ಸೆಂಟ್ರಲ್ ವಿಸ್ತಾ ಯೋಜನೆ ಸ್ಥಗಿತಗೊಳಿಸಲು ಸುಪ್ರೀಂಗೆ ಅರ್ಜಿ

ನವದೆಹಲಿ: ಕೋವಿಡ್​ ಸಾಂಕ್ರಾಮಿಕ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ ಅತ್ಯಂತ ದೊಡ್ಡ ಯೋಜನೆಯಾದ ಸೆಂಟ್ರಲ್​ ವಿಸ್ತಾ ಯೋಜನೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಅರ್ಜಿಯನ್ನು ಆಲಿಸಲು ಸುಪ್ರೀಂಕೋರ್ಟ್ ಸಮ್ಮತ್ತಿಸಿದೆ ಮತ್ತು ದಿನಾಂಕವನ್ನು ನಿರ್ಧರಿಸುವುದಾಗಿ ನ್ಯಾಯಾಲಯ ಹೇಳಿದೆ.

ಇದನ್ನು ಓದಿ: ಅಧಿಕಾರಿಗಳನ್ನು ಜೈಲಿಗೆ ಹಾಕಿದರೆ ಆಮ್ಲಜನಕ ಬರುವುದೆ: ಸುಪ್ರೀಂ ಕೋರ್ಟ್‌

ದೇಶದಲ್ಲಿ ಸಾವಿರಾರು ಜನರನ್ನು ಸಾವಿಗೆ ಕಾರಣವಾಗುತ್ತಿರುವ ಕೋವಿಡ್‌ ಸಾಂಕ್ರಾಮಿಕ ರೋಗವು ದೇಶದ ಆರೋಗ್ಯ ವ್ಯವಸ್ಥೆಯನ್ನು ತೀವ್ರವಾಗಿ ಕುಂಠಿತಗೊಳಿಸಿದೆ.  ಈ ಸಂದರ್ಭದಲ್ಲಿಯೂ ಕೇಂದ್ರ ಸರಕಾರ ಸೆಂಟ್ರಲ್‌ ವಿಸ್ತಾ ಯೋಜನೆ ಮಾಡಲೇಬೇಕೆಂದು ಮುಂದಾಗಿರುವುದರ ವಿರುದ್ಧ ಪ್ರತಿಪಕ್ಷಗಳು ಮತ್ತು ಕಾರ್ಯಕರ್ತರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ದೇಶದ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿ ಸುಮಾರು ₹ 20,000 ಕೋಟಿ ಯೋಜನೆಯನ್ನು “ಅಗತ್ಯ ಸೇವೆಗಳ” ವ್ಯಾಪ್ತಿಗೆ ತರಲಾಗಿದೆ, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನು ಓದಿ: ಆಮ್ಲಜನಕ ಕೊರತೆ-ಇದು ನರಮೇಧಕ್ಕೆ ಸಮ: ಅಲಹಾಬಾದ್‌ ಹೈಕೋರ್ಟ್‌

ದೆಹಲಿಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಕಾರ್ಮಿಕರಿಗೆ ಸ್ಥಳದಲ್ಲೇ ವಸತಿ ಕಲ್ಪಿಸಲಾಗಿರುವ ನಿರ್ಮಾಣ ಸ್ಥಳಗಳಲ್ಲಿ ನಿರ್ಮಾಣ ಕಾರ್ಯಕ್ಕೆ ಅನುಮತಿ ಇದೆ. ಆದರೆ ಕಳೆದ ವಾರ ಎನ್‌ಡಿಟಿವಿ ಸ್ಥಳದಲ್ಲಿ ಗ್ರೌಂಡ್‌ ರಿಪೋರ್ಟ್‌ ಪ್ರಕಾರ ಇಲ್ಲಿನ ಕಾಮಗಾರಿ ಸ್ಥಳಕ್ಕೆ ಹೆಚ್ಚಿನ ಕಾರ್ಮಿಕರು ಉಳಿದುಕೊಂಡಿರುವುದಿಲ್ಲ ಬದಲಾಗಿ ದೂರದ 16 ಕಿಲೋಮೀಟರ್ ನಿಂದ ದೆಹಲಿಯ ಒಂದು ಭಾಗದಿಂದ ಬರುತ್ತಿರುವುದು ಕಂಡುಬಂದಿದೆ.

ನೆನ್ನೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜೀವನಾಧಾರದಲ್ಲಿ ಹೊರಡಿಸಿದ ಆದೇಶಗಳಿಗೆ ಅನುಸಾರವಾಗಿ ಸೆಂಟ್ರಲ್ ವಿಸ್ಟಾ ಅವೆನ್ಯೂ ಪುನರಾಭಿವೃದ್ಧಿ ಯೋಜನೆಯ ಎಲ್ಲ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ದೇಶನ ಕೋರಿ ಸಲ್ಲಿಸಿರುವ ಮನವಿಯನ್ನು ಮೇ 17 ರಂದು ವಿವರವಾಗಿ ಕೇಳಲಾಗುವುದು ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *