ಬೆಂಗಳೂರು: ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 13 ರ ರವೀಂದ್ರ ನಗರದಲ್ಲಿ ಅಸಂಘಟಿತ ಕಾರ್ಮಿಕರಾದ ಮನೆಕೆಲಸಗಾರರಿಗೆ “ಅಸಂಘಟಿತರಿಗೆ ಅನ್ನಪೂರ್ಣ ಅಭಿಯಾನ” ದಡಿ ಸಿಐಟಿಯು ವತಿಯಿಂದ 100 ಜನರಿಗೆ ರೇಷನ್ ಕಿಟ್‌ಗಳನ್ನು ಹಂಚಲಾಯಿತು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಇದನ್ನು ಓದಿ: ಮತ್ತೊಮ್ಮೆ ರೈತರಿಗೆ ವಿಶ್ವಾಸಘಾತ-ಏರಿದ ವೆಚ್ಚಗಳನ್ನೂ ಭರಿಸದ ಎಂ.ಎಸ್.ಪಿ.: ಎ.ಐ.ಕೆ.ಎಸ್. ಖಂಡನೆ
ಲಾಕ್‌ಡೌನ್ ಪರಿಣಾಮವಾಗಿ ಉದ್ಯೋಗವಿಲ್ಲದೆ, ಆದಾಯ ಕೊರತೆಯನ್ನು ಎದುರಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಒಂದು ಕಡೆ ರಾಜ್ಯ ಬಿಜೆಪಿ ಸರಕಾರವು ಘೋಷಿಸಿರುವ ಅಲ್ಪ ಪ್ರಮಾಣದ ಪ್ಯಾಕೇಜ್ ಜನತೆಯ ಉತ್ತಮ ಜೀವನ ನಿರ್ವಹಣೆಗಾಗಿ ಏನೇನು ಸಾಕಾಗುವುದಿಲ್ಲ. ಮತ್ತೊಂದೆಡೆ ದೊಡ್ಡ ಪ್ರಮಾಣದ ಕಾರ್ಮಿಕರು ಜೀವನ ನಿರ್ವಹಣೆಗಾಗಿ ಪರಿತಪಿಸುತ್ತಿರುವ ಸಂದರ್ಭ ಎದುರಾಗಿದೆ.
ಹೀಗಾಗಿ ಸಿಐಟಿಯು ಸಂಘಟನೆಯು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ಅಸಂಘಟಿತ ಕಾರ್ಮಿಕರಿಗೆ ವತಿಯಿಂದ ಆಹಾರ ಕಿಟ್ ವಿತರಣೆಯನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಟಿ.ಲೀಲಾವತಿ, ಸಿಐಟಿಯು ಮುಖಂಡ ಹುಳ್ಳಿ ಉಮೇಶ್, ಬೆಂಗಳೂರು ಜಿಲ್ಲಾ ಮನೆಗೆಲಸಗಾರರ ಕಾರ್ಮಿಕ ಸಂಘ, ಉತ್ತರ ವಲಯ ಅಧ್ಯಕ್ಷರಾದ ಸುಶೀಲಮ್ಮ, ಪ್ರಧಾನ ಕಾರ್ಯದರ್ಶಿ ರೇಣುಕ, ಜನವಾದಿ ಮಹಿಳಾ ಸಂಘಟನೆ(ಜೆಎಂಎಸ್) ಜಿಲ್ಲಾ ಮುಖಂಡರಾದ ವಿಜಯಲಕ್ಷ್ಮಿ, ಅಸಂಘಟಿತ ಕಾರ್ಮಿಕರ ಸಂಘಟನೆಯ ಮುಖಂಡರಾದ ವಿನಾಯಕ, ನರಸಿಂಹಯ್ಯ ಮುಂತಾದವರು ಭಾಗವಹಿಸಿದ್ದರು.