ಹಿಮಾಚಲ ಪ್ರದೇಶ : ನ್ಯಾಯಾಧೀಶರಿಗೇ ಇಬ್ಬರು ಮಹಿಳಾ ಸೈಬರ್ ಸೇರಿಕೊಂಡು ಹೂಡಿಕೆಯ ಹೆಸರಿನಲ್ಲಿ ಸುಮಾರು 6 ಲಕ್ಷ ರೂ. ವಂಚನೆ ಎಸಗಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.
ನ್ಯಾಯಾಂಗ ಅಧಿಕಾರಿಯ ದೂರಿನ ಆಧಾರದ ಮೇಲೆ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬ್ಯಾಂಕ್ ಮತ್ತು ಹಣಕಾಸು ಕಂಪನಿ ಅಧಿಕಾರಿಗಳಂತೆ ನಟಿಸಿ ಇಬ್ಬರು ಮಹಿಳೆಯರು ಇಡೀ ಪಿತೂರಿ ರೂಪಿಸುವ ಮೂಲಕ ನ್ಯಾಯಾಧೀಶರಿಗೆ ಮೋಸ ಮಾಡಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಕೊಲೆ ಪ್ರಕರಣ: ಬೈರತಿ ಬಸವರಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಡಿಸೆಂಬರ್ 2025ರಲ್ಲಿ ನ್ಯಾಯಾಧೀಶರಿಗೆ ಕರೆ ಮಾಡಿದ ಮಹಿಳೆಯೊಬ್ಬರು, ತನ್ನನ್ನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೇ ನಿಮ್ಮ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಅದನ್ನು ಸಕ್ರಿಯಗೊಳಿಸಲು ₹2,360 ಠೇವಣಿ ಇಡಬೇಕಾಗುತ್ತದೆ ಎಂದು ನ್ಯಾಯಾಧೀಶರಿಗೆ ಅನುಮಾನ ಬರದಂತೆ ಸಂವಹನ ನಡೆಸಿದ್ದಾರೆ. ಇದೆಲ್ಲವೂ ನಿಜವೆಂದು ತಿಳಿದ ನ್ಯಾಯಾಧೀಶರು, ಖಾತೆಯಲ್ಲಿ ಠೇವಣಿ ಇಟ್ಟಿದ್ದಾರೆ. ನಂತರ ಅದೇ ಮಹಿಳೆ ಹೂಡಿಕೆ ವಿಷಯ ಪ್ರಸ್ತಾಪಿಸುತ್ತಾ ಇನ್ನಿಲ್ಲದ ಆಮಿಷಗಳನ್ನು ಒಡ್ಡಿದ್ದಾಳೆ. ನಾವು ಹೇಳಿದ ಯೋಜನೆಯಲ್ಲಿ 10,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ಪಡೆಯಬಹುದು ಅಂತೆಲ್ಲ ಭರವಸೆ ನೀಡಿದ್ದಾರೆ. ನಂಬಿಕೆ ಬರುವಂತೆ ಮಾಡಲು ಸೈಬರ್ ಕಳ್ಳರು ನ್ಯಾಯಾಧೀಶರ ಈ 10,000ಗೆ ಉತ್ತಮ ರಿಟರ್ನ್ ಕೂಡ ನೀಡಿದ್ದಾರೆ.
