ಶಿವಮೊಗ್ಗ: ಈ ಲೋಕಸಭಾ ಚುನಾವಣೆಯ ಬಳಿಕ ರಾಜಕಾರಣದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಲಿದ್ದು, ಸರ್ಕಾರ ಬೀಳಲಿದೆ ಅಥವಾ ಬದಲಾವಣೆಯಾಗಲಿದೆ ಎಂದು ಮಾಜಿ ಶಾಸಕ ಕುಮಾರಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.
ಕುಬಟೂರಿನಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆಯಾಗುತ್ತದೆ. ಆದರೆ,ವಿಧಾನಸಭಾ ಚುನಾವಣೆ ಮತ್ತೆ ಆಗಲಾರದು.ಏಕೆಂದರೆ,ಇದರಿಂದ ಜನರ ಮೇಲೆ ಹೊರೆಯಾಗುತ್ತದೆ.
ಕಾಂಗ್ರೆಸ್ ಸರ್ಕಾರ ಐದು ವರ್ಷಕ್ಕೊಂದು ಸಲ ಬಂದು ಷೋಬಿಟ್ಟರೆ ಇನ್ನೇನನ್ನೂ ಮಾಡಲು ಸಾಧ್ಯವಿಲ್ಲ.ಬರೀ ಸುಳ್ಳುಗಳು ಹಾಗೂ ರಾಜಕುಮಾರ್ ಕುಟುಂಬವನ್ನು ರಾಜಕಾರಣಕ್ಕೆ ತಂದಿದ್ದಾರೆ ಎಂದು ಮಾಜಿ ಶಾಸಕ ಕುಮಾರಬಂಗಾರಪ್ಪ ಪರೋಕ್ಷವಾಗಿ ಸಚಿವ ಮಧುಬಂಗಾರಪ್ಪ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದರು.
ಮನೆಯ ಯಜಮಾನರ ಹಣವನ್ನೇ ಪರೋಕ್ಷವಾಗಿ ಮನೆಯ ಹೆಣ್ಣುಮಕ್ಕಳ ತಟ್ಟೆಯಲ್ಲಿ ಹಣಹಾಕುತ್ತಿದ್ದಾರೆ.
ಕರ್ನಾಟಕದ ಪಪ್ಪುಗೆ ಜನರು ಪಾಠ ಕಲಿಸಬೇಕು.
ಆರ್ಥಿಕ ಬಿಕ್ಕಟ್ಟು ಕಾಂಗ್ರೆಸ್ ಸರ್ಕಾರದಿಂದ ಸೃಷ್ಟಿಯಾಗಿದೆ. ಕರ್ನಾಟಕ ಸರ್ಕಾರ ದಿವಾಳಿಯಾಗಿದೆ.ಕೇಂದ್ರ ಸರ್ಕಾರದಿಂದ ಎಷ್ಟೇ ಈ ಸರ್ಕಾರಕ್ಕೆ ಅನುದಾನ ಬಂದರೂ ಇವರಿಗೆ ಸಾಕಾಗುತ್ತಿಲ್ಲ. ಇವರ ಖಜಾನೆ ಬರಿದಾಗಿದೆ ಎಂದರು.
ಈಗಾಗಲೇ ಡಿ.ಕೆ.ಶಿವಕುಮಾರ್ ನಾನೇ ಮುಖ್ಯಮಂತ್ರಿ ಎಂದು ಮುನ್ನುಗುತ್ತಿದ್ದರೆ, ಇತ್ತ ಕಡೆ ಸಿದ್ದರಾಮಯ್ಯರೇ ಮುಂದುವರೆಯುತ್ತಾರೆಂದು ಒಂದು ಗುಂಪು ಹೊರಟಿದೆ.ನಾಳೆಯಿಂದಲೇ ಕರ್ನಾಟಕದ ಸರ್ಕಾರದಲ್ಲಿಬದಲಾವಣೆಯಾಗಲಿದೆ.ಈ ಹಂತದ ಮತದಾನ ಇವತ್ತಿಗೆ ಮುಗಿಯಲೀ.ನಾಳೆಯೇ ಸರ್ಕಾರದಲ್ಲಿ ಒಂದಿಷ್ಟು ಬದಲಾವಣೆಯಾಗಲಿದೆ ಎಂದರು.
ಐದು ವರ್ಷ ಅಲ್ಲ, ಒಂದೇ ವರ್ಷದಲ್ಲಿ ಕಾಂಗ್ರೆಸ್ ಭರವಸೆ ಹುಸಿಯಾಗಿದೆ. ಗ್ಯಾರೆಂಟಿಗಳು ಮುಖ್ಯವಲ್ಲ. ಸಾರ್ವಜನಿಕ ಸಮಸ್ಯೆಗಳಿಗೆ ಗಮನ ಕೊಟ್ಟಿಲ್ಲ.
ಬರ ನಿರ್ವಹಣೆ ಮಾಡುವಲ್ಲಿ ಸರ್ಕಾರ ಎಡವಿದೆ.ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಏನನ್ನೂ ಮಾಡಿಲ್ಲ.ಒಂದೇ ವರ್ಷದಲ್ಲಿ ಸರ್ಕಾರ ಎಡವಿದೆ ಎಂದರು.
ಇದನ್ನೂ ನೋಡಿ: ಪೆನ್ ಡ್ರೈವ್ ಪ್ರಕರಣ : ಮಾಜಿ ಸಿಎಂ ಕುಮಾರಸ್ವಾಮಿ ಮಹತ್ವದ ಸುದ್ದಿಗೋಷ್ಠಿ