ಚಾಮರಾಜನಗರ: ಎಲ್ಲಾ ಸಾವುಗಳು ಆಮ್ಲಜನಕ ಕೊರತೆಯಿಂದ ಸಂಭವಿಸಿಲ್ಲ- ಸಚಿವ ಎಸ್‌.ಸುರೇಶ್ ಕುಮಾರ್

ಬೆಂಗಳೂರು: ಚಾಮರಾಜನಗರ ಜಿಲ್ಲೆಗೆ ಪೂರೈಕೆಯಾಗಬೇಕಾದ ನಿಗದಿತ ಪ್ರಮಾಣದ ಆಮ್ಲಜನಕ ಸಕಾಲದಲ್ಲಿ ಪೂರೈಕೆಯಾಗ ಪರಿಣಾಮವಾಗಿ ಈ ರೀತಿಯ ಘಟನೆ ನಡೆದಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಇದನ್ನು ಓದಿ: ಆಕ್ಸಿಜನ್ ಕೊರತೆ ಚಾಮರಾಜನಗರದಲ್ಲಿ 24 ಮಂದಿ ಸಾವು

ಇಂದು ವಿಧಾನಸೌಧದಲ್ಲಿ  ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಚಾಮರಾಜನಗರ ಆಸ್ಪತ್ರೆಯಲ್ಲಿ ಸಂಭವಿಸಿದ 23 ಸಾವುಗಳು ಆಮ್ಲಜನಕ ಕೊರತೆಯಿಂದಲ್ಲ. ಈ ಸಾವಿನ ಒಟ್ಟು ವರದಿಗಳು ನಿನ್ನೆ ಬೆಳಗ್ಗೆ 8.30ರಿಂದ ಇಂದು ಬೆಳಗ್ಗೆಯವರೆಗೆ ದೃಢಪಟ್ಟ ವರದಿಯಾಗಿದೆ ಎಂಬ ಅಂಶ ಮೇಲ್ನೋಟಕ್ಕೆ ತಿಳಿದುಬಂದಿದೆ. ಆಮ್ಲಜನಕ ಕೊರತೆ ಉಂಟಾಗಿದ್ದು ನಿನ್ನೆ ರಾತ್ರಿ 12.30 ರಿಂದ ನಸುಕಿನ 2.30ರ ಒಳಗೆ ಮಾತ್ರ ಎಂದು ಹೇಳಿದರು.

ತಕ್ಷಣದಲ್ಲೇ ಚಾಮರಾಜನಗರಕ್ಕೆ ಭೇಟಿ ನೀಡಿ ಘಟನೆ ಕುರಿತು ವಿವರವಾಗಿ ಪರಿಶೀಲಿಸಲಾಗುವುದು. ಜೊತೆಗೆ ಈ ಸಾವುಗಳಲ್ಲಿ ಆಮ್ಲಜನಕದ ಕೊರತೆಯಿಂದಲೇ ಎಷ್ಟು ಸಂಭವಿಸಿವೆ ಎಂಬುದು ಕಲೆಹಾಕಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನು ಓದಿ: ಕೋವಿಡ್‌ ನಿರ್ವಹಣೆ : ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಲಿದೆ – ಡಾ. ದೇವಿಶೆಟ್ಟಿ ಎಚ್ಚರಿಕೆ

ಜನರಲ್ಲಿ ರೋಗದ ಕುರಿತ ನಿರ್ಲಕ್ಷ್ಯ: ಬಹುತೇಕ ಜನತೆ ಯಾವುದೇ ಪ್ರಾಥಮಿಕ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡುವುದಿಲ್ಲ. ಇನ್ನೇನು ರೋಗವು ಹೆಚ್ಚಿನ ಪರಿಣಾಮ ಬೀರಲಿದೆ ಎಂಬುದು ದೃಢಗೊಂಡಾಗ ಮಾತ್ರ ಆಸ್ಪತ್ರೆಗೆ ಬರುತ್ತಾರೆ. ಸರಕಾರವು ಸಾವುನೋವುಗಳು ಸಂಭವಿಸಿದಂತೆ ಎಲ್ಲರನ್ನು ಉಳಿಸಿವು ಉಳಿಸುವ ಗುರಿ ಹೊಂದಿದ್ದೇವೆ. ಆದರೆ ಪರಿಸ್ಥಿತಿ ಬಿಗಡಾಯಿಸಿದಾಗ ಮಾತ್ರ ಆಸ್ಪತ್ರೆಗೆ ಬರುವವರೇ ಹೆಚ್ಚಾಗಿ ಸಾವನ್ನಪ್ಪಿರುವ ನಿದರ್ಶನಗಳಿವೆ ಎಂದು ಹೇಳಿದರು.

ಚಾಮರಾಜನಗರದಲ್ಲಿನ ಸಾವುಗಳು ನನಗೆ ತೀವ್ರ ಆಘಾತವನ್ನುಂಟಾಗಿದೆ. ಇದು ಕೇವಲ ಸಂಖ್ಯೆಯ ಪ್ರಶ್ನೆಯಲ್ಲ. ಆ ಮನೆಗಳವರಿಗೆ ಆದ ಅಪಾರ ಸಂಕಷ್ಟ ನೋವು ಯಾರಾದರೂ ತುಂಬಿಕೊಡಬಲ್ಲರೆ ಎಂದು ವಿಷಾಧವ್ಯಕ್ತಪಡಿಸಿದರು.

ಘಟನೆ ಸಂಭವಿಸಿದ ಕೂಡಲೇ ರಾಜ್ಯದ ಮುಖ್ಯಕಾರ್ಯದರ್ಶಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ರಾಜ್ಯ ಆಮ್ಲಜನಕ ಪೂರೈಕೆ ಉಸ್ತುವಾರಿ ಅಧಿಕಾರಿ ಡಿಐಜಿ ಪ್ರತಾಪ ರೆಡ್ಡಿಯವರೊಂದಿಗೆ ಸಭೆ ನಡೆಸಿದ್ದು, ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆಯು ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಬೇಕೆಂದು ತಿಳಿಸಿದ್ದೇನೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *