ಮಂಡ್ಯ: ಕಳೆದ 10 ದಿನಗಳಿಂದ ಕಾವೇರಿ ಜಲಾಷಯದ ಪ್ರದೇಶದಲ್ಲಿ ಬಾರೀ ಮಳೆಯಾಗಿದ್ದು, ಇದರ ಪರಿಣಾಮ ಕೆಆರ್‌ಎಸ್ ಡ್ಯಾಂ ಹೊರಹರಿವು ಹರಿವ ಜಾಗದಲ್ಲಿ ತಡೆಗೋಡೆ ಕುಸಿದಿದೆ ಎಂದು ತಿಳಿದುಬಂದಿದೆ.
ಹಳೆ ಮೈಸೂರು ಭಾಗದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಕಾವೇರಿ ಒಡಲಾದ ಕೆಆರ್‌ಎಸ್ ಡ್ಯಾಂ ಭರ್ತಿಯ ಅಂಚಿಗೆ ತಲುಪಿದೆ. ಡ್ಯಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರಹರಿವು ಬಿಡಲಾಗುತ್ತಿದೆ. ಈ ನಡುವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೊರಹರಿವು ಹರಿವ ಜಾಗದಲ್ಲಿ ತಡೆಗೋಡೆ ಕುಸಿದಿದೆ. ಮಳೆ
ಇದನ್ನು ಓದಿ : ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಶೀಘ್ರದಲ್ಲೇ ಹೆಚ್ಚಳ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಇತ್ತೀಚೆಗೆ ಕೆಆರ್‌ಎಸ್ ಡ್ಯಾಂನ ನಗುವನ ತೋಟದ ಮುಂದೆ ಇರುವ ಗೇಟ್ ಬಳಿಯ ತಡೆಗೋಡೆಯನ್ನು ತೋಟಕ್ಕೆ ತೊಂದರೆಯಾಗದಿರಲಿ ಎಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿತ್ತು. ಇದೀಗ ಅಧಿಕಾರಿಗಳು ಹಿಂದೆ ಮುಂದೆ ನೋಡದೇ ಆ ಗೇಟ್‌ಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ತಡೆಗೋಡೆ ಕುಸಿದೆ.
ಪರ್ಯಾಯವಾಗಿ ಬೇರೆ ಬೇರೆ ಗೇಟ್‌ಗಳಲ್ಲಿ ನೀರು ಬಿಟ್ಟಿದ್ದರೆ ಈ ಘಟನೆ ಜರುಗುತ್ತಿರಲಿಲ್ಲ. ಈ ತಡೆಗೋಡೆ ಕುಸಿದಿರುವುದರಿಂದ ಸದ್ಯ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಕಾಮಗಾರಿ ನೀರು ಪಾಲಾಗಿದೆ. ಒಂದು ಕಡೆ ಕಾವೇರಿ ಒಡಲು ಭರ್ತಿಯಾಗುತ್ತಿರುವುದು ಸಂತಸ ತಂದರೆ, ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಡೆಗೋಡೆ ಕುಸಿದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇದನ್ನು ನೋಡಿ : ಬಲವಂತದ ಭೂಸ್ವಾಧೀನ ವಿರೋಧಿಸಿ ಹೋರಾಟ : ಸಿಎಂ ಮನೆಗೆ ಹೊರಟಿದ್ದ ರೈತರ ಮೇಲೆ ಪೋಲಿಸ್ ದೌರ್ಜನ್ಯJanashakthi Media