ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ವಿಜಯಕುಮಾರ್‌ ಆತ್ಮಹತ್ಯೆ

ಕೊಯಮತ್ತೂರು: ಕೊಯಮತ್ತೂರು ಡಿಐಜಿ ವಿಜಯಕುಮಾರ್‌ ಐಪಿಎಸ್‌ ಅವರು ಪಾಂಥಯ ಸಲೈನಲ್ಲಿರುವ ತಮ್ಮ ಕ್ಯಾಂಪ್‌ ಕಛೇರಿಯಲ್ಲಿ ಶುಕ್ರವಾರ ಇಂದು ಬೆಳಗ್ಗೆ ನಗರದ ರೆಡ್‌ಫೀಲ್ಡ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಕೊಯಮತ್ತೂರು ವೃತ್ತದ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಸಿ ವಿಜಯಕುಮಾರ್ ಅವರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಕೊಯಮತ್ತೂರು ನಗರದ ರೆಡ್‌ ಫೀಲ್ಡ್ಸ್‌ನಲ್ಲಿರುವ ಅವರ ಕ್ವಾರ್ಟರ್ಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ಅವಾರು, ಬೆಳಗ್ಗೆ 6.15ರ ಸುಮಾರಿಗೆ ತಮ್ಮ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಸಾವಿಗೆ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

ಇದನ್ನೂ ಓದಿ:ಮಂಗಳೂರು: ಗುಂಡು ಹಾರಿಸಿಕೊಂಡು ಪಿಎಸ್ಐ ಆತ್ಮಹತ್ಯೆ ಯತ್ನ

ತೀವ್ರ ಮಾನಸಿಕ  ಖಿನ್ನತೆಗೆ ಒಳಗಾಗಿರುವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಪ್ರಾಥಮಿಕ ತನಿಖೆಯಿಂದ ಮಾಹಿತಿ ತಿಳಿದುಬಂದಿದೆ.  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಅವರಮನೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ವಿಜಯಕುಮಾರ್‌ ಜನವರಿ 6, 2023 ರಂದು ಕೊಯಮತ್ತೂರು ಶ್ರೇಣಿಯ ಪೊಲೀಸ್‌ ಉಪ-ಮಹಾನಿರೀಕ್ಷಕರಾಗಿ (ಡಿಐಜಿ) ಅಧಿಕಾರ ವಹಿಸಿಕೊಂಡಿದ್ದರು.

2009 ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ವಿಜಯಕುಮಾರ್‌ ಅವರು ಕಾಂಚೀಪುರಂ,ಕಡಲೂರು,ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕೊನೆಯ ಪೋಸ್ಟಿಂಗ್‌ ಚೆನೈನಲ್ಲಿದ್ದು, ಅಲ್ಲಿ ಅವರು ಅಣ್ಣಾನಗರದ ಉಪ ಪೊಲೀಸ್‌ ಆಯುಕ್ತರಾಗಿ ಸೇವೆ ಸಲ್ಲಿಸಿದರು.

Donate Janashakthi Media

Leave a Reply

Your email address will not be published. Required fields are marked *