ಕುಂದಾಪುರ: ಸಾರಿಗೆ ನೌಕರರ ಒತ್ತಡದ ದುಡಿಮೆಯಿಂದಾಗಿ ಅವರಲ್ಲಿ ಅನಾರೋಗ್ಯ ಹೆಚ್ಚಳವಾಗುತ್ತಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಕಳವಳ ವ್ಯಕ್ತಪಡಿಸಿದರು.
ಅವರು ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ನಡೆದ 48 ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಆಟೋರಿಕ್ಷಾ ಚಾಲಕರು ತಮ್ಮ ಕುಟುಂಬಗಳ ನಿರ್ವಹಣೆ ಗಾಗಿ 12-14 ಘಂಟೆಗಳ ಕಾಲ ದುಡಿಯುತ್ತಿದ್ದಾರೆ ಇದರಿಂದಾಗಿ ಅವರಿಗೆ ಹ್ರದಯಾಘಾತ, ಅನಾರೋಗ್ಯಗಳು ಕಾಡುತ್ತಿದೆ.ಹಿಂದಿನ ಒಂದು ವರ್ಷದಲ್ಲಿ ಸುಮಾರು 11 ಸಾವಿರ ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಆತಂಕವ್ಯಕ್ತ ಪಡಿಸಿದರು.
ಕರ್ನಾಟಕ ರಾಜ್ಯ ಸರಕಾರವು ಸಾರಿಗೆ ನೌಕರರಾಗಿರುವ ಆಟೋರಿಕ್ಷಾ ಚಾಲಕರು,ಬಸ್ಸು ಚಾಲಕರು, ನಿರ್ವಾಹಕರು,ಕ್ಲೀನರ್, ವಾಹನಗಳನ್ನು ದುರಸ್ತಿ ಮಾಡುವ ಮೆಕಾನಿಕ್, ಆಟೋಮೊಬೈಲ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮೋಟಾರು ವಾಹನ ನೌಕರರ ಕಲ್ಯಾಣ ಮಂಡಳಿಗೆ ರಾಜ್ಯ ಪಾಲರು ಅಂಕಿತ ಹಾಕಿರುವುದು ಸಿಐಟಿಯು ಹೋರಾಟಕ್ಕೆ ಸಂದ ಜಯವಾಗಿದೆ ಸರ್ಕಾರ ಕೂಡಲೇ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ರಚನೆ ಆಗಿರುವ ಕಲ್ಯಾಣ ಮಂಡಳಿಯನ್ನು ರಕ್ಷಿಸಿಕೊಳ್ಳಲು ಬಜೆಟ್ ನಲ್ಲಿಯೂ ಅನುದಾನ ನೀಡಲು ಒತ್ತಾಯಿಸಲು ಸಾರಿಗೆ ಸಂಘಟನೆಗಳನ್ನು ಜಿಲ್ಲೆಯಲ್ಲಿ ಬಲಿಷ್ಠ ಗೊಳಿಸಬೇಕು ಸಾರಿಗೆ ನೌಕರರ ಇಂತಹ ಹೋರಾಟಗಳಿಗೆ ಸಿಐಟಿಯು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದರು.
ಮಹಾಸಭೆಯಲ್ಲಿ ಸಿಐಟಿಯು ಮುಖಂಡರಾದ ಎಚ್ ನರಸಿಂಹ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ, ಸಂಘದ ಗೌರವಾಧ್ಯಕ್ಷ ಎಚ್ ಕರುಣಾಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬ್ರಹ್ಮಾವರ ಆಟೋರಿಕ್ಷಾ ಸಂಘದ ಮುಖಂಡರಾದ ಸದಾಶಿವ ಪೂಜಾರಿ ಇದ್ದರು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಮೇಶ್ ವಿ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ವಾರ್ಷಿಕ ವರದಿ ಮಂಡಿಸಿದರು. ಸಂಘದ ಕೋಶಾಧಿಕಾರಿ ಸಂತೋಷ ಕಲ್ಲಾಗರ ಮಂಡಿಸಿದರು.