ಮೇಟ್ರೋ| ಬಿಜೆಪಿಯವರು ದರ ಏರಿಕೆಯಾದಾಗ ಸಿಎಂ ಹೋಣೆ; ರಾಜ್ಯ ಸರ್ಕಾರ ದಿವಾಳಿ ಅಂತಾರೆ: ಸಾರಿಗೆ ಸಚಿವ

ಬೆಂಗಳೂರು: ನಗರದ ಮೇಟ್ರೋ ವಿಷಯದಲ್ಲಿ ಒಳ್ಳೆಯದಾದರೆ ಬಿಜೆಪಿಯವರು ಅದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಎನ್ನುತ್ತಾರೆ. ದರ ಏರಿಕೆಯಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಣೆ, ರಾಜ್ಯ ಸರ್ಕಾರ ದಿವಾಳಿಯಾಗಿದೆಯೆಂದರು ನಿರಂತರವಾದ ಅಪಪ್ರಚಾರ ಮಾಡುತ್ತಾರೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ದೇಶದ ಎಲ್ಲಾ ಮೇಟ್ರೋಗಳ ನಿರ್ವಹಣೆಗೆ ರಚಿಸಲಾಗಿರುವ ಸಮಿತಿಗೆ ಕೇಂದ್ರ ನಗರಾಭಿವೃದ್ಧಿ ಕಾರ್ಯದರ್ಶಿಯೇ ಅಧ್ಯಕ್ಷರಿದ್ದಾರೆ. ಬೆಂಗಳೂರು ಮೇಟ್ರೋ ಪ್ರಯಾಣದ ದರ ಪರಿಷ್ಕರಣಾ ಸಮಿತಿಗೆ ನ್ಯಾಯಮೂರ್ತಿ ತಾರಿಣಿ ಅಧ್ಯಕ್ಷರಾಗಿದ್ದಾರೆ. ಕೇಂದ್ರ ಸರ್ಕಾರದ ಐಎಎಸ್‌‍ ಅಧಿಕಾರಿ ಯಶಪಾಲ್‌ ಸಿಂಗ್‌ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ನಿವೃತ್ತ ಐಎಎಸ್‌‍ ಅಧಿಕಾರಿ ರಮಣ ರೆಡ್ಡಿ ಸದಸ್ಯರಾಗಿದ್ದಾರೆ ಎಂದು ವಿವರಿಸಿದರು.

ಸಮಿತಿಯಲ್ಲಿ ಕೇಂದ್ರವನ್ನು ಪ್ರತಿನಿಧಿಸುವ ಇಬ್ಬರು ಪ್ರತಿನಿಧಿಗಳಿದ್ದಾರೆ. ಬಹುಮತದ ಆಧಾರದ ಮೇಲೆ ನಿರ್ಣಯಗಳಾಗುತ್ತವೆ. ದರ ಏರಿಕೆ ನಿರ್ಣಯಾಗಬೇಕಾದರೆ ಕೇಂದ್ರ ಸರ್ಕಾರದವರ ಅಭಿಪ್ರಾಯಗಳು ಬಹುಮಖ್ಯವಾಗಿವೆ. ದರ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವುದು ಕೂಡ ಕೇಂದ್ರ ಸರ್ಕಾರವೇ ಆಗಿದೆ ಎಂದರು.

ಇದನ್ನೂ ಓದಿ: ಸಾಹಿತಿಗಳ ಸಮಾಧಿ ಸಂರಕ್ಷಣೆಗೆ ಆಗ್ರಹ: ಸ್ಮಾರಕ ರೂಪ ನೀಡಲು ಬಿ.ಟಿ. ಲಲಿತಾ ನಾಯಕ್ ಮನವಿ

