ಜೋಳಿಗೆಯೇ ಆಂಬ್ಯುಲೆನ್ಸ್, ಆಟೋಗೆ 2000 ರೂಪಾಯಿ ಬಾಡಿಗೆ

ಚಿಕ್ಕಮಗಳೂರು: ಮಲೆನಾಡಿನ ಪ್ರದೇಶದಲ್ಲಿ ಹೆಚ್ಚಿನದಾಗಿ ಗುಡ್ಡ ಗಾಡು ಇರುವುದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ. ನೋಡುವುದಕ್ಕೂ ಹಸಿರಿನಿಂದ ಕೂಡಿದ್ದು, ವಾತಾವರಣವೂ ಪ್ರಶಾಂತವಾಗಿರುತ್ತದೆ. ಬೇರೆ ಬೇರೆ ಭಾಗದಿಂದ ಜನರು ಸ್ಥಳ ವೀಕ್ಷಿಸಲು ಕಳಸ ಕಡೆ ಬರುತ್ತಾರೆ. ನೋಡಲು ಎಷ್ಟು ಚಂದವೋ ಅಷ್ಟೂ ಸಮಸ್ಯೆಗಳು ಅಲ್ಲಿನ ಜನರು ಎದುರಿಸುತ್ತಿರುವುದನ್ನು ಕೂಡ ಇಲ್ಲಿ ಕಾಣಬಹುದು. ಬಾಡಿಗೆ 

ಮನೆಯಲ್ಲಿ ಯಾರಿಗಾದ್ರೂ ಹುಷಾರು ತಪ್ಪಿದ್ರೆ ಏನ್ ಮಾಡ್ತೀವಿ ಹೇಳಿ? ಇನ್ನೇನು, ಆಸ್ಪತ್ರೆಗೆ ಕರ್ಕೊಂಡ್ ಹೋಗೋದು ಅಲ್ವಾ? ಆದ್ರೆ ಈ ಊರಿನ ಜನರಿಗೆ ಆಸ್ಪತ್ರೆಗೆ ಹೋಗೋಕೆ ಊರಿಗೆ ರಸ್ತೆಗಳೇ ಇಲ್ಲ.!

ಆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಹಿನಾರಿ ಗ್ರಾಮದ ಪರಿಸ್ಥಿತಿ ಇದು. ಆರೋಗ್ಯ ಹದಗೆಟ್ಟು, ಹುಷಾರಿಲ್ಲದಿದ್ದರೆ ಆಸ್ಪತ್ರೆಗೆ ಹೋಗಲು ಜೋಳಿಗೆ ಕಟ್ಟಿ ಹೊತ್ತುಕೊಂಡು ಹೋಗಬೇಕು. ಇಂಥ ಸ್ಥಿತಿಯಲ್ಲಿ ಅಲ್ಲಿನ ಜನಗಳಿದ್ದಾರೆ. ರಾಜ್ಯೋತ್ಸವದ ದಿನವೇ ಈ ಊರಿನ ವೃದ್ಧರೊಬ್ಬರನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿರುವ ಘಟನೆ ನಡೆದಿದೆ.

ಇದನ್ನೂ ಓದಿ:ಮೀಸಲಾತಿ ಸೌಲಭ್ಯ ವಂಚಿತ ಸಮುದಾಯಗಳಲ್ಲಿ ಆದಿವಾಸಿಗಳೇ ಹೆಚ್ಚು

ಖಾಸಗಿ ಜಮೀನುಗಳ ಮೂಲಕವೇ ಓಡಾಟ:

ಕಳಸ ತಾಲೂಕಿನ ಹಿನಾರಿ ಎಂಬ ಈ ಊರಿನಿಂದ 1.5 ಕಿ.ಮೀಗೆ ರಾಜ್ಯ ಹೆದ್ದಾರಿ ಇದ್ರೂ ಬರೋಕೆ ರಸ್ತೆಯಿಲ್ಲದ ಪರಿಸ್ಥಿತಿ ಇದೆ. ಇಲ್ಲಿನ ಮಂದಿ ಖಾಸಗಿ ಜಮೀನುಗಳ ಮೂಲಕವೇ ಓಡಾಟ ನಡೆಸುತ್ತಾರೆ.

ಆಟೋಗೆ 1500-2000 ರೂ. ಬಾಡಿಗೆ:

ಹಿನಾರಿ ಊರಿಗೆ ಇರುವ ರಸ್ತೆಗೆ ಆಟೋಗೆ 1500-2000 ರೂ. ಬಾಡಿಗೆ ಹೇಳ್ತಾರೆ. ಇದರಿಂದ ಆಟೋದವರಿಗೆ ಬಾಡಿಗೆಗೆ ಹೇಳಲು ಸಹ ಅಲ್ಲಿನ ಮುಗ್ಧ ಜನಗಳು ಮುಂದಾಗುವ ಪರಿಸ್ಥಿತಿ ಇಲ್ಲ ಹಿಂಜರಿಯುತ್ತಾರೆ.

ಹೀಗಾಗಿ ಕಳಸ ತಾಲೂಕಿನ ಹಿನಾರಿ ಊರಿನ ಜನರು ಹುಷಾರಿಲ್ಲದವರನ್ನ ಜೋಳಿಗೆಯಲ್ಲೇ ಸಾಗಿಸ್ತಾರೆ. ಇಷ್ಟೇಲ್ಲಾ ಸಮಸ್ಯೆಗಳನ್ನು ಹೊಂದಿರುವ ಈ ಗ್ರಾಮಕ್ಕೆ ಈ ಗ್ರಾಮಸ್ಥರ ಸಮಸ್ಯೆಗೆ ಸಂಬಂದಪಟ್ಟ ಸ್ಥಳೀಯ ಅಧಿಕಾರಿಗಳು ಹಾಗೂ ಸರ್ಕಾರ ಕೂಡಲೇ ಇವರುಗಳು ಸಮಸ್ಯೆಗಳನ್ನು ಪರಿಹರಿಸಬೇಕು. ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಆದಷ್ಟೂ ಬೇಗನೆ ಒದಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಪರಿಹಾರ ಯಾವಾಗ ಸಿಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

ವಿಡಿಯೋ ನೋಡಿ:ಅಭಿನಯಕ್ಕಾಗಿ ಪೌರ ಕಾರ್ಮಿಕನಾದ ಬಾಲಕ – ಒಂದು ದಿನ ಅವರೊಂದಿಗೆ ಸುತ್ತಾಟ Janashakthi Media

Donate Janashakthi Media

Leave a Reply

Your email address will not be published. Required fields are marked *