ಕರ್ನಾಟಕ ಸರ್ಕಾರವು ಕಾವೇರಿ ನದಿಯ ಪವಿತ್ರತೆಯನ್ನು ಉಲ್ಲೇಖಿಸಿ, ಗಂಗಾ ಆರತಿಯ ಮಾದರಿಯಲ್ಲಿ ‘ಕಾವೇರಿ ಆರತಿ’ ಕಾರ್ಯಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಯೋಜನೆಯು ನದಿಯ ಧಾರ್ಮಿಕ ಮತ್ತು ಸಂಸ್ಕೃತಿಕ ಮಹತ್ವವನ್ನು ಹೆಚ್ಚಿಸುವ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.
ಇದನ್ನು ಓದಿ :-ಕೆಎಸ್ಸಾರ್ಟಿಸಿ ಬಸ್ ಪುನಃ ಓಡಿಸಲು ಪ್ರತಿಭಟನೆ – ಪರ್ಮಿಟ್ ಇದ್ದೂ ಓಡಿಸದ ಖಾಸಗೀ ಬಸ್ ಮಾಲೀಕರ ಪರವಾನಿಗೆ ರದ್ದಿಗೆ ಆಗ್ರಹ
ಈ ಉದ್ದೇಶಕ್ಕಾಗಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಅಧ್ಯಯನ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಹರಿದ್ವಾರ ಮತ್ತು ವಾರಾಣಸಿಯಲ್ಲಿ ನಡೆಯುವ ಗಂಗಾ ಆರತಿಯ ಅನುಭವವನ್ನು ಅಧ್ಯಯನ ಮಾಡಿ, ಕಾವೇರಿ ನದಿಯ ತೀರದಲ್ಲಿ ಆರತಿ ಕಾರ್ಯಕ್ರಮವನ್ನು ಹೇಗೆ ಜಾರಿಗೆ ತರಬಹುದು ಎಂಬ ಬಗ್ಗೆ ಶಿಫಾರಸುಗಳನ್ನು ನೀಡಲಿದೆ. ಈ ಸಮಿತಿಯು ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಹಳೆಯ ಮೈಸೂರು ಪ್ರದೇಶದ ಶಾಸಕರನ್ನು ಒಳಗೊಂಡಿದೆ .
ಆರತಿ ಕಾರ್ಯಕ್ರಮವನ್ನು ಆರಂಭಿಸಲು ನದಿಯ ತೀರದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಲಾಗುವುದು. ಪ್ರಾರಂಭದಲ್ಲಿ ಹರಿದ್ವಾರ ಮತ್ತು ವಾರಾಣಸಿಯಿಂದ ಬಂದ ಸಾಧುಗಳು ಮತ್ತು ಪಂಡಿತರು ಆರತಿ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ವೇದಪಂಡಿತರನ್ನು ತರಬೇತಿ ನೀಡಿ, ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುವ ಯೋಜನೆ ಇದೆ .
ಇದನ್ನು ಓದಿ :-ನಿಶಿಕಾಂತ್ ದುಬೆ ಬೆದರಿಕೆ, ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಅಖಿಲ ಭಾರತ ವಕೀಲರ ಒಕ್ಕೂಟದಿಂದ ಪ್ರತಿಭಟನೆ
ಈ ಕಾರ್ಯಕ್ರಮವು ಕಾವೇರಿ ನದಿಯ ಪವಿತ್ರತೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜೊತೆಗೆ, ರಾಜ್ಯದ ಸಂಸ್ಕೃತಿಕ ಪರಂಪರೆಯನ್ನು ಜಾಗೃತಗೊಳಿಸುವಲ್ಲಿ ಮಹತ್ವಪೂರ್ಣ ಪಾತ್ರವಹಿಸುವ ನಿರೀಕ್ಷೆಯಿದೆ.