ಕೋರ್ 201 ಆಗಿತ್ತು. ಅಷ್ಟೇ ಅಲ್ಲ ಕಾಮನ್ ವೆಲ್ತ್ ದಾಖಲೆಯೊಂದಿಗೆ ಮೀರಾಬಾಯಿ ಈ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಹಿಂದಿನ ಸಿಡಬ್ಲ್ಯೂಜಿಯಲ್ಲಿ ಚಿನ್ನ ಗೆದ್ದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಾನು ಬೆಳ್ಳಿ ಗೆದ್ದಿದ್ದರು.
ಭಾರತ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ.
55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸಂಕೇತ್ ಮಹಾದೇವ್ ಸರ್ಗಾರ್ ಬೆಳ್ಳಿ ಪದಕ, 61 ಕೆಜಿ ವಿಭಾಗದಲ್ಲಿ ಕನ್ನಡಿಗ , ಕುಂದಾಪುರ ಮೂಲದ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಶನಿವಾರ ಕಂಚಿನ ಪದಕ ಗೆದ್ದಿದ್ದರು.