ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಮತ್ತೆ ಪರಿಷ್ಕರಿಸಲಾಗಿದೆ. 19 ಕೆ.ಜಿ ಮತ್ತು 5 ಕೆ.ಜಿ ಸಿಲಿಂಡರ್‌ಗಳ ದರದಲ್ಲಿ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 2,253 ರೂಪಾಯಿಯಿಂದ 2355.50 ರೂ.ಗೆ ಹೆಚ್ಚಳವಾಗಿದೆ.
ಇದನ್ನು ಓದಿ: ಇಂದಿನಿಂದ ಎಲ್ಲವೂ ದುಬಾರಿ! ಆಹಾರ-ಆರೋಗ್ಯ-ದಿನಬಳಕೆಯ ಎಲ್ಲದರ ಬೆಲೆಗಳು ಏರಿಕೆ!!
ಮೇ 1ರ (ಇಂದು) ಭಾನುವಾರದಂದು 19 ಕೆ.ಜಿಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 102.50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 2,253 ರೂ.ಗಳಷ್ಟಿದ್ದ ಸಿಲಿಂಡರ್ ಈಗ 2,355.50 ರೂ. ಆಗಿದೆ. ಅಲ್ಲದೇ, 5 ಕೆ.ಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 655 ರೂ. ಇದಕ್ಕೂ ಮುನ್ನ ಏಪ್ರಿಲ್ 1ರಂದು 19 ಕೆ.ಜಿ ಎಲ್‌ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 250 ರೂ ಹೆಚ್ಚಿಸಿ 2,253 ರೂ ಆಗಿತ್ತು. ಮಾರ್ಚ್ 1 ರಂದು 105 ರೂ. ಹೆಚ್ಚಿಸಲಾಗಿತ್ತು.
ಎಲ್‍ಪಿಜಿ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸುವ ಶಿಷ್ಟಾಚಾರವನ್ನು ಅನುಸರಿಸಲಾಗುತ್ತಿದೆ.