ಸಮಿತಿ ಮೇಟ್ರೋ ನಿರ್ವಹಣಾ ವೆಚ್ಚ, ಸಾಲ ಮರುಪಾವತಿ ಹಾಗೂ ಇತರ ವೆಚ್ಚಗಳನ್ನು ಪರಿಗಣಿಸಿ ಪ್ರಯಾಣ ದರ ಪರಿಷ್ಕರಣೆ ಮಾಡಿದೆ. ಸತ್ಯ ಕಣ್ಣೆದುರೇ ಇದೆ. ಆದರೂ ಬಿಜೆಪಿಯವರು ರಾಜ್ಯ ಸರ್ಕಾರ ಹೊಣೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.ಬಿಜೆಪಿಯವರಿಗೆ ದಿನನಿತ್ಯ ಒಂದೊಂದು ಸುಳ್ಳು ಹೇಳದೇ ಇದ್ದರೆ ನಿದ್ದೆ ಬರುವುದಿಲ್ಲ. ತಿಂದಿದ್ದು ಜೀರ್ಣವಾಗುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಖಾಲಿ ಟ್ರಂಪ್‌ ಹಿಡಿದು ಪ್ರತಿಭಟನೆ ನಡೆಸುವ ಸಂಸದ ತೇಜಸ್ವಿ ಸೂರ್ಯ ದೊಡ್ಡ ಡ್ರಾಮಾ ಮಾಸ್ಟರ್‌. ರಾಜಕಾರಣ ಬಿಟ್ಟು ಅವರು ನಾಟಕ ಕಂಪನಿ ಸೇರಿಕೊಳ್ಳುವುದು ಒಳ್ಳೆಯದು ಎಂದು ಲೇವಡಿ ಮಾಡಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿ ಬಗ್ಗೆ ರಾಜ್ರದಿಂದ ಗೆದ್ದು ಹೋಗಿರುವ ಸಂಸದರು ಒಮೆಯು ಬಾಯಿಬಿಟ್ಟಿಲ್ಲ. ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದರು ಕೇಂದ್ರ ಸರ್ಕಾರ ಮಾಡಿದ್ದೆ ಸರಿ ಎಂದು ವಾದಿಸುತ್ತಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದರು. ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಹೇಳುವ ಬಿಜೆಪಿಯವರು, ಕೇಂದ್ರ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಾರೆಯೇ ಎಂದು ಸವಾಲು ಹಾಕಿದರು.

ಯುಪಿಎ ಅವಧಿಯಲ್ಲಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿರುವವರೆಗೂ ದೇಶದ ಒಟ್ಟು ಸಾಲ 52 ಲಕ್ಷ ಕೋಟಿ ಮಾತ್ರವಿತ್ತು. ಈಗ ಒಟ್ಟು ಸಾಲದ ಒಟ್ಟು ಪ್ರಮಾಣ 214 ಲಕ್ಷ ಕೋಟಿಯಾಗಿದೆ. ಸ್ವತಂತ್ರ ನಂತರ 2014ರ ವರೆಗೆ ಎಲ್ಲಾ ಸರ್ಕಾರಗಳು 52 ಲಕ್ಷ ಕೋಟಿ ರೂಪಾಯಿ ಮಾತ್ರ ಸಾಲ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 11 ವರ್ಷದಲ್ಲಿ 152 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಇದನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ಬೆಂಗಳೂರು, ಫೆ.9- ಬೆಂಗಳೂರು ಮೇಟ್ರೋ ವಿಷಯದಲ್ಲಿ ಒಳ್ಳೆಯದಾದರೆ ಬಿಜೆಪಿಯವರು ಅದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಎನ್ನುತ್ತಾರೆ. ದರ ಏರಿಕೆಯಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಣೆ, ರಾಜ್ಯ ಸರ್ಕಾರ ದಿವಾಳಿಯಾಗಿದೆಯೆಂದರು ನಿರಂತರವಾದ ಅಪಪ್ರಚಾರ ಮಾಡುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಇದನ್ನೂ ನೋಡಿ: ಫೆ.12 ಸಾರ್ವತ್ರಿಕ ಮುಷ್ಕರ – ಶ್ರಮಜೀವಿಗಳ ಘೋಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *