ಚೆನ್ನೈ: 1.6 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ 4ನೇ ಆವೃತ್ತಿಯ ಚೆಸ್ಸಬಲ್ ಮಾಸ್ಟರ್ಸ್‌ನ ಸೆಮಿ ಫೈನಲ್ ನಲ್ಲಿ ಅಜೇಯ ಗೆಲುವು ಸಾಧಿಸಿದ್ದ ಡಚ್ ಗ್ರ್ಯಾಂಡ್ ಮಾಸ್ಟರ್ ಅನೀಶ್ ಗಿರಿ ಅವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದ ಭಾರತದ ಕಿರಿಯ ವಯಸ್ಸಿನ ಚೆಸ್ ಆಟಗಾರ ರಮೇಶ್‌ಬಾಬು ಪ್ರಜ್ಞಾನಂದ ಮತ್ತೊಂದು ಮಹತ್ತರವಾದ ಸಾಧನೆ ಮಾಡುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಪ್ರಜ್ಞಾನಂದ ಅವರ ಪಂದ್ಯವು ಬುಧವಾರ ಭಾರತೀಯ ಕಾಲಮಾನ ಬೆಳಗಿನ ಜಾವ 2 ಗಂಟೆಗೆ ಮುಕ್ತಾಯವಾಯಿತು. ಅವರು ಬುಧವಾರ ಬೆಳಗ್ಗೆ ತನ್ನ 11ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದಾರೆ. ಫೈನಲ್ ನಲ್ಲಿ ಚೀನಾದ ವಿಶ್ವ ನಂ. 2 ಆಟಗಾರ ಡಿಂಗ್ ಲಿರೆನ್ ಅವರೊಂದಿಗೆ ಸೆಣಸಾಡಲಿದ್ದಾರೆ.
ಚೆನ್ನೈನ 16 ವರ್ಷ ವಯಸ್ಸಿನ ಪ್ರಜ್ಞಾನಂದ ಡಚ್ ನ ನಂ.1 ಚೆಸ್ ತಾರೆ ಗಿರಿಯವರನ್ನು ಸುಲಭವಾಗಿ ಸೋಲಿಸಿದರು. ಚೀನಾದ ಡಿಂಗ್ ಲಿರೆನ್ ಅವರು ಮತ್ತೊಂದು ಸೆಮಿಫೈನಲ್‌ನಲ್ಲಿ ವಿಶ್ವದ ನಂ. 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
‘ನಾನು ಬೆಳಗ್ಗೆ 8:45 ರ ಸುಮಾರಿಗೆ ಶಾಲೆಯಲ್ಲಿರಬೇಕು. ಈಗ ಸಮಯ ರಾತ್ರಿ 2 ಗಂಟೆಯಾಗಿದೆ. ಆದ್ದರಿಂದ ನಾನು ಹೋಗಿ ಮಲಗಬೇಕು. ಪರೀಕ್ಷೆಯಲ್ಲಿ ನಿದ್ದೆ ಮಾಡದೇ ಇರಲು ಪ್ರಯತ್ನಿಸಬೇಕು. ನನಗೆ ವಾಣಿಜ್ಯ ಪರೀಕ್ಷೆ ಬರೆಯಬೇಕಾಗಿದೆ. ನಾನು ಉತ್ತೀರ್ಣನಾಗುತ್ತೇನೆ ಎಂಬ ವಿಶ್ವಾಸವಿದೆ’’ ಎಂದು 16 ವರ್ಷದ ಪ್ರಜ್ಞಾನಂದ ಫೈನಲ್ ಪ್ರವೇಶಿಸಿದ ಹೇಳಿಕೆ ನೀಡಿದ್ದಾರೆ.