ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು 24 ಸಾವಿರ ರೂ.ಯನ್ನು ಶಾಲೆ ಅಭಿವೃದ್ದಿಗೆ ನೀಡಿದ ಮಹಿಳೆ

ರಾಣೆಬೆನ್ನೂರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು 24 ಸಾವಿರ ಹಣವನ್ನು ಶಾಲೆಗೆ ಅಭಿವೃದ್ದಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣವನ್ನು ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಲಗುಬಿಗಿ ಎಂಬುವವರು ಉಳಿಸಿ 24,000ರೂ. ಹಣವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ದಿಗೆ ನೀಡಿದ್ದಾರೆ.ಗಂಗಮ್ಮಳ ಕಾರ್ಯಕ್ಕೆ ಗ್ರಾಮದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಜೆಟ್‌ 2025ರ ಜನ-ವಿರೋಧಿ ಸ್ವರೂಪವನ್ನು ಬದಲಾಯಿಲು ಎಡಪಕ್ಷಗಳ 8-ಅಂಶಗಳ ಪರ್ಯಾಯ ಪ್ರಸ್ತಾವಗಳು

ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂತು. ದೂರದ ಶುದ್ದ ಘಟಕದಿಂದ ನೀರು ತರುತ್ತಿದ್ದರು. ಮಕ್ಕಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಹಣ ನೀಡಿದೆ ಎಂದು ಗಂಗಮ್ಮ ತಿಳಿಸಿದ್ದಾರೆ.

ಇದನ್ನೂ ನೋಡಿ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಂದ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *