ಹುಬ್ಬಳ್ಳಿ : ಫೆಬ್ರವರಿ 17 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮುಂದಿನ ತಿಂಗಳ 3 ನೇ ವಾರ ಬಜೆಟ್ ಮಂಡಿಸಲಾಗುವುದು. ಈಗಾಗಲೇ ಬಜೆಟ್ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಏಪ್ರಿಲ್,ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಾರಿ ಸಿಎಂ ಬೊಮ್ಮಾಯಿ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಬೊಮ್ಮಾಯಿ ಅವರು ಮುಂಬರುವ ಬಜೆಟ್ ಗೆ ಸಿದ್ಧತೆ ಆರಂಭಿಸಿದ್ದು, ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನ ಕುರಿತು ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ವಿಶೇಷ ಅನುದಾನದ ನಿರೀಕ್ಷಿಸಬಹುದಾ ಎಂಬ ಪ್ರಶ್ನೆಗೆ ಕಾದುನೋಡಿ ಎನ್ನುವ ಮೂಲಕ ಪರೋಕ್ಷವಾಗಿ ಅನುದಾನ ನೀಡಲಿರುವ ಬಗ್ಗೆ ಮಾತನಾಡಿದರು. ಈ ಹಿಂದೆ ಹುಬ್ಬಳ್ಳಿ ಅಂಕೋಲಾ ಯೋಜನೆ ಜಾರಿಗೆ ಕುರಿತು ಕೇಂದ್ರ ಪರಿಸರ ಇಲಾಖೆ ಸ್ಪಷ್ಟನೆ ಕೇಳಿತ್ತು. ಈಗ ಅದೇ ರೀತಿ ಮಹದಾಯಿ ಯೋಜನೆ ಜಾರಿಗೆ ಕುರಿತು ರಾಜ್ಯದ ಸ್ಪಷ್ಟನೆ ಪರಿಸರ ಇಲಾಖೆ ಕೇಳಿದೆ. ಇದರಲ್ಲಿ ಆತಂಕಪಡುವ ವಿಚಾರವಿಲ್ಲ. ಅವರಿಗೆ ಬೇಕಾದುದನ್ನು ಕೊಡುತ್ತೇವೆ ಎಂದರು.