ರಾಮನಗರ: ಚನ್ನಪಟ್ಟಣ ತಾಲೂಕಿನ ಅಕ್ಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 8 ಮಂದಿ ದರೋಡೆಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರು, ಬೈಕ್ ಗಳನ್ನ ಅಡ್ಡಹಾಕಿ, ಮಾರಕಾಸ್ತ್ರಗಳಿಂದ ವಾಹನ ಸವಾರರ ಬೆದರಿಸಿ ದರೋಡೆ ಮಾಡ್ತಿದ್ದ ಖದೀಮರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಸಂಜಯ್, ಹೇಮಂತ್, ಯೋಗೇಶ್, ನಾಗರಾಜು, ನರಸಿಂಹ, ವಿಕಾಸ್, ಚಿರಂಜೀವಿ, ಪ್ರವೀಣ್ ಬಂಧಿತ ಆರೋಪಿಗಳಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಚನ್ನಪಟ್ಟಣ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ದರೋಡೆ ಮಾಡಲಾಗಿತ್ತು.
ಇದನ್ನು ಓದಿ:ಸ್ಮಾರ್ಟ್ ಮೀಟರ್ ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ
ಕಾರು ಮತ್ತು ಸ್ಕೂಟರ್ ಗಳಲ್ಲಿ ಬಂದ ದರೋಡೆಕೋರರು ಮಾರಕಾಸ್ತ್ರಗಳನ್ನು ತೋರಿಸಿ ಬೈಕ್ ಸವಾರನಿಗೆ ಹಲ್ಲೆ ಮಾಡಿ 20 ಸಾವಿರ ನಗದು, ಮೊಬೈಲ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದರು. ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ತನಿಖೆ ಕೈಗೊಂಡ ಪೊಲೀಸರು 8 ಮಂದಿ ದರೋಡೆಕೋರರ ಬಂಧಿಸಿದ್ದಾರೆ. ಬಂಧಿತರಿಂದ 10ಕ್ಕೂ ಹೆಚ್ಚು ಮಾರಕಾಸ್ತ್ರಗಳು, 5 ಮೊಬೈಲ್, 1 ಕಾರು, 4 ದ್ವಿಚಕ್ರ ವಾಹನ, 40 ಗ್ರಾಂ ಚಿನ್ನ ಹಾಗೂ 15 ಸಾವಿರ ಹಣವನ್ನ ಜಪ್ತಿ ಮಾಡಲಾಗಿದೆ.
ಪ್ರಕರಣದ ಎ1 ಆರೋಪಿ ಸಂಜಯ್ ಬರೋಬ್ಬರಿ 21 ಪ್ರಕರಣದಲ್ಲಿ ಭಾಗಿಯಾಗಿದ್ದು, ಪೊಲೀಸರನ್ನ ಯಾಮಾರಿಸಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸದ್ಯ 8ಮಂದಿ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದನ್ನು ಓದಿ:ಕಾಡುವ ವಲಸಿಗ ಫಿಲಂಗಳು -2 : “ದಿ ಪಾರ್ಟಿ ಈಸ್ ಓವರ್” ಮತ್ತು “ಸಾಮಿಯ”