ಟೋಕಿಯೋ ಒಲಿಂಪಿಕ್ಸ್ : ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ಫೈನಲ್​ಗೆ

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಇಂದು ಮುಂಜಾನೆ ನಡೆದ ಜಾವೆಲಿನ್ ಥ್ರೋ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ ಅವರು ಅರ್ಹತೆ ಪಡೆದುಕೊಂಡಿದ್ದಾರೆ.

ಗ್ರೂಪ್ ಎ ಯಲ್ಲಿ ಸ್ಫರ್ದಿಸಿದ ನೀರಜ್ ಮೊದಲ ಪ್ರಯತ್ನದಲ್ಲೇ 86.65 ಮೀಟರ್ ದೂರದ ಸಾಧನೆ ಮಾಡಿದರು. ಈ ವಿಭಾಗದಲ್ಲಿ ವಿಶ್ವದ ನಂಬರ್ ಒನ್ ಜರ್ಮನಿಯ ಜೊಹಾನ್ಸ್ ವೆಟರ್ 82.04 ಮೀಟರ್ ಸಾಧನೆ ಮಾಡಿದರು. ಆದರೆ, ನೀರಜ್ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಪ್ರದರ್ಶನ ತೋರಿ ಫೈನಲ್ ಹಂತಕ್ಕೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ.

 

ಇದೇ ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ನೀರಜ್ ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ಪ್ರವೇಶದ ಸಾಧನೆ ತೋರಿರುವುದು ದೇಶಕ್ಕೆ ಪದಕದ ಆಸೆ ಮೂಡಿಸಿದೆ. ಫೈನಲ್ ಪಂದ್ಯ ಆಗಸ್ಟ್ 7 ರಂದು ನಡೆಯಲಿದ್ದು ಭಾರತ ಮತ್ತೊಂದು ಪದಕದ ನಿರೀಕ್ಷೆಯಲ್ಲಿದೆ.

ನೀರಜ್ ಅವರು ಈ ಹಿಂದೆ ಗೋಲ್ಡ್ಕೋಸ್ಟ್​​ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಮತ್ತು ಜಕಾರ್ತದಲ್ಲಿ ಜರುಗಿದ್ದ ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು.

ಸದ್ಯ ಈ ಭಾರಿಯ ಒಲಿಂಪಿಕ್ಸ್​ನಲ್ಲಿ ಭಾರತದ ಕಡೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬಂದಿಲ್ಲ. ಈವರೆಗೆ ಕೇವಲ ಎರಡು ಪದಕಗಳನ್ನಷ್ಟೆ ಭಾರತ ಬಾಜಿಕೊಂಡಿದೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು (49 ಕೆಜಿ ವಿಭಾಗ) ಭಾರತಕ್ಕೆ ಬೆಳ್ಳಿ ಮೆರಗು ತಂದಿದ್ದಾರೆ. ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಕಂಚು ಗೆದ್ದಿದ್ದಾರೆ.

ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬರ್ಗಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸೆಮಿ ಫೈನಲ್ ಪಂದ್ಯ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *