ಹಿಂದಿನ ಘಟನೆ ಎಳೆತಂದು ಬಲಪಂಥೀಯರ ಪ್ರತಿಭಟನೆ; ವೀರ್‌ ದಾಸ್‌ ಹಾಸ್ಯ ಕಾರ್ಯಕ್ರಮ ರದ್ದು

ಬೆಂಗಳೂರು: ಒಂದಲ್ಲಾ ಒಂದು ವಿವಾದಗಳನ್ನು ಹುಟ್ಟು ಹಾಕುವ ಬಲಪಂಥೀಯ ಸಂಘಟನೆಗಳು ಯಾವುದಾದರೂ ಒಂದು ವಿಚಾರಗಳನ್ನು ಇಟ್ಟುಕೊಂಡು ಮೇಲೆ ದಾಳಿ ಮಾಡಿ, ಸಾಂಸ್ಕೃತಿಕ ವಲಯವನ್ನು ಹಾಳು ಗೆಡವುತ್ತಿವೆ. ಇದೀಗ ಮತ್ತೆ ಹಿಂದಿನ ಘಟನೆಯನ್ನು ಉಲ್ಲೇಖಿಸಿ ಬೆಂಗಳೂರು ನಗರದಲ್ಲಿ ಆಯೋಜಿಸಲಾಗಿದ್ದ ಹಾಸ್ಯ ಕಾರ್ಯಕ್ರಮ ರದ್ದುಪಡಿಸಲು ಬಲಪಂಥೀಯ ಸಂಘಟನೆ ಪ್ರತಿಭಟನೆ ನಡೆಸಿದೆ. ಹೀಗಾಗಿ, ಇದರಿಂದ ಕಾರ್ಯಕ್ರಮದ ಆಯೋಜಕರು ಹಾಗೂ ಕಾರ್ಯಕ್ರಮದ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ನಿರಾಶೆ ಮೂಡಿಸಿದೆ.

ಮಲ್ಲೇಶ್ವರನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು(ನವೆಂಬರ್‌ 10) ನಡೆಯಬೇಕಿದ್ದ ವೀರ್ ದಾಸ್ ಹಾಸ್ಯ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮ ರದ್ದುಪಡಿಸಬೇಕೆಂದು ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಆಯೋಜಕರು ಕಾರ್ಯಕ್ರಮ ರದ್ದು ಮಾಡುವ ನಿರ್ಧಾರಕ್ಕೆ ಬರಬೇಕಾಯಿತು.

ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿರುವ​​ ವೀರ್​ ದಾಸ್​​ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು ರಾಜ್ಯದಲ್ಲಿ ವೀರ್ ದಾಸ್ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಧಾರ್ಮಿಕ ವಿಚಾರಗಳ ಕುರಿತು, ಮಹಿಳೆಯರ ವಿರುದ್ಧ ಅಪಹಾಸ್ಯ ಮಾಡುತ್ತಿರುವ ವ್ಯಕ್ತಿಗೆ ಇಲ್ಲಿ ಅವಕಾಶ ನೀಡಬಾರದೆಂದು ಆಗ್ರಹಿಸಿದ್ದಾರೆ.

ಸ್ವತಃ ವೀರ್​ ದಾಸ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮ ರದ್ದಾಗಿರುವ ಬಗ್ಗೆ ಸಂದೇಶ ಬರೆದಿದ್ದಾರೆ. ತಪ್ಪಿಸಲಾಗದಂತಹ ಪರಿಸ್ಥಿತಿ ಎದುರಾದ ಹಿನ್ನೆಲೆ ಇಂದು ನಡೆಯಬೇಕಿದ್ದ ಬೆಂಗಳೂರು ಹಾಸ್ಯ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರ ಘೋಷಿಸಲಾಗುವುದು, ದಯವಿಟ್ಟು ಕ್ಷಮಿಸಿ ಎಂದು ಇನ್​ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ವೀರ್‌ ದಾಸ್‌ ಓರ್ವ ಹಾಸ್ಯನಟ. 2005ರಿಂದ ಸ್ಯಾಂಡ್‌ ಆಫ್‌ ಕಾಮಿಡಿ ಮೂಲಕ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಹಾಸ್ಯಕ್ಕಿಂತ ಇವರು ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ಕೆಲ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಇವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿದ್ದವು.

ಹಿಂದೂ ಸಂಘಟನೆಗಳ ವಿರೋಧ

ವೀರ್‌ ದಾಸ್‌ ಅಮೆರಿಕದಲ್ಲಿ ಭಾರತದ ಬಗ್ಗೆ ಅತ್ಯಂತ ಕೆಟ್ಟದಾಗಿ ಹಾಸ್ಯ ಮಾಡಿ ಅವಹೇಳನ ಮಾಡಿದ್ದಾರೆ. ಈ ಕಾರಣಕ್ಕಾಗಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದೇಶದಲ್ಲಿ ಭಾರತದ ಪ್ರಧಾನಿ, ಮಹಿಳೆಯರ ವಿರುದ್ಧ ಮತ್ತು ಭಾರತದ ಘನತೆಯ ಬಗ್ಗೆ ಅತ್ಯಂತ ಕೆಟ್ಟದಾಗಿ ಅಪಮಾನ ಮಾಡಿದ ವ್ಯಕ್ತಿಯ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದಲ್ಲಿ ಅವಕಾಶ ಕೊಡಬಾರದು ಎಂಬುದು ಹಿಂದೂ ಜಾಗರಣ ವೇದಿಕೆಯ ಆರೋಪವಾಗಿದೆ.

ಬಲಪಂಥೀಯ ಸಂಘಟನೆಗಳು, ವಿವಾದಿತ ವ್ಯಕ್ತಿ ಬೆಂಗಳೂರಿನಂತಹ ಅತ್ಯಂತ ಕೋಮು ಸೂಕ್ಚ್ಮ ಪ್ರದೇಶದಲ್ಲಿ ಈ ರೀತಿಯ ವಿವಾದಿತ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಿಯಲ್ಲ. ಕರ್ನಾಟಕದಲ್ಲಿ ಕೋಮು ಘಟನೆಗಳ ಪ್ರಕರಣದಿಂದ ಅನೇಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಎದುರಿಸುತ್ತಿರುವಾಗ ಪುನಃ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂಬ ಆರೋಪಗಳನ್ನು ಹೊರೆಸುವ ಮೂಲಕ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ.

Donate Janashakthi Media

Leave a Reply

Your email address will not be published. Required fields are marked *