ಮತದಾರರ ದತ್ತಾಂಶ ಕಳವು: ಚಿಲುಮೆ ಸಂಸ್ಥೆಯ ಮತ್ತೊಬ್ಬ ಆರೋಪಿ ಬಂಧನ; ಬಂಧಿತರ‌ ಸಂಖ್ಯೆ 12ಕ್ಕೆ ಏರಿಕೆ

ಬೆಂಗಳೂರು: ಮತದಾರರ ದತ್ತಾಂಶ ಮಾಹಿತಿ ಕಳವು ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವ ಹಲಸೂರುಗೇಟ್ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಯ ಆಪ್ತ ಎಂದು ತಿಳಿಸಿದ್ದಾರೆ. ಈತ ಪ್ರಮುಖ ಆರೋಪಿ ರವಿಕುಮಾರ್ ಜೊತೆಗಾರ, ಅನಿಲ್ ಎಂಬುವನು. ಇವನು ಮಹದೇವಪುರದಲ್ಲಿ ಚಿಲುಮೆ ಕಚೇರಿಯ ಉಸ್ತುವಾರಿ ವಹಿಸಿಕೊಂಡಿದ್ದನು. ಈ ಮೂಲಕ ಪ್ರಕರಣದಲ್ಲಿ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ.

ಹಲವು ವರ್ಷಗಳಿಂದ ರವಿಕುಮಾರ್ ಜೊತೆ ಗುರುತಿಸಿಕೊಂಡಿದ್ದ ಅನಿಲ್‌ ನೌಕರರ ನೇಮಕ ಹಾಗೂ‌ ಲಾಜಿಸ್ಟಿಕ್ ವರ್ಕ್ ಸೇರಿದಂತೆ ಎಲ್ಲವನ್ನು ತನ್ನ ಅಧೀನದಲ್ಲಿಯೇ ನಡೆಸುತ್ತಿದ್ದವನು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅನಿಲ್ ತಲೆಮರೆಸಿಕೊಂಡಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಬಿಬಿಎಂಪಿ ಅಧಿಕಾರಿಗಳನ್ನು ಮೂರು ದಿನ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಹಿರಿಯ ಅಧಿಕಾರಿಗಳು ಸಹಮತದಲ್ಲೇ ಅವ್ಯವಹಾರ ನಡೆದಿದೆ ಎಂಬ ಮಾಹಿತಿ ಬೆನ್ನಲೇ ಸಂಬಂಧಪಟ್ಟ ಐಎಎಸ್ ಅಧಿಕಾರಿಗಳನ್ನು ನೋಟಿಸು ನೀಡಿ ವಿಚಾರಣೆ ನಡೆಸುವ ಬಗ್ಗೆ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಿದ್ದಾರೆ.

ಪೊಲೀಸ್ ತನಿಖೆಯ ವಶದಲ್ಲಿರುವ ರವಿಕುಮಾರ್ ಚಿಲುಮೆ ಸಂಸ್ಥೆ ಹಾಗೂ ಬ್ಯಾಂಕ್ ಖಾತೆಗಳ ಹಣಕಾಸಿನ ವ್ಯವಹಾರಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ‌. ಆರೋಪಿಗಳ ಖಾತೆಯಿಂದ ಬಿಬಿಎಂಪಿ ಅಧಿಕಾರಿಗಳ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯವಾಗಿದೆ ಎಂಬ ಬಗ್ಗೆಯೂ ಅಧಿಕಾರಿಗಳು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *