ವಿಶಾಖಪಟ್ಟಣ : ದೇಶದ ಪ್ರಮುಖ ಕಾರ್ಮಿಕ ಸಂಘಟನೆಯಾದ ಸಿಐಟಿಯುನ 18ನೇ ಅಖಿಲ ಭಾರತ ಸಮ್ಮೇಳನವು ವಿಶಾಖಪಟ್ಟಣದಲ್ಲಿ ಇಂದು (ಡಿಸೆಂಬರ್ 31ರಂದು) ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಒಗ್ಗಟ್ಟಿನ ಮತ್ತು ಉಗ್ರ ಹೋರಾಟಗಳ ಕರೆಯೊಂದಿಗೆ ಪ್ರಾರಂಭವಾಯಿತು.
ಇದನ್ನೂ ಓದಿ : ನವದೆಹಲಿ |ಸೆಂಗಾರ್ಗೆ ಜೀವಾವಧಿ ಶಿಕ್ಷೆಯನ್ನು ಗಲ್ಲಿಗೇರಿಸುವವರೆಗೂ ನಾನು ಇಲ್ಲಿಂದ ಜಾಗ ಖಾಲಿ ಮಾಡಲ್ಲ
ವರ್ಗ ಐಕ್ಯತೆ ಮತ್ತು ಸಮರಧೀರ ಘೋಷಣೆಗಳ ನಡುವೆ ಸಂಘಟನೆಯ ಅಧ್ಯಕ್ಷರಾದ ಡಾ. ಕೆ. ಹೇಮಲತಾ ಸಂಘಟನೆಯ ಬಾವುಟವನ್ನು ಹಾರಿಸುವ ಮೂಲಕ ಕಾರ್ಯಕಲಾಪಗಳು ಪ್ರಾರಂಭವಾದವು, ನಂತರ ಡಾ.ಹೇಮಲತಾ, ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಮತ್ತು ಇತರ ರಾಷ್ಟ್ರೀಯ ಪದಾಧಿಕಾರಿಗಳು ಸೋದರ ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ನಾಯಕರೊಂದಿಗೆ ಹುತಾತ್ಮರ ಸ್ತಂಭಕ್ಕೆ ಪುಷ್ಪನಮನ ಸಲ್ಲಿಸಿದರು.
ವರ್ಗಹೋರಾಟದ ಅದಮ್ಯ ಜ್ಯೋತಿಗಳ ಸಂಕೇತವಾಗಿ ಅಲ್ಲೂರಿ, ಶ್ರೀಕಾಕುಳಂ ಮತ್ತು ನೆಲ್ಲೂರು ಜಿಲ್ಲೆಗಳ ಕಾರ್ಮಿಕರು ಹೊತ್ತೊಯ್ದ ಮೂರು ‘ಅಮರ ಜ್ಯೋತಿ’ಗಳ – ಆಗಮನದಿಂದ ಸಮ್ಮೇಳನದ ಸ್ಥಳದ್ಲಲ್ಲಿ ವಿದ್ಯುತ್‍ಸಂಚಾರವಾದಂತಿತ್ತು. ಉದ್ಘಾಟನಾ ಅಧಿವೇಶನವು ರೋಮಾಂಚಕ ಕ್ರಾಂತಿ ಗೀತೆಗಳೊಂದಿಗೆ ಪ್ರಾರಂಭವಾಯಿತು.

ಇದನ್ನೂ ನೊಡಿ : ಏನಿದು ಪರ್ಯಾಯ ರಾಜಕಾರಣ? ರಾಜ್ಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಸಿಪಿಐ(ಎಂ) Janashakthi Media